ಬ್ರೇಕಿಂಗ್ ನ್ಯೂಸ್
14-10-20 09:34 am Headline Karnataka News Network ದೇಶ - ವಿದೇಶ
ವಿಶಾಖಪಟ್ಟಣಂ, ಅಕ್ಟೋಬರ್ .14: ಬಂಗಾಳಕೊಲ್ಲಿಯಲ್ಲಿ ಉಂಟಾದ ತೀವ್ರ ವಾಯುಭಾರ ಕುಸಿತದ ಪರಿಣಾಮ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ವಾಯುಭಾರ ಕುಸಿತ ಮಂಗಳವಾರ ಬೆಳಿಗ್ಗೆ ಕಾಕಿನಾಡ ಕರಾವಳಿಯ ಮೂಲಕ ಆಂಧ್ರಪ್ರದೇಶವನ್ನು ದಾಟಿದೆ ಎಂದು ವಿಶಾಖಪಟ್ಟಣಂನ ಚಂಡಮಾರುತ ಎಚ್ಚರಿಕೆ ಕೇಂದ್ರ ಮಾಹಿತಿ ನೀಡಿದೆ.
ಪೂರ್ವ ಗೋದಾವರಿ ಜಿಲ್ಲೆಯ ತುನಿ ಮತ್ತು ವಿಶಾಖಪಟ್ಟಣಂನ ನರಸಿಪಟ್ಟಣಂ ಸಂಪರ್ಕ ರಸ್ತೆಯ ಮೇಲೆ ನದಿ ನೀರು ಉಕ್ಕಿಹರಿದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಪ್ರವಾಹದಲ್ಲಿ ಕೊಚ್ಚಿಹೋಗಿದೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಕಾರಿನಲ್ಲಿದ್ದ ದಂಪತಿಯನ್ನು ರಕ್ಷಿಸಿದರೂ, ಜತೆಗಿದ್ದ ಹಿರಿಯ ಮಹಿಳೆ ನೀರಿನಲ್ಲಿ ಮುಳುಗಿ ಮೃತಪಟ್ಟರು. ಸೋಮವಾರ ರಾತ್ರಿ ವಿಶಾಖಪಟ್ಟಣಂನಲ್ಲಿ ಕಲ್ಲು ಬಂಡೆಯೊಂದು ಮನೆಯ ಮೇಲೆ ಉರುಳಿಬಿದ್ದು 3 ವರ್ಷದ ಮಗು ಮತ್ತು ಮಗುವಿನ ತಾಯಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ವಿಶಾಖಪಟ್ಟಣಂ ಬಂದರಿನಲ್ಲಿ ಲಂಗರು ಹಾಕಲು ಸಜ್ಜಾಗಿದ್ದ ‘ಮಾ ಆಫ್ ಬಾಂಗ್ಲಾದೇಶ್’ ಎಂಬ ಹೆಸರಿನ ಹಡಗು ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಸಿಲುಕಿ ಉತ್ತರದತ್ತ ಚಲಿಸಿ ಬೀಚ್ ರಸ್ತೆಯ ತೆನ್ನೆಟಿ ಪಾರ್ಕ್ನ ಬಳಿ ದಡ ಸೇರಿದೆ. ಮಂಗಳವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ಯನಾಮ್ನಲ್ಲಿ 25 ಸೆ.ಮೀ ಮಳೆಯಾಗಿದ್ದರೆ, ಅಮಲಾಪುರಂನಲ್ಲಿ 18 ಸೆ.ಮೀ, ತಡೆಪಲ್ಲೆಗುಡ್ಡಂ ಮತ್ತು ನುವಿಡ್ನಲ್ಲಿ ತಲಾ 18 ಸೆ.ಮೀ, ವಿಶಾಖಪಟ್ಟಣಂನಲ್ಲಿ 8 ಸೆ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.
48 ಗಂಟೆಗಳ ಕಾಲ ಸುರಿದ ನಿರಂತರ ಮಳೆಯಲ್ಲಿ ಆಂಧ್ರ ಪ್ರದೇಶ ಮೂಲದ ಮೂವರು ಹಾಗೂ ತೆಲಂಗಾಣ ಮೂಲದ ಮೂವರು ಮೃತಪಟ್ಟಿದ್ದಾರೆ.
At least six people have died, three in Andhra Pradesh and three in Telangana after continuous rain in the last 48 hours.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm