ಬ್ರೇಕಿಂಗ್ ನ್ಯೂಸ್
13-10-20 04:06 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 13: ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯಿ ಕಥರಿಯಾ ಗೋವಿನ ಸೆಗಣಿಯಿಂದ ಮಾಡಿದ ಚಿಪ್ ಅನ್ನು ಹೊರತಂದಿದ್ದಾರೆ. ಮೊಬೈಲ್ ಫೋನ್ ಹೊರಸೂಸುವ ವಿಕಿರಣವನ್ನು ಈ ಚಿಪ್ ತಡೆಯಬಲ್ಲದು. ಆಮೂಲಕ ವಿಕಿರಣ ಸಂಬಂಧಿ ರೋಗಗಳನ್ನು ಈ ಚಿಪ್ ನಿವಾರಿಸಲಿದೆ ಎಂದು ಕಥರಿಯಾ ಹೇಳಿದ್ದಾರೆ.
ಕೇಂದ್ರ ಸರಕಾರದ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆಯಡಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಕಾಮಧೇನು ಆಯೋಗದಿಂದ ಈ ಹೊಸ ಮಾದರಿಯ ಚಿಪ್ ಅನ್ನು ಬಿಡುಗಡೆ ಮಾಡಲಾಗಿದೆ. ಸಗಣಿ ಉತ್ಪನ್ನಗಳ ಪ್ರಚಾರಕ್ಕಾಗಿ ಆಯೋಗದ ವತಿಯಿಂದ ಕಾಮಧೇನು ದೀಪಾವಳಿ ಹೆಸರಲ್ಲಿ ರಾಷ್ಟ್ರ ಮಟ್ಟದ ಅಭಿಯಾನ ಹಮ್ಮಿಕೊಂಡಿದ್ದು, ಕಥರಿಯಾ ದೆಹಲಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೋವಿನ ಸೆಗಣಿ ವಿಕಿರಣ ವಿರೋಧಿಯಾಗಿದ್ದು, ಎಲ್ಲರನ್ನು ಕಾಪಾಡುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಈ ಚಿಪ್ ಅನ್ನು ಮೊಬೈಲ್ ಫೋನ್ ಗಳಲ್ಲಿ ಬಳಸಬಹುದು. ಇದರಿಂದ ಮೊಬೈಲ್ ವಿಕಿರಣದಿಂದ ಬರುವ ರೋಗಗಳನ್ನು ನಿಯಂತ್ರಿಸಬಹುದು ಎಂದು ಕಥಿರಿಯಾ ಹೇಳಿದ್ದಾರೆ.
ಹೊಸ ಚಿಪ್ ಗೆ ಗೋಸತ್ವ ಕವಚ ಎಂದು ಹೆಸರಿಡಲಾಗಿದ್ದು ಗುಜರಾತಿನ ರಾಜ್ ಕೋಟ್ ಮೂಲದ ಶ್ರೀಜಿ ಗೋಶಾಲೆಯಲ್ಲಿ ಇದನ್ನು ಆವಿಷ್ಕರಿಸಲಾಗಿದೆ. ಈ ಗೋಶಾಲೆಯನ್ನು ಕಾಮಧೇನು ಆಯೋಗದಿಂದಲೇ 2019ರಲ್ಲಿ ರಚಿಸಲಾಗಿದ್ದು ಗೋವಿನ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲು ಆರಂಭಿಸಲಾಗಿತ್ತು. ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಆಯೋಗದಿಂದ ಗೋವುಗಳ ಉತ್ಪನ್ನದ ಪ್ರಚಾರಕ್ಕಾಗಿ ರಾಷ್ಟ್ರ ಮಟ್ಟದ ಅಭಿಯಾನ ನಡೆಸಲಾಗುತ್ತಿದೆ. ಇದೇ ವೇಳೆ, ಈ ಬಾರಿಯ ಹಬ್ಬದ ವೇಳೆ ಚೀನಾ ನಿರ್ಮಿತ ಪಟಾಕಿಗಳನ್ನು ಸುಡುವ ಬದಲು ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಜನರಿಗೆ ಕಥರಿಯಾ ಕರೆ ನೀಡಿದ್ದಾರೆ.
Rashtriya Kamdhenu Aayog (RKA) chairman Vallabhbhai Kathiria unveiled a ''chip'' made of cow dung and declared that it reduces radiation from mobile handsets and it will be a protection against all diseases.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm