ಬ್ರೇಕಿಂಗ್ ನ್ಯೂಸ್
18-08-22 03:18 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 18: ಸೌದಿ ಆರೇಬಿಯಾದ ಮಹಿಳಾ ಪರ ಹೋರಾಟಗಾರ್ತಿ ಸಲ್ಮಾ ಅಲ್ ಶೇಹಾಬ್ ಟ್ವಿಟರ್ ಬಳಸಿ ಅಭಿಯಾನ ನಡೆಸಿದ್ದಕ್ಕಾಗಿ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 33 ವರ್ಷದ ಸಲ್ಮಾ ಅವರು ಮುಂದಿನ 34 ವರ್ಷಗಳ ಕಾಲ ಸೌದಿ ಅರೇಬಿಯಾದಿಂದ ಹೊರಗಡೆ ಪ್ರಯಾಣಿಸುವಂತಿಲ್ಲ ಎಂದೂ ಅಲ್ಲಿನ ಕೋರ್ಟ್ ಶಿಕ್ಷೆ ವಿಧಿಸುವ ವೇಳೆ ಕಟ್ಟಾಜ್ಞೆ ಹೊರಡಿಸಿದೆ.
ಇಂಗ್ಲೆಂಡಿನಲ್ಲಿ ಪಿಎಚ್ ಡಿ ಕಲಿಯುತ್ತಿದ್ದ ಸಲ್ಮಾ ಶೆಹಾಬ್ 2021ರ ಜನವರಿ ತಿಂಗಳಲ್ಲಿ ಸೌದಿಗೆ ಆಗಮಿಸಿದ್ದರು. ಈ ವೇಳೆ, ಸೌದಿ ಪೊಲೀಸರು ಅವರನ್ನು ಬಂಧಿಸಿದ್ದು ಆನಂತರ 265 ದಿವಸಗಳ ಕಾಲ ತಮ್ಮ ವಶದಲ್ಲಿಟ್ಟು ವಿಚಾರಣೆ ನಡೆಸಿದ್ದರು. ಆನಂತರ ವಿಶೇಷ ಕ್ರಿಮಿನಲ್ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿರುವುದು, ಜನರಲ್ಲಿ ಅಪನಂಬಿಕೆ ಹುಟ್ಟಿಸುವ ರೀತಿ ವರ್ತಿಸಿರುವುದಾಗಿ ಸಲ್ಮಾ ಶೆಹಾಬ್ ವಿರುದ್ಧ ಆರೋಪ ಹೊರಿಸಲಾಗಿತ್ತು.

ಸಲ್ಮಾ ಅಲ್ ಶೆಹಾಬ್ ಇಂಗ್ಲೆಂಡಿನಲ್ಲಿದ್ದುಕೊಂಡೇ ತನ್ನ ಸೋದರಿಯ ಪರವಾಗಿ ದನಿ ಎತ್ತಿದ್ದರು. ಸಲ್ಮಾ ಸಹೋದರಿ ಲೋಜೈನ್ ಅಲ್ ಹತ್ಲೌಲ್ ಕೂಡ ಮಹಿಳಾ ಹೋರಾಟಗಾರ್ತಿಯಾಗಿದ್ದು, 2018ರಲ್ಲಿ ಸೌದಿಯಲ್ಲಿ ಮಹಿಳೆಯರು ಕಾರು ಡ್ರೈವಿಂಗ್ ಮಾಡುವಂತಿಲ್ಲ ಎಂಬ ಸರಕಾರಿ ಆದೇಶದ ವಿರುದ್ಧ ಹೋರಾಟ ಸಂಘಟಿಸಿದ್ದರು. ಟ್ವಿಟರ್ ನಲ್ಲಿ ಅಭಿಯಾನವನ್ನೂ ನಡೆಸಿದ್ದರು. ಇದಕ್ಕಾಗಿ ಆಕೆಯನ್ನೂ ಬಂಧಿಸಿ ಜೈಲಿನಲ್ಲಿಡಲಾಗಿದೆ. ಮೂರು ವರ್ಷಗಳಿಂದ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಆಕೆಯ ಪರವಾಗಿ ಸಲ್ಮಾ ಶೆಹಾಬ್ ಕೂಡ ಟ್ವಿಟರ್ ನಲ್ಲಿ ಕ್ಯಾಂಪೇನ್ ನಡೆಸಿದ್ದಲ್ಲದೆ, ಮಹಿಳೆಯರ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದರು.

ಟ್ವಿಟರ್ ಅಭಿಯಾನ ನಡೆಸಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಈ ರೀತಿ ಶಿಕ್ಷೆ ವಿಧಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಒಳಗಾಗಿದ್ದು ಜನರ ಅಭಿಪ್ರಾಯ ಸ್ವಾತಂತ್ರ್ಯವನ್ನೇ ಹತ್ತಿಕ್ಕಿದಂತಾಗಿದೆ. ಜನರು ತಮ್ಮ ಅಭಿಪ್ರಾಯ ಹೇಳಿದ್ದಕ್ಕೂ ಸೌದಿ ಸರಕಾರ ಈ ರೀತಿ ಶಿಕ್ಷೆ ವಿಧಿಸಿರುವುದು ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವ ಅದರ ಹೇಳಿಕೆಯನ್ನು ಅಣಕಿಸಿದಂತಿದೆ ಎಂದು ಮಹಿಳಾ ಹಕ್ಕುಗಳ ಪರ ಸಂಸ್ಥೆ ALQST ಅಧಿಕಾರಿ ಲೀನಾ ಹತ್ಲೌಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
A Saudi student at Leeds University who had returned home to the kingdom for a holiday has been sentenced to 34 years in prison for having a Twitter account and for following and retweeting dissidents and activists.The sentencing by Saudi’s special terrorist court was handed down weeks after the US president Joe Biden’s visit to Saudi Arabia, which human rights activists had warned could embolden the kingdom to escalate its crackdown on dissidents and other pro-democracy activists.
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
04-03-26 12:58 pm
HK News Staffer
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್...
03-03-26 04:30 pm
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
04-03-26 10:54 am
HK News Staffer
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm