ಆರೋಗ್ಯ ಕ್ಷೇತ್ರಕ್ಕೆ 88 ಸಾವಿರ ಕೋಟಿ ರೂ. ಅನುದಾನ ; 2047ರ ವೇಳೆಗೆ ರಕ್ತಹೀನತೆಯನ್ನು ತೊಡೆದುಹಾಕಲು ಮಿಷನ್ 

01-02-23 06:01 pm       HK News Desk   ದೇಶ - ವಿದೇಶ

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 88,956 ಕೋಟಿ ರೂ. ಅನುದಾನ ನೀಡಲಾಗಿದೆ. ಹಿಂದಿನ ಬಜೆಟ್​​ಗೆ ಹೋಲಿಸಿದರೆ ಆರೋಗ್ಯ ಕ್ಷೇತ್ರಕ್ಕೆ 2,350 ಕೋಟಿ ರೂ. ಅಂದರೆ ಶೇ. 2.71ರಷ್ಟು ಹೆಚ್ಚಿನ ಅನುದಾನ ಸಿಕ್ಕಿದೆ.

ನವದೆಹಲಿ, ಫೆ.1: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 88,956 ಕೋಟಿ ರೂ. ಅನುದಾನ ನೀಡಲಾಗಿದೆ. ಹಿಂದಿನ ಬಜೆಟ್​​ಗೆ ಹೋಲಿಸಿದರೆ ಆರೋಗ್ಯ ಕ್ಷೇತ್ರಕ್ಕೆ 2,350 ಕೋಟಿ ರೂ. ಅಂದರೆ ಶೇ. 2.71ರಷ್ಟು ಹೆಚ್ಚಿನ ಅನುದಾನ ಸಿಕ್ಕಿದೆ. 2020-21ನೇ ಸಾಲಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ 73,932 ಕೋಟಿ ರೂಪಾಯಿ ಅನುದಾನ ದಕ್ಕಿತ್ತು. 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 86,200 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು.

157 ಹೊಸ ನರ್ಸಿಂಗ್ ಕಾಲೇಜುಗಳು; 

2014 ರಿಂದ ದೇಶದಲ್ಲಿ ಸ್ಥಾಪಿಸಲಾಗಿರುವ 157 ವೈದ್ಯಕೀಯ ಕಾಲೇಜುಗಳೊಂದಿಗೆ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಈ ಹೊಸ ನರ್ಸಿಂಗ್ ಕಾಲೇಜುಗಳಿಗೆ ಐಸಿಎಂಆರ್ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ರಕ್ತಹೀನತೆ ಸಮಸ್ಯೆ ನಿವಾರಣೆಗೆ 5 ಅತ್ಯುತ್ತಮ ನೈಸರ್ಗಿಕ ವಿಧಾನಗಳು! | Here is the  healthy methods to recover from iron deficiency anemia

ರಕ್ತಹೀನತೆ ತೊಡೆದುಹಾಕಲು ಕ್ರಮ ; 

2047ರ ವೇಳೆಗೆ ಸಿಕಲ್ ಸೆಲ್ ಅನೀಮಿಯಾವನ್ನು (ರಕ್ತಹೀನತೆ) ತೊಡೆದುಹಾಕಲು ಸರ್ಕಾರವು ನಿರ್ಧರಿಸಿದೆ. ಸಿಕಲ್ ಸೆಲ್ ಅನೀಮಿಯಾ ಪೀಡಿತ ಬುಡಕಟ್ಟು ಪ್ರದೇಶಗಳಲ್ಲಿ 0-40 ವರ್ಷ ವಯಸ್ಸಿನ 7 ಕೋಟಿ ಜನರನ್ನು ತಪಾಸಣೆ ಮಾಡಲಾಗುತ್ತದೆ. ಸರ್ಕಾರವು ಈ ರೋಗವನ್ನು ನಿರ್ಮೂಲನೆ ಮಾಡುವ ಉದ್ದೇಶ ಹೊಂದಿದೆ ಎಂದು ಸಚಿವರು ತಿಳಿಸಿದರು.

India Budget 2023: Pharma industry urges govt to focus on schemes for  innovation, provide tax incentives on R&D

ಫಾರ್ಮಾ ಕ್ಷೇತ್ರಕ್ಕಾಗಿ ಹೊಸ ಕಾರ್ಯಕ್ರಮ ; 

ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಉತ್ತೇಜಿಸಲು ಹೊಸ ಕಾರ್ಯಕ್ರಮವನ್ನು ರೂಪಿಸಲಾಗುವುದು ಹಾಗೂ ಫಾರ್ಮಾ ಕ್ಷೇತ್ರದಲ್ಲಿನ ಸಂಶೋಧನೆಯಲ್ಲಿ ಹೂಡಿಕೆ ಮಾಡಲು ಉದ್ಯಮವನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದ್ದಾರೆ.

medical researchers - Few takers for Indian Council of Medical Research  offers - Telegraph India

ಐಸಿಎಂಆರ್ ಲ್ಯಾಬ್‌ಗಳಲ್ಲಿ ಸಂಶೋಧನೆ ;

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಲ್ಯಾಬ್‌ಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸಲಾಗುವುದು. ಇದಕ್ಕಾಗಿ ಐಸಿಎಂಆರ್ ಲ್ಯಾಬ್​ಗಳು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಶೋಧನೆಗೆ ಲಭ್ಯವಾಗುವಂತೆ ಮಾಡಲಾಗುವುದು

ವೈದ್ಯಕೀಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ;

ವೈದ್ಯಕೀಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

The National Tele Mental Health Programme, which was first announced at Sitharaman's last Budget presentation, has been allocated Rs 133.73 crore, up by Rs 12.73 crore or 10.52 percent from its inaugural Rs 121 crore in FY23.