iPhone ನಿಂದ ಚಿತ್ರೀಕರಣಗೊಂಡ ಸಿನಿಮಾ 'ಫುರಸತ್' ; APPLE ಸಿಇಒ ಶಾಕ್, ಯೂಟ್ಯೂಬ್​​​ ಲಿಂಕ್​​​​ ಹಂಚಿಕೊಂಡ ಕುಕ್ 

07-02-23 01:36 pm       HK News Desk   ದೇಶ - ವಿದೇಶ

ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಫೋನ್ ತಯಾರಕ ಕಂಪನಿ ಆ್ಯಪಲ್ ಕಳೆದ ವರ್ಷ ಆ್ಯಪಲ್ ಐಫೋನ್ 14 ಪ್ರೊ ಬಿಡುಗಡೆ ಮಾಡಿದೆ. ಇದರ ಬೆಲೆ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು. ಅತ್ಯುತ್ತಮ ಫೋಟೊಗ್ರಫಿಯ ವೈಶಿಷ್ಟ್ಯ ಹೊಂದಿರುವುದು iPhone 14 Pro ನ ವಿಶೇಷವಾಗಿದೆ.

ಮುಂಬೈ, ಫೆ.7 : ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಫೋನ್ ತಯಾರಕ ಕಂಪನಿ ಆ್ಯಪಲ್ ಕಳೆದ ವರ್ಷ ಆ್ಯಪಲ್ ಐಫೋನ್ 14 ಪ್ರೊ ಬಿಡುಗಡೆ ಮಾಡಿದೆ. ಇದರ ಬೆಲೆ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು. ಅತ್ಯುತ್ತಮ ಫೋಟೊಗ್ರಫಿಯ ವೈಶಿಷ್ಟ್ಯ ಹೊಂದಿರುವುದು iPhone 14 Pro ನ ವಿಶೇಷವಾಗಿದೆ. ಈಗ ಮತ್ತೂ ವಿಶೇಷವೆಂದರೆ ಇದೇ ಫೋನ್ ಬಳಸಿ ಸಂಪೂರ್ಣ ಒಂದು ಚಲನಚಿತ್ರ ಚಿತ್ರೀಕರಿಸಿರುವುದು.

ಬಾಲಿವುಡ್ ಹಿರಿಯ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರು ಫುರಸತ್ ಹೆಸರಿನ ಸಂಪೂರ್ಣ ಚಲನಚಿತ್ರವನ್ನು ಐಫೋನ್ 14 ಪ್ರೊ ಮೂಲಕವೇ ಚಿತ್ರೀಕರಿಸಿದ್ದಾರೆ. ಆ್ಯಪಲ್ ಸಿಇಒ ಟಿಮ್ ಕುಕ್ ಕೂಡ ಈ ಚಿತ್ರ ನೋಡಿದ್ದು, ಅವರು ಇದನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರನ್ನು ಶ್ಲಾಘಿಸಿದ್ದಾರೆ. ಟಿಮ್ ಕುಕ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

vishal bhardwaj: Director Vishal Bhardwaj 'humbled' after Apple CEO Tim Cook  gushes over 'incredible cinematography' of 'Fursat' - The Economic Times

ಯೂಟ್ಯೂಬ್​​​ ಲಿಂಕ್​​​​ ಹಂಚಿಕೊಂಡ ಕುಕ್​:

ಟಿಮ್ ಕುಕ್ ಇತ್ತೀಚೆಗೆ ವಿಶಾಲ್ ಭಾರದ್ವಾಜ್ ಅವರ ಫುರಸತ್ ಚಿತ್ರವನ್ನು ವೀಕ್ಷಿಸಿ ಅದರ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದರು. 'ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ಈ ಸುಂದರ ಬಾಲಿವುಡ್ ಚಿತ್ರವನ್ನು ನೀವು ನೋಡಲೇಬೇಕು. ಭವಿಷ್ಯವು ನಿಮಗೆ ಕಾಣಲಾರಂಭಿಸಿದಾಗ ಏನಾಗಬಹುದು. ಉತ್ತಮ ಛಾಯಾಗ್ರಹಣ ಮತ್ತು ನೃತ್ಯ ಸಂಯೋಜನೆ, ಎಲ್ಲಾ ದೃಶ್ಯಗಳನ್ನು ಐಫೋನ್‌ನಲ್ಲಿ ಚಿತ್ರೀಕರಿಸಲಾಗಿದೆ' ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಈ ಟ್ವೀಟ್‌ನೊಂದಿಗೆ ಟಿಮ್ ಕುಕ್ ಚಿತ್ರದ ಯೂಟ್ಯೂಬ್ ಲಿಂಕ್ ಅನ್ನು ಸಹ ಹಂಚಿಕೊಂಡಿದ್ದಾರೆ.

Apple iPhone 14 Pro Max review: nearly perfect | Digital Trends

ಐಫೋನ್ ಅಲ್ಟ್ರಾ ಮಾದರಿ ಬಿಡುಗಡೆ ಸಾಧ್ಯತೆ:

 ಆ್ಯಪಲ್ ಪ್ರತಿ ವರ್ಷ ಐಫೋನ್‌ಗಳ ನಾಲ್ಕು ಸ್ಮಾರ್ಟ್‌ಫೋನ್ ಮಾದರಿಗಳನ್ನು ಬಿಡುಗಡೆ ಮಾಡುತ್ತದೆ - ಮಿನಿ, ಸ್ಟ್ಯಾಂಡರ್ಡ್, ಪ್ರೊ ಮತ್ತು ಪ್ರೊ ಮ್ಯಾಕ್ಸ್. ಈ ಬಾರಿ ಕಂಪನಿಯು ಮಿನಿ ಬದಲಿಗೆ ನೇರವಾಗಿ ಪ್ಲಸ್ ಮಾದರಿಯನ್ನು ಬಿಡುಗಡೆ ಮಾಡಿದೆ ಮತ್ತು ಈ ವರ್ಷ ಇದೇ ರೀತಿಯ ಶ್ರೇಣಿಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಆದಾಗ್ಯೂ, ಮುಂದಿನ ವರ್ಷಕ್ಕೆ, ಕಂಪನಿಯು ತನ್ನ ಫೋನ್​ಗಳ ಶ್ರೇಣಿಯನ್ನು ಪರಿಷ್ಕರಿಸುತ್ತದೆ ಮತ್ತು ಐಫೋನ್ ಅಲ್ಟ್ರಾ ಮಾದರಿಯನ್ನು ಪ್ರಾರಂಭಿಸಬಹುದು ಎಂದು ವರದಿಯಾಗಿದೆ. ಇದು ಟಾಪ್-ಆಫ್-ಲೈನ್ ಕೊಡುಗೆಯಾಗಿದೆ, ಇದು ಪ್ರೊ ಮ್ಯಾಕ್ಸ್ ಮಾದರಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.

ಇತ್ತೀಚಿನ ವರದಿಯ ಪ್ರಕಾರ, 2024 ರಲ್ಲಿ ಆ್ಯಪಲ್ ಐಫೋನ್ ಅಲ್ಟ್ರಾವನ್ನು ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳೊಂದಿಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎನ್ನಲಾಗಿದೆ. ಈ ಹಿಂದೆ, ಪ್ರೊ ಮ್ಯಾಕ್ಸ್ ಮಾದರಿಯನ್ನು ಬದಲಿಸಲು ಐಫೋನ್ 15 ಶ್ರೇಣಿಯ ಭಾಗವಾಗಿ ಅಲ್ಟ್ರಾ ಮಾದರಿಯನ್ನು ಬಿಡುಗಡೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಈಗ ಪ್ರೊ ಮ್ಯಾಕ್ಸ್ ಈಗಿನ ಸರಣಿಯ ಭಾಗವಾಗಿ ಮುಂದುವರಿಯಲಿದೆ ಮತ್ತು ಅಲ್ಟ್ರಾ ಹೊಸ ಸೇರ್ಪಡೆಯಾಗಲಿದೆ.

Vishal Bhardwaj's latest film has found a new fan. Apple CEO Tim Cook praised the filmmaker's latest outing, Fursat, and hailed its 'cinematography and choreography'. The 30-minute film has been shot entirely on the iPhone 14 Pro and was released on YouTube recently. It stars Ishaan Khatter and Wamiqa Gabbi and tells the story of a man named Nishant who gains the power to glimpse into the future with the help of an ancient relic called Doordarshak.