ಬ್ರೇಕಿಂಗ್ ನ್ಯೂಸ್
17-10-20 01:47 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 12: ರಾಷ್ಟ್ರ ರಾಜಧಾನಿ ನವದೆಹಲಿ ವಾಸಕ್ಕೆ ಯೋಗ್ಯ ನಗರವಲ್ಲ ಎಂಬ ಮತ್ತೆ ಸಾಬೀತಾಗಿದೆ. ದಿನೇ ದಿನೇ ರಾಜಧಾನಿಯ ವಾಯುಮಾಲಿನ್ಯ ಮಿತಿ ಮೀರುತ್ತಿದ್ದು, ಲಾಕ್ ಡೌನ್ ಸಮಯದಲ್ಲಿ ನಿಯಂತ್ರಣದಲ್ಲಿದ್ದ ಮಾಲಿನ್ಯ ಇದೀಗ ಅಕ್ಟೋಬರ್ ನಲ್ಲಿ ಕಳೆದೆರಡು ವರ್ಷಕ್ಕಿಂತ ದುಪ್ಪಟ್ಟಾಗಿದೆ.
ದೆಹಲಿಯ ಸುತ್ತ ಮುತ್ತಲಿನ ರಾಜ್ಯಗಳಲ್ಲಿ ರೈತರು ತಮ್ಮ ಬೆಳೆ ಕಟಾವು ಮಾಡಿದ ಬಳಿಕ ಕಳೆ ಹಾಗೂ ಪೈರಿನ ಹುಲ್ಲು ಕಡ್ಡಿಗೆ ಬೆಂಕಿ ಹಚ್ಚುತ್ತಾರೆ, ಇದು ದೆಹಲಿಯ ವಾಯುಮಾಲಿನ್ಯಕ್ಕೆ ಪ್ರಮುಖ ಕೊಡುಗೆಯಾಗಿದೆ.
ನಗರದಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಕೊರೊನಾ ಸೋಂಕು ಹರಡಲು ಕಾರಣವಾಗುತ್ತದೆ ಎಂಬ ಭಯದಿಂದ ಅಸ್ತಮಾ ರೀತಿಯ ಉಸಿರಾಟದ ಸಮಸ್ಯೆ ಇರುವ ಜನರು ಆಮ್ಲಜನಕ ಸಿಲಿಂಡರ್ ಗಳನ್ನೂ ಹಾಗೂ ನಾಡಿ ಒಕ್ಸಿಮೀಟರ್ಸ್ ಗಳನ್ನೂ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿ ಸಂಗ್ರಹಿಸುತ್ತಿದ್ದಾರೆ. ಶುಕ್ರವಾರ ದೆಹಲಿ ಅತ್ಯಂತ ಕಳಪೆ ಅಂದ್ರೆ, 235 (ಎಕ್ಯೂಐ) ಸೂಚ್ಯಂಕವನ್ನು ದಾಖಲಿಸಿದೆ.
ಇತ್ತೀಚೆಗಷ್ಟೇ ಕೊರೊನಾದಿಂದ ಗುಣಮುಖರಾದ ದೆಹಲಿಯ ನಿವಾಸಿ ರಾಕೇಶ್ ಗುಪ್ತ(45 ) ಮಾಲಿನ್ಯದ ಕಾರಣಕ್ಕೆ ಕೊರೊನಾ ರೋಗಿಗಳು ಸಂಕಷ್ಟ ಪಡುತ್ತಿದ್ದಾರೆ ಎಂದಿದ್ದಾರೆ. ಅಸ್ತಮಾ ಹಾಗೂ ಮಾಲಿನ್ಯ ಆರೋಗ್ಯ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ. ನನಗೆ ನಡೆಯಲು ಅಥವಾ ಮನೆಯಿಂದ ಹೊರಬಲು ಸಾಧ್ಯವಾಗುತ್ತಿಲ್ಲ. ಮನೆಯಿಂದ ಹೊರಬಂದರೂ ಉಸಿರಾಡಲು ಹರಸಾಹಸ ಕಷ್ಟ ಪಡ ಬೇಕಾಗುತ್ತದೆ ಎಂದಿದ್ದಾರೆ.
ಈ ಕುಟುಂಬವು ತುರ್ತು ಬಳಕೆಗಾಗಿ 15 ಕೆಜಿ ಆಮ್ಲಜನಕ ಸಿಲಿಂಡರ್ ಮತ್ತು ಪ್ರತಿದಿನ ರಕ್ತದಲ್ಲಿನ ಆಮ್ಲಜನಕವನ್ನು ಅಳೆಯಲು ಪೋರ್ಟಬಲ್ ಪಲ್ಸ್ ಒಕ್ಸಿಮೀಟರ್ ಅನ್ನು ಖರೀದಿಸಿದ್ದಾರೆ. ಜೊತೆಗೆ ಏರ್ ಪ್ಯೂರಿಫೈರ್ ಗಳನ್ನೂ ಖರೀದಿಸಲು ಕೂಡ ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
After months of comparatively clean air and blue skies in the lockdown, pollution levels have nailed to their worst in two years in October in the national capital Delhi.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm