ಬ್ರೇಕಿಂಗ್ ನ್ಯೂಸ್
09-10-20 09:12 pm Headline Karnataka News Network ದೇಶ - ವಿದೇಶ
ಮುಂಬೈ, ಅಕ್ಟೋಬರ್ 9: ರಿಪಬ್ಲಿಕ್ ಟಿವಿ ವಿರುದ್ಧ ಟಿಆರ್ ಪಿ ಗೋಲ್ಮಾಲ್ ಮಾಡಿರುವ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಮುಂಬೈ ಪೊಲೀಸ್ ಕಮೀಷನರ್ ಪರಮ್ ಬೀರ್ ಸಿಂಗ್ ಹೇಳಿಕೆ ನೀಡಿದ್ದರು. ಆದರೆ, ಈ ಪ್ರಕರಣದಲ್ಲಿ ದಾಖಲಾದ ಎಫ್ಐಆರ್ ಪ್ರಕಾರ, ದೂರು ದಾಖಲಾಗಿರುವುದು ಇಂಡಿಯಾ ಟುಡೇ ನ್ಯೂಸ್ ಚಾನೆಲ್ ವಿರುದ್ಧ ಎನ್ನುವ ಮಾಹಿತಿ ಹೊರಬಿದ್ದಿದೆ.
ಮುಂಬೈನ ಖಾಂಡಿವಿಲಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಇಂಡಿಯಾ ಟುಡೇ ನ್ಯೂಸ್ ಮತ್ತಿತರ ವಾಹಿನಿಗಳ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಉಲ್ಲೇಖ ಇದೆ. ಬಾರ್ಕ್ ರೇಟಿಂಗ್ ಮಾನಿಟರಿಂಗ್ ಮಾಡುವ ಹನ್ಸ್ ರೀಸರ್ಚ್ ಸೆಂಟರ್ ಕಂಪನಿ ದೂರು ನೀಡಿದ್ದು, ಕಂಪೆನಿಯ ಮಾಜಿ ಉದ್ಯೋಗಿ ವಿಶಾಲ್ ಭಂಡಾರಿ ಹಣ ಪಡೆದು ಟಿಆರ್ ಪಿ ಹೆಚ್ಚಿಸಲು ತಂತ್ರ ಹೂಡಿದ್ದ. ಇದಕ್ಕಾಗಿ ಇಂಡಿಯಾ ಟುಡೇ ವಾಹಿನಿಯಿಂದ ಹಣವನ್ನು ಪಡೆಯುತ್ತಿದ್ದ ಎಂದು ಆರೋಪಿಸಿದೆ.
ಹನ್ಸ್ ರೀಸರ್ಚ್ ಸೆಂಟರ್ ಡೆಪ್ಯುಟಿ ಜನರಲ್ ಮ್ಯಾನೇಜರ್ ನಿತಿನ್ ದೇವ್ಕರ್ ಈ ದೂರು ನೀಡಿದ್ದು, ದೂರಿನಲ್ಲಿ ಸ್ಪಷ್ಟವಾಗಿ ಇಂಡಿಯಾ ಟುಡೇ ಮತ್ತಿತರ ನ್ಯೂಸ್ ಚಾನೆಲ್ ಎಂದು ಹೇಳಿದ್ದಾರೆ. ಹೀಗಾಗಿ ಮುಂಬೈ ಪೊಲೀಸ್ ಕಮಿಷನರ್ ಉದ್ದೇಶಪೂರ್ವಕವಾಗಿ ರಿಪಬ್ಲಿಕ್ ಟಿವಿ ಹೆಸರು ಹೇಳಿದ್ದಾರೆಯೇ ಎಂಬ ಶಂಕೆ ಮೂಡಿದೆ. ಈ ವಿಚಾರದಲ್ಲಿ ರಿಪಬ್ಲಿಕ್ ಟಿವಿ ಮಾಲಕ ಅರ್ನಾಬ್ ಗೋಸ್ವಾಮಿ, ಮುಂಬೈ ಪೊಲೀಸ್ ಕಮಿಷನರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ ನಿರಂತರ ಸುದ್ದಿ ಮಾಡಿದ್ದ ರಿಪಬ್ಲಿಕ್ ಟಿವಿ ಮುಂಬೈ ಪೊಲೀಸರ ನಿದ್ದೆಗೆಡಿಸಿದ್ದರು. ಮುಂಬೈ ಪೊಲೀಸರು, ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಮಹಾರಾಷ್ಟ್ರ ಸರಕಾರದ ಅಣತಿಯಂತೆ ಪೊಲೀಸರು ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದರು. ಇದೇ ಕಾರಣಕ್ಕೆ ಟಿಆರ್ ಪಿ ಸ್ಕ್ಯಾಮ್ ನಲ್ಲಿ ರಿಪಬ್ಲಿಕ್ ಟಿವಿಯನ್ನು ಮುಂಬೈ ಪೊಲೀಸರು ಆರೋಪಿಯಾಗಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಎಫ್ಐಆರ್ ಪ್ರತಿಯಲ್ಲಿ ರಿಪಬ್ಲಿಕ್ ಟಿವಿ ಹೆಸರು ಉಲ್ಲೇಖ ಆಗದಿರುವುದು ಮತ್ತು ಅಲ್ಲಿ ಇಂಡಿಯಾ ಟುಡೇ ಹೆಸರು ಮಾತ್ರ ಉಲ್ಲೇಖ ಆಗಿರುವುದು ಸಂಶಯ ಮೂಡಿಸಿದೆ.
The 'fake TRP scam' took a new turn with the Mumbai police confirming that the First Information Report filed on October 6 had a witness mentioning that he was offered money to view India Today channel and not Republic Tv.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm