ಬ್ರೇಕಿಂಗ್ ನ್ಯೂಸ್
19-10-20 01:23 pm Headline Karnataka News Network ದೇಶ - ವಿದೇಶ
ಲಕ್ನೋ, ಅಕ್ಟೋಬರ್ 19 : ಪ್ರತಿದಿನ ಮಹಿಳೆಯರ ಮೇಲಿನ ಲೈಂಗಿಕ ಪ್ರಕರಣ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆ ಕಾಪಾಡುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ವಿಶೇಷ ಪೊಲೀಸ್ ಘಟಕವನ್ನು ರಚಿಸಿದೆ. ದಿನದ 24 ಗಂಟೆಯೂ ಕೆಲಸ ಮಾಡುವ ಈ ಗಸ್ತು ಪಡೆಗೆ 'ಪಿಂಕ್ ಪ್ಯಾಟ್ರೋಲ್' ಎಂದು ಹೆಸರಿಟ್ಟಿದ್ದಾರೆ. ಮಿಶನ್ ಶಕ್ತಿ ಅಭಿಯಾನದ ಭಾಗವಾಗಿ ನವರಾತ್ರಿಯ ಆರಂಭದಂದು ಈ ಪಡೆಗೆ ಚಾಲನೆ ದೊರಕಿದೆ. ಕಠಿಣ ತರಬೇತಿ ಪಡೆದ 250 ಮಹಿಳಾ ಪೊಲೀಸರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ.
ಉತ್ತರ ಪ್ರದೇಶದ ಕಾನ್ಪುರ, ಆಗ್ರಾ, ಗೋರಖ್ಪುರ, ವಾರಣಾಸಿ, ಪ್ರಯಾಗ್ರಾಜ್, ಮೀರತ್, ನೋಯಿಡಾ, ಘಾಜಿಯಾಬಾದ್ ಹಾಗೂ ಮೊರಾದಾಬಾದ್ನಲ್ಲಿ ಈ ಪಿಂಕ್ ಪ್ಯಾಟ್ರೋಲ್ ಪಡೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಯೋಗಿ ಆದಿತ್ಯನಾಥ್ ಸರ್ಕಾರ ಹೊಂದಿದೆ.
ರಾಜ್ಯದಲ್ಲಿ ಸುಮಾರು 100 ಸ್ಕೂಟಿ ಮತ್ತು 10 ಎಸ್ಯುವಿಗಳನ್ನು ಸೇವೆಗೆ ತರಲಾಗಿದ್ದು, ಮಹಿಳೆಯರ ಮೇಲಿನ ಕಿರುಕುಳ ಮತ್ತು ಅಪರಾಧ ಪ್ರಕರಣಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು 'ಪಿಂಕ್- ಪೆಟ್ರೋಲ್' ಅನ್ನು ವಿನ್ಯಾಸಗೊಳಿಸಲಾಗಿದೆ. ಸೇಫ್ ಸಿಟಿ ಯೋಜನೆಯಡಿ ಲಕ್ನೋ ಪೊಲೀಸರು ಹಾಟ್ಸ್ಪಾಟ್ಗಳಾಗಿ ಗುರುತಿಸಿರುವ ಸ್ಥಳಗಳಲ್ಲಿ 'ಪಿಂಕ್ ಪೆಟ್ರೋಲ್' ಕಾರ್ಯ ನಿರ್ವಹಿಸಲಿದೆ.
ಆರಂಭದಲ್ಲಿ ಬಾಲಕಿಯರ ಕಾಲೇಜುಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಸ್ಥಳಗಳನ್ನು ಹಾಗೂ ಕಿರುಕುಳ ಪ್ರಕರಣಗಳು ಹೆಚ್ಚಾಗಿ ನಡೆಯುವ ಸ್ಥಳಗಳಲ್ಲಿ ಈ ಗಸ್ತು ಪಡೆಯನ್ನು ನೇಮಕ ಮಾಡಲಾಗುತ್ತದೆ.
Launching the Mission Shakti to battle crimes against women, the state of Uttar Pradesh has introduced 'Pink Patrol' which comprises of women patrolling officers in the state capital, Lucknow. This new project, which marks the auspicious festival of Navratri, is aimed at strengthening the protection and safety of women in Uttar Pradesh.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm