5 ವರ್ಷದಿಂದ ಜಿಎಸ್‌ಟಿ ಕಟ್ಟದೆ ಮೋಸ ; ರಾತ್ರೋ ರಾತ್ರಿ ಅದಾನಿ ಗ್ರೂಪ್​​ ಮೇಲೆ ರೇಡ್​

09-02-23 05:31 pm       HK News Desk   ದೇಶ - ವಿದೇಶ

ಜಿಎಸ್‌ಟಿ ಜಮಾ ಮಾಡಿಲ್ಲ ಎಂಬ ಆರೋಪದಡಿ ಗೌತಮ್​ ಅದಾನಿ ಒಡೆತನದ ಅದಾನಿ ಕಂಪನಿ ಮೇಲೆ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯ ತೆರಿಗೆ ಇಲಾಖೆಯು ಪರ್ವಾನೂರಿನಲ್ಲಿರುವ ಅದಾನಿ ಕಂಪನಿ ಮೇಲೆ ದಾಳಿ ಮಾಡಿದೆ.

ಹಿಮಾಚಲ, ಫೆ.9: ಜಿಎಸ್‌ಟಿ ಜಮಾ ಮಾಡಿಲ್ಲ ಎಂಬ ಆರೋಪದಡಿ ಗೌತಮ್​ ಅದಾನಿ ಒಡೆತನದ ಅದಾನಿ ಕಂಪನಿ ಮೇಲೆ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯ ತೆರಿಗೆ ಇಲಾಖೆಯು ಪರ್ವಾನೂರಿನಲ್ಲಿರುವ ಅದಾನಿ ಕಂಪನಿ ಮೇಲೆ ದಾಳಿ ಮಾಡಿದೆ.

ಬುಧವಾರದಂದು ರಾತ್ರಿ ವೇಳೆ ಹಿಮಾಚಲ ಪ್ರದೇಶದಲ್ಲಿರುವ ಅದಾನಿ ವಿಲ್ಮಾರ್ ಗ್ರೂಪ್​ನ ಸಿ ಆಯಂಡ್​ ಎಫ್​ ಸ್ಟೋರ್​ಗಳ ಮೇಲೆ ​ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಕಳೆದ 5 ವರ್ಷದಿಂದ ಸರಕು ಮತ್ತು ಸೇವಾ ತೆರಿಗೆಯನ್ನು ಜಮಾ ಮಾಡಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.

I-T dept raids Kolkata-based tower manufacturing company, unearths Rs 250  crore unaccounted income

ಇದು ಕಾಂಗ್ರೆಸ್​ ನಡೆಸಿದ ದಾಳಿಯೇ?

ಅಬಕಾರಿ ಇಲಾಖೆ ಮತ್ತು ತೆರಿಗೆ ಇಲಾಖೆ ತಂಡವು ದಾಳಿ ಮಾಡುವ ಮೂಲಕ ಮೊದಲಿಗೆ ಗೋದಾಮಿನಲ್ಲಿರುವ ದಾಸ್ತಾನು ಮತ್ತು ದಾಖಲೆಯನ್ನು ಪರಿಶೀಲಿಸಿದ್ದಾರೆ.ಹಿಮಾಚಲ ಪ್ರದೇಶದಲ್ಲಿರುವ ಅದಾನಿ ಒಡೆತನದ ಏಳು ಕಂಪನಿಗಳಿವೆ. ಅವುಗಳಲ್ಲಿ ಹಣ್ಣುಗಳ ಕೋಲ್ಡ್​​ ಸ್ಟೋರ್​​ಗಳಿಂದ ಹಿಡಿದು, ದಿನಸಿ ಅಂಗಡಿಯವರೆಗಿನ ಸಾಮಾಗ್ರಿಗಳಿವೆ.ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬಳಿ ಅದಾನಿ ಕಂಪನಿ ಮೇಲೆ ನಡೆಸಿದ ಮೊದಲ ದಾಳಿ ಇದಾಗಿದೆ.

Locals ransack Adani office in Odisha's Talgachhia, attack staff- The New  Indian Express

8 ಲಕ್ಷ ಕೋಟಿ ನಷ್ಟ ; 

ಇತ್ತೀಚೆಗೆ ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಸಂಪತ್ತು ನೆಲಕಚ್ಚಿತ್ತು. ಕೇವಲ ಎರಡು ವಾರಗಳಲ್ಲಿ ದೊಡ್ಡ ನಷ್ಟ ಅನುಭವಿಸಿತ್ತು. 8 ಲಕ್ಷ ಕೋಟಿ ನಷ್ಟ ಹೊಂದಿದ್ದರು. ಈ ಬಗ್ಗೆ ಪಾರ್ಲಿಮೆಂಟ್​ನಲ್ಲೂ ಚರ್ಚೆ ನಡೆದಿತ್ತು. ರಾಹುಲ್​ಗಾಂಧಿಯವರು ಲೋಕಸಭೆಯಲ್ಲಿ ಗೌತಮ್​ ಅದಾನಿ ಮತ್ತು ಮೋದಿ ಸ್ನೇಹದ ಬಗ್ಗೆ ವಾಗ್ವಾದ ನಡೆಸಿದ್ದರು. ಅನೇಕ ವರ್ಷದಿಂದಲೂ ಮೋದಿಗೆ ಗೌತಮ್ ಅದಾನಿ ಜೊತೆಗೆ ಸಂಪರ್ಕ ಇತ್ತು ಎಂದು ಹೇಳಿದ್ದರು. ಜೊತೆಗೆ ಕೆಲವು ಫೋಟೋ ಸಾಕ್ಷಾಧಾರಗಳನ್ನು ತೋರಿಸಿದ್ದರು.

In another major development, the Adani Wilmar Group has reportedly been raided by the State Excise and Taxation department. As per media reports, the GST officials have visited the offices of Adani Wilmar Group over allegations of GST violations. As per Times Now, the raid on Adani Wilmar Group was carried out following allegations of not depositing GST. Further, the officials are reportedly seeking information about input tax credit claims of the company with respect to state operations.