ಬ್ರೇಕಿಂಗ್ ನ್ಯೂಸ್
08-07-22 07:53 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 8: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪೈಗಂಬರ್ ಅವಹೇಳನ ಹೇಳಿಕೆಯ ನೆಪದಲ್ಲಿ ಮಲೇಶ್ಯಾ ಮತ್ತು ಇಂಡೋನೇಷ್ಯಾದ ತೀವ್ರಗಾಮಿಗಳು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಸೈಬರ್ ದಾಳಿಗೆ ಮುಂದಾಗಿದ್ದಾರೆ. ಈಗಾಗ್ಲೇ ಜಗತ್ತಿನ ಮುಸ್ಲಿಂ ಸೈಬರ್ ಹ್ಯಾಕರ್ಸ್ ಗಳಿಗೆ ಮಲೇಶ್ಯಾ ಮತ್ತು ಇಂಡೋನೇಶ್ಯಾದ ಸೈಬರ್ ದಾಳಿಕೋರರು ಭಾರತದ ವಿರುದ್ಧ ಮುಗಿಬೀಳುವಂತೆ ಕರೆ ನೀಡಿದ್ದಾರೆ.
ಮಲೇಶ್ಯಾದ ಡ್ರ್ಯಾಗನ್ ಫೋರ್ಸ್ ಮತ್ತು ಹ್ಯಾಕ್ಟಿವಿಸ್ಟ್ ಇಂಡೋನೇಶ್ಯಾ ಹೆಸರಿನ ದಾಳಿಕೋರರು ಭಾರತದ ವಿರುದ್ಧ ಸೈಬರ್ ದಾಳಿ ಆರಂಭಿಸಿದ್ದು ಈ ಬಗ್ಗೆ ಅಹ್ಮದಾಬಾದ್ ಸೈಬರ್ ಪೊಲೀಸರು ಇಂಡಿಯಾ ಟುಡೇಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಅಹ್ಮದಾಬಾದ್ ಸೈಬರ್ ಪೊಲೀಸರು ಮಲೇಶ್ಯಾ ಮತ್ತು ಇಂಡೋನೇಶ್ಯಾ ಸರಕಾರಗಳಿಗೆ ಪತ್ರ ಬರೆದಿದ್ದು, ಈ ರೀತಿಯ ಬೆದರಿಕೆ ಹಾಕಿರುವ ತಂಡಗಳ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದ್ದಾರೆ. ಅಲ್ಲದೆ, ಇಂಟರ್ ಪೋಲ್ ವಿಭಾಗಕ್ಕೂ ಪತ್ರ ಬರೆದು ಇದರ ಬಗ್ಗೆ ಲುಕ್ ಔಟ್ ನೋಟೀಸ್ ಜಾರಿಗೊಳಿಸುವಂತೆ ಕೇಳಿಕೊಂಡಿದ್ದಾರೆ.


ಈಗಾಗಲೇ ಭಾರತದ ಎರಡು ಸಾವಿರಕ್ಕೂ ವೆಬ್ ಸೈಟ್ ಗಳನ್ನು ಈ ಹ್ಯಾಕರ್ ಗಳು ಹಾಳು ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ. ಥಾಣೆ ಪೊಲೀಸರ ವೆಬ್ ಸೈಟ್, ಆಂಧ್ರಪ್ರದೇಶ ಪೊಲೀಸರ ವೆಬ್ ಸೈಟ್, ಅಸ್ಸಾಂನ ನ್ಯೂಸ್ ಚಾನೆಲ್ ಲೈವನ್ನು ಹ್ಯಾಕ್ ಮಾಡಲಾಗಿದೆ. ಇದನ್ನು ಮಲೇಶ್ಯನ್ ಸೈಬರ್ ದಾಳಿಕೋರರೇ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ನ್ಯೂಸ್ ಚಾನೆಲ್ ಲೈವ್ ಆಗುತ್ತಿರುವ ಸಂದರ್ಭದಲ್ಲೇ ಹ್ಯಾಕ್ ಆಗಿದ್ದು ನೇರವಾಗಿ ಪರದೆಯಲ್ಲಿ ಪಾಕಿಸ್ಥಾನದ ಧ್ವಜ ಕಾಣಿಸಿಕೊಂಡಿದೆ. ಅಲ್ಲದೆ, ಭಾರತೀಯರೇ ಪ್ರವಾದಿ ಮಹಮ್ಮದರಿಗೆ ಗೌರವ ಕೊಡಿ, ನೀವು ಇಸ್ಲಾಮ್ ಬಗ್ಗೆ ಮತ್ತೆ ಮತ್ತೆ ಅಪಮಾನ ಮಾಡುತ್ತಿದ್ದೀರಿ, ನೀವು ನಮ್ಮ ಸಹನೆಯ ಅರ್ಥವನ್ನು ಮಾಡಿಕೊಂಡಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಜಗತ್ತಿನ ಮುಸ್ಲಿಮರಲ್ಲಿ ಕ್ಷಮೆ ಕೇಳಿ. ನಾವು ಅಪಮಾನವನ್ನು ಸಹಿಸಿಕೊಂಡು ಎಂದಿಗೂ ಹಾಗೇ ಇರುವುದಿಲ್ಲ. hacked by team revolution PK ಎಂಬುದಾಗಿ ಕೆಳ ಬದಿಯಲ್ಲಿ ಕಾಣಿಸಿಕೊಂಡಿದೆ.
ಇದಲ್ಲದೆ, ನೂಪುರ್ ಶರ್ಮಾ ಅವರ ವಿಳಾಸ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮಾಹಿತಿಗಳನ್ನು ಸೈಬರ್ ದಾಳಿಕೋರರು ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದು, ಈಕೆಯ ಮೇಲೆ ಸೇಡು ತೀರಿಸಿಕೊಳ್ಳುವಂತೆ ಮುಸ್ಲಿಮರಿಗೆ ಪ್ರೇರಣೆ ನೀಡುತ್ತಿದ್ದಾರೆ. ನೂಪುರ್ ಶರ್ಮಾ ಟೀಕೆಯ ಬಗ್ಗೆ ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಕಿಡಿಕಾರಿದ ಬೆನ್ನಲ್ಲೇ ಆಕೆಯನ್ನು ವಕ್ತಾರ ಹುದ್ದೆಯಿಂದ ವಜಾ ಮಾಡಲಾಗಿತ್ತು. ಅಲ್ಲದೆ, ಆಕೆಯ ಮೂಲಕ ಪೈಗಂಬರ್ ಅವಹೇಳನದ ಬಗ್ಗೆ ಕ್ಷಮೆಯನ್ನೂ ಕೇಳಿಸಲಾಗಿದೆ.
Hackers from Malaysia and Indonesia have waged a cyber war against India over now-suspended BJP spokesperson Nupur Sharma’s remarks on the Prophet, the crime branch of the Ahmedabad Police told India Today TV.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm