ಬ್ರೇಕಿಂಗ್ ನ್ಯೂಸ್
15-10-20 03:08 pm Headline Karnataka News Network ದೇಶ - ವಿದೇಶ
ಪೋಲೆಂಡ್, ಅಕ್ಟೋಬರ್ 15: ಎರಡನೇ ಮಹಾಯುದ್ಧದ ಕಾಲಕ್ಕೆ ಸೇರಿದ ಐದು ಟನ್ ಸಾಮರ್ಥ್ಯದ ಬಾಂಬ್ ಒಂದನ್ನು ಪೋಲೆಂಡ್ ನ ಬಾಲ್ಟಿಕ್ ಸಮುದ್ರ ಮಧ್ಯೆ ನೀರಿನಡಿಯಲ್ಲಿ ಸ್ಫೋಟಿಸಿ, ನಿಷ್ಕ್ರಿಯಗೊಳಿಸಲಾಗಿದೆ.
'ಟಾಲ್ಬಾಯ್' ಅಡ್ಡನಾಮದ ಈ ಬಾಂಬಿಗೆ 'ಭೂಕಂಪನದ ಬಾಂಬ್' ಎಂದು ಕರೆಯಲಾಗುತ್ತಿದ್ದು, 1945ರಲ್ಲಿ ನಾಝಿ ಸಮರನೌಕೆಯ ಮೇಲೆ ರಾಯಲ್ ವಾಯುಪಡೆ ಈ ಬಾಂಬನ್ನು ಹಾಕಿತ್ತು. ಆದರೆ, ಬಾಂಬ್ ಸ್ಫೋಟಗೊಳ್ಳದೆ ಹಾಗೇ ಉಳಿದಿತ್ತು. ಆಬಳಿಕ ವಾಯುವ್ಯ ಪೋಲೆಂಡ್ನ ಬಂದರು ನಗರವಾದ ಸ್ವಿನೌಜ್ಸಿ ಬಳಿ ಹೂಳೆತ್ತುವ ಸಂದರ್ಭದಲ್ಲಿ ಈ ಬಾಂಬ್ ಕಂಡುಬಂದಿತ್ತು.



ಆರು ಮಿಟರ್ಗಿಂತ ಉದ್ದವಿದ್ದ ಈ ಬಾಂಬ್ನಲ್ಲಿ 2.4 ಟನ್ ಸ್ಪೋಟಕಗಳಿದ್ದವು. ಇದು 3.6 ಟನ್ ಟಿಎನ್ ಟಿ ಸ್ಫೋಟಕಕ್ಕೆ ಸಮ ಎನ್ನಲಾಗಿತ್ತು. ಬಾಂಬ್ ಪತ್ತೆಯಾದ ಜಾಗದ ಪಕ್ಕದಲ್ಲೇ ಸೇತುವೆ ಇದ್ದುದರಿಂದ ಈ ಬಾಂಬ್ ಅನ್ನು ಸುಲಭದಲ್ಲಿ ನಿಷ್ಕ್ರೀಯಗೊಳಿಸುವ ಸಾಧ್ಯತೆ ಇರಲಿಲ್ಲ.
ಹೀಗಾಗಿ ಸ್ಪೋಟಕಗಳನ್ನು ಯಾವುದೇ ಸ್ಫೋಟ ಆಗದಂತೆ ಹಾಗೇ ಸುಟ್ಟುಬಿಡುವ ತಂತ್ರವನ್ನು ನೌಕಾಪಡೆ ಅನುಸರಿಸಿದೆ. ರಿಮೋಟ್ ನಿಯಂತ್ರಕದಿಂದ ಶೆಲ್ ಒಳಗೆ ಉರಿಯುವ ಪ್ರಕ್ರಿಯೆಯನ್ನು ನಿಯಂತ್ರಿಸಲಾಗಿದೆ.
ಇದಕ್ಕಾಗಿ ಸುಮಾರು 2.5 ಕಿಲೋಮೀಟರ್ ಪ್ರದೇಶದ 750 ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಸುತ್ತ 16 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಲಮಾರ್ಗಗಳಲ್ಲಿ ಸಮುದ್ರ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
Biggest World War Two bomb found in Poland explodes under water while being defused https://t.co/oucLfGyTDA pic.twitter.com/T2Zdbzqumk
— Reuters (@Reuters) October 14, 2020
A British World War II bomb exploded while being made safe underwater by navy demolition specialists in northwestern Poland on. No one was injured states report.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:59 am
HK News Staffer
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
15-07-26 01:17 pm
HK News Staffer
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm