ಖಾದ್ಯ ತೈಲ ಕಾರ್ಖಾನೆಯಲ್ಲಿ ದುರಂತ ; ಟ್ಯಾಂಕ್ ಕ್ಲೀನ್ ಮಾಡುತ್ತಿದ್ದ ಏಳು ಮಂದಿ ಸಾವು 

09-02-23 05:01 pm       HK News Desk   ದೇಶ - ವಿದೇಶ

ಖಾದ್ಯ ತೈಲ ತಯಾರಿ ಕಾರ್ಖಾನೆಯ ಶೇಖರಣಾ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವ ವೇಳೆ ಏಳು ಮಂದಿ ಕಾರ್ಮಿಕರು ಉಸಿರುಕಟ್ಟಿ ಮೃತಪಟ್ಟ ಘಟನೆ ನಡೆದಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಅಮರಾವತಿ, ಫೆ.9 : ಖಾದ್ಯ ತೈಲ ತಯಾರಿ ಕಾರ್ಖಾನೆಯ ಶೇಖರಣಾ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವ ವೇಳೆ ಏಳು ಮಂದಿ ಕಾರ್ಮಿಕರು ಉಸಿರುಕಟ್ಟಿ ಮೃತಪಟ್ಟ ಘಟನೆ ನಡೆದಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಆಂಧ್ರಪ್ರದೇಶದ ಅಮರಾವತಿ ಜಿಲ್ಲೆಯ ಪೆದ್ದಾಪುರಂ ಮಂಡಲದ ಜಿ.ರಾಗಂಪೇಟೆಯಲ್ಲಿರುವ ಅಂಬಟಿ ಸುಬ್ಬಣ್ಣ ಎಣ್ಣೆ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಕಾರ್ಮಿಕರು 24 ಅಡಿ ಆಳದ ತೈಲ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಇಳಿದಿದ್ದು ಈ ವೇಳೆ ವಿಷಕಾರಿ ಅನಿಲವನ್ನು ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಾಡೇರು ನಿವಾಸಿಗಳಾಗಿದ್ದು, ಇಬ್ಬರು ಅದೇ ಮಂಡಲದ ಪುಲಿಮೇರು ಗ್ರಾಮದವರು ಎಂದು ತಿಳಿದುಬಂದಿದೆ. ಏಳು ಮಂದಿ ಸಾವನ್ನಪ್ಪಿದ್ದಲ್ಲದೇ ಇನ್ನೂ ಹಲವರು ಉಸಿರಾಟದ ತೊದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಘಟನೆ ಬಗ್ಗೆ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಖಾನೆ ಆಡಳಿತ ಮಂಡಳಿ ಅಗತ್ಯ ಮುಂಜಾಗ್ರತೆ ವಹಿಸದಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರವೀಂದ್ರನಾಥ ಬಾಬು, ಜಿಲ್ಲಾಧಿಕಾರಿ ಕೃತಿಕಾ ಶುಕ್ಲ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

As many as seven labourers died, while several others has been hospitalised after inhaling gas while cleaning tankers of an edible oil manufacturing company in Ragampeta village in Andhra Pradesh’s Kakinada on Thursday. The incident occurred in the premises of Ambati Subbanna oil factory at G. Ragampeta in Peddapuram mandal of the district. The workers had entered a 24-feet deep oil tanker one by one to clean it and suffocated to death.