ಬ್ರೇಕಿಂಗ್ ನ್ಯೂಸ್
01-07-22 03:14 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 1: ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಪ್ರವಾಹದ ರೂಪದಲ್ಲಿ ನುಗ್ಗಲಾರಂಭಿಸಿದ್ದು, ಇದರಿಂದ ಇರಾಕ್, ಸೌದಿ ಅರೇಬಿಯಾ ಇನ್ನಿತರ ಸಾಂಪ್ರದಾಯಿಕ ತೈಲ ಪೂರೈಕೆದಾರ ಗಲ್ಫ್ ದೇಶಗಳು ತೀವ್ರ ಹಿನ್ನಡೆ ಅನುಭವಿಸಿವೆ. ಇದು ಜಗತ್ತಿನಲ್ಲೇ ಅತೀ ಹೆಚ್ಚು ತೈಲ ಖರೀದಿಸುತ್ತಿರುವ ಭಾರತದಲ್ಲಿ ಕಚ್ಚಾ ತೈಲದ ಲೆಕ್ಕಾಚಾರಗಳನ್ನೇ ಬುಡಮೇಲಾಗಿಸಿದೆ.
ಬ್ಲೂಮ್ಬರ್ಗ್ ಮತ್ತು ಎರಡು ತೈಲ ವಿಶ್ಲೇಷಣಾ ಸಂಸ್ಥೆಗಳು ಸಂಗ್ರಹಿಸಿದ ಟ್ಯಾಂಕರ್ ಟ್ರ್ಯಾಕಿಂಗ್ ಅಂಕಿ-ಅಂಶಗಳ ಪ್ರಕಾರ, ಉಕ್ರೇನ್ ದಾಳಿಯ ಬಳಿಕ ರಷ್ಯಾ ತನ್ನ ಸಾಂಪ್ರದಾಯಿಕ ತೈಲ ಖರೀದಿದಾರರಾಗಿದ್ದ ಯುರೋಪ್ ದೇಶಗಳ ಮಾರುಕಟ್ಟೆಯನ್ನು ಕಳಕೊಂಡಿದೆ. ಆದರೆ ಇದೇ ವೇಳೆ, ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ದೇಶ ಭಾರತಕ್ಕೆ ದಿನಕ್ಕೆ 10 ರಿಂದ 12 ಲಕ್ಷ ಬ್ಯಾರೆಲ್ ತೈಲವನ್ನು ಪೂರೈಕೆ ಮಾಡಲಾರಂಭಿಸಿದೆ. ಜೂನ್ ತಿಂಗಳಲ್ಲಿ ಈ ಪೂರೈಕೆ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಭಾರತಕ್ಕೆ ಕಚ್ಚಾ ತೈಲ ಪೂರೈಕೆ ವಿಚಾರದಲ್ಲಿ ಹಿಂದಿನಿಂದಲೂ ಇರಾಕ್, ಸೌದಿ ಅರೇಬಿಯಾ ಪ್ರಾಬಲ್ಯ ಹೊಂದಿತ್ತು. ಮೇ ತಿಂಗಳ ಅಂತ್ಯದಲ್ಲಿ ಕಡಿಮೆ ದರಕ್ಕೆ ರಷ್ಯಾ ಕಚ್ಚಾ ತೈಲ ನೀಡಲಾರಂಭಿಸಿದ್ದು ಸಹಜವಾಗಿಯೇ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಸದ್ಯಕ್ಕೆ ರಷ್ಯಾ ಇರಾಕ್ ಜೊತೆಗೆ ಭಾರೀ ಪೈಪೋಟಿ ನಡೆಸುತ್ತಿದ್ದು, ಸೌದಿ ಅರೇಬಿಯಾಕ್ಕಿಂತ ಹೆಚ್ಚು ತೈಲ ನೀಡುವ ಮೂಲಕ ಮುನ್ನಡೆ ಸಾಧಿಸಿದೆ. ರಷ್ಯಾದ ಪೈಪೋಟಿ ಇರಾಕ್ ಪಾಲಿಗೆ ಆತಂಕ ಹುಟ್ಟಿಸಿದ್ದು, ಏಷ್ಯಾದ ಮಾರುಕಟ್ಟೆ ಪಾಲನ್ನು ಉಳಿಸಿಕೊಳ್ಳಲು ರಿಯಾಯಿತಿ ದರದಲ್ಲಿ ನೀಡಬೇಕಾಗಿದೆ.
ಕೆಪ್ಲರ್, ವೊರ್ಟೆಕ್ಸಾ ಮತ್ತು ಬ್ಲೂಂಬರ್ಗ್ ಅಂಕಿ-ಅಂಶಗಳು ಭಾರತದ ತೈಲ ಮಾರುಕಟ್ಟೆಯಲ್ಲಿ ರಷ್ಯಾ ಪಡೆದಿರುವ ಪಾರಮ್ಯವನ್ನು ಒತ್ತಿಹೇಳುತ್ತಿವೆ. ಕೆಪ್ಲರ್ ಪ್ರಕಾರ ಜೂನ್ ತಿಂಗಳಲ್ಲಿ ಭಾರತಕ್ಕೆ ದಿನಕ್ಕೆ ಸರಾಸರಿ 12 ಲಕ್ಷ ಬ್ಯಾರೆಲ್ಗಳಂತೆ ರಷ್ಯಾ ತೈಲ ಆಗಮಿಸಿದೆ. ಇದು ದೇಶಕ್ಕೆ ಬರುತ್ತಿರುವ ಕಚ್ಚಾ ತೈಲದ ಕಾಲು ಭಾಗ ಎಂಬುದು ಗಮನಾರ್ಹ. ಇದೇ ವೇಳೆ, ಇರಾಕ್ನ ದೈನಂದಿನ ಸರಬರಾಜು ಸುಮಾರು 10.1 ಲಕ್ಷ ಬ್ಯಾರೆಲ್ಗಳಷ್ಟಿದೆ. ಸೌದಿ ಅರೇಬಿಯಾವು ದಿನಕ್ಕೆ 6.62 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆ ಮಾಡುತ್ತಿದೆ.
ವೋರ್ಟೆಕ್ಸಾ ಅಂಕಿ-ಅಂಶಗಳ ಪ್ರಕಾರ ಭಾರತಕ್ಕೆ ರಷ್ಯಾ ದಿನಕ್ಕೆ 11.6 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಸುತ್ತಿದೆ. ಇದೇ ವೇಳೆ ಇರಾಕ್ 11.3 ಲಕ್ಷ ಬ್ಯಾರೆಲ್ ಪೂರೈಕೆ ಮಾಡುತ್ತಿದ್ದು, ರಷ್ಯಾ ನಂತರದ ಸ್ಥಾನದಲ್ಲಿದೆ. ಬ್ಲೂಮ್ಬರ್ಗ್ ಮಾಹಿತಿ ಪ್ರಕಾರ ಈ ತಿಂಗಳು ರಷ್ಯಾದಿಂದ ದಿನಕ್ಕೆ 9.88 ಲಕ್ಷ ಬ್ಯಾರೆಲ್ಗಳು ಭಾರತಕ್ಕೆ ಬಂದಿದ್ದರೆ, ಇರಾಕ್ನಿಂದ ದಿನಕ್ಕೆ 10.03 ಲಕ್ಷ ತೈಲ ಬ್ಯಾರೆಲ್ಗಳು ಆಗಮಿಸಿವೆ. ಡೇಟಾ ಪ್ರಕಾರ, ಭಾರತ ಮತ್ತು ಚೀನಾದ ಮಾರುಕಟ್ಟೆಗಳಿಗೆ ರಷ್ಯಾದ ಪ್ರವೇಶದಿಂದಾಗಿ ಇರಾಕ್ ಮತ್ತು ಸೌದಿ ಅರೇಬಿಯಾ ದೇಶಗಳು ತೀವ್ರ ನಷ್ಟಕ್ಕೆ ಗುರಿಯಾಗಿವೆ.
Amid international sanctions imposed against Russia after its invasion of Ukraine in February, India’s imports from Russia have soared. India’s crude oil imports from Russia surged by 286% while coal imports (certain types) surged by over 345% in the January-April 2022 period. About 7.5% of India’s fuel needs (crude oil, coal, natural gas, etc.,) in April 2022 was sourced from Russia compared to 2% or less in many of the previous years. Russia was India’s sixth largest import partner in the April-May 2022 period. In several of the previous years, it had occupied the 20th position.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
17-07-26 10:32 am
HK News Staffer
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
17-07-26 09:07 pm
HK News Staffer
ಮಠದಕಣಿ ಮನೆ ಕಳ್ಳತನ ಬೆನ್ನತ್ತಿದ ಬರ್ಕೆ ಪೊಲೀಸರು; ನ...
17-07-26 08:11 pm
ಬಿಸಿ ರೋಡಿನಲ್ಲಿ ಯುವತಿ ಕೊಂದ ಆರೋಪಿ ಚೇತನ್ ಪಚ್ಚನಾಡ...
17-07-26 12:58 pm
Bc Road Murder Update, Mangalore: ಏಕಮುಖದ ಪ್ರೀ...
16-07-26 09:26 pm
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm