ಬ್ರೇಕಿಂಗ್ ನ್ಯೂಸ್
09-10-20 05:14 pm Headline Karnataka News Network ದೇಶ - ವಿದೇಶ
ಜೈಪುರ, ಅಕ್ಟೋಬರ್ 09: ಜಾಗದ ವಿವಾದ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕರೊಬ್ಬರನ್ನು ಜೀವಂತವಾಗಿ ಸುಟ್ಟು ಕೊಂದ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ. ಕರೌಲಿ ಜಿಲ್ಲೆಯ ಸಪೋತ್ರಾ ತಾಲೂಕಿನ ಬುಕ್ನಾ ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದ್ದು, ತೀವ್ರ ಸುಟ್ಟ ಗಾಯಗಳಾಗಿದ್ದ ಅರ್ಚಕ ಬಾಬುಲಾಲ್ ವೈಷ್ಣವ್ (55) ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಪ್ರಮುಖ ಆರೋಪಿಯಾಗಿರುವ ಕೈಲಾಶ್ ಮೀನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೈಲಾಶ್ ಮೀನಾ ಒಬ್ಬನ ಕೃತ್ಯ ಅಲ್ಲ. ಆತನ ಇಡೀ ಕುಟುಂಬ ಕೃತ್ಯದಲ್ಲಿ ಭಾಗಿಯಾಗಿದೆ. ಬ್ರಾಹ್ಮಣ ದ್ವೇಷದಿಂದ ಈ ಕೃತ್ಯ ಎಸಗಿದ್ದಾರೆ. ಮೀನಾ ಕುಟುಂಬದ ಎಲ್ಲರನ್ನೂ ಬಂಧಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಪೊಲೀಸರನ್ನು ಸಸ್ಪೆಂಡ್ ಮಾಡಬೇಕು ಎಂದು ಅರ್ಚಕರ ಸಂಬಂಧಿ ರಮಾಕಾಂತ್ ಶರ್ಮಾ ಆಗ್ರಹಿಸಿದ್ದಾರೆ.
ಬುಕ್ನಾ ಗ್ರಾಮದ ರಾಧಾಕೃಷ್ಣ ದೇವಾಲಯದ ಟ್ರಸ್ಟ್ ಗೆ ಸೇರಿದ 5.2 ಎಕ್ರೆ ಭೂಮಿಯನ್ನು ದೇಗುಲದ ಪ್ರಧಾನ ಅರ್ಚಕ ಬಾಬುಲಾಲ್ ವೈಷ್ಣವ್ ನೋಡಿಕೊಂಡಿದ್ದರು. ಆದರೆ, ಅರ್ಚಕ ಬಾಬುಲಾಲ್ ಇತ್ತೀಚೆಗೆ ಭೂಮಿಯ ಒಂದು ಭಾಗವನ್ನು ಲೆವೆಲ್ ಮಾಡಿ ಬಿಲ್ಡಿಂಗ್ ಕಟ್ಟಲು ತಯಾರಿ ನಡೆಸಿದ್ದರು. ಇದಕ್ಕೆ ಒಂದು ಗುಂಪಿನವರು ವಿರೋಧ ವ್ಯಕ್ತಪಡಿಸಿದ್ದರು. ಈ ಭೂಮಿಯಲ್ಲಿ ತಮ್ಮದೂ ಪಾಲಿದೆ, ಬಿಲ್ಡಿಂಗ್ ಕಟ್ಟುವಂತಿಲ್ಲ ವಿರೋಧಿಸುತ್ತಿದ್ದರು. ಈ ವಿಚಾರ ಬಳಿಕ ಗ್ರಾಮದ ಹಿರಿಯರ ಮುಂದೆ ಬಂದಿತ್ತು. ಗ್ರಾಮದ ಹಿರಿಯರೆಲ್ಲ ಸೇರಿ ಅದನ್ನು ಅರ್ಚಕರಿಗೇ ಒಪ್ಪಿಸಿದ್ದರಲ್ಲದೆ, ಕಟ್ಟಡ ಕಟ್ಟುವುದಕ್ಕೆ ಒಪ್ಪಿಗೆ ಸೂಚಿಸಿದ್ದರು. ಕಟ್ಟಡದ ಕೆಲಸ ನಡೆಯುತ್ತಿದ್ದಂತೆ ಕೈಲಾಶ್ ಮೀನಾ ಮತ್ತು ನಾಲ್ವರು ಅರ್ಚಕನ ಮನೆಗೆ ಬಂದು ವಾಗ್ವಾದ ನಡೆಸಿದ್ದಾರೆ. ಒಬ್ಬಾತ ಕೈಯಲ್ಲಿದ್ದ ಮೈಗೆ ಸೀಮೆ ಎಣ್ಣೆಯನ್ನು ಅರ್ಚಕರ ಮೈಗೆ ಸುರಿದು ಬೆಂಕಿ ಹಚ್ಚಿದ್ದಾರೆ. ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದನ್ನು ಅರ್ಚಕ ಸಾಯುವುದಕ್ಕೂ ಮುನ್ನ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅರ್ಚಕರ ಹತ್ಯೆ ವಿಚಾರ ರಾಜಸ್ಥಾನದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದು, ಬಿಜೆಪಿ ನಾಯಕರು ರಾಜ್ಯ ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಮಾಜಿ ಸಿಎಂ ವಸುಂಧರಾ ರಾಜೇ ಸಿಂಧ್ಯಾ, ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತದ ವಿರುದ್ಧ ಹರಿಹಾಯ್ದಿದ್ದಾರೆ.
A priest in Rajasthan's Karauli district, round 177 km from state capital Jaipur, died due to burn injuries after he was attacked by a group of people over a land dispute.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 10:21 pm
HK News Desk
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm