ಬ್ರೇಕಿಂಗ್ ನ್ಯೂಸ್
30-09-20 09:55 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆಪ್ಟಂಬರ್ 30: ಕೇಂದ್ರ ಸರ್ಕಾರ ಅನ್ಲಾಕ್ 5ರ ಮಾರ್ಗಸೂಚಿ ಪ್ರಕಟಿಸಿದ್ದು, ಚಿತ್ರಮಂದಿರ ಮತ್ತು ಈಜುಕೊಳ ತೆರೆಯಲು ಷರತ್ತುಬದ್ಧ ಅನುಮತಿಯನ್ನು ನೀಡಿದೆ. ಬಹುತೇಕ ಚಟುವಟಿಕೆಗಳಿಗೆ ಅಕ್ಟೋಬರ್ 15ರ ನಂತ್ರವೇ ಗ್ರೀನ್ ಸಿಗ್ನಲ್ ನೀಡಿದೆ.
ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್ಗಳು ಕಾರ್ಯರಂಭಕ್ಕೆ ಅವಕಾಶ ನೀಡಲಾಗಿದೆ. ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಅಕ್ಟೋಬರ್ 15ರಿಂದ ಕಂಟೈನ್ಮೆಟ್ ಪ್ರದೇಶ ಹೊರತು ಪಡಿಸಿ ಬೇರೆ ಎಲ್ಲಾಕಡೆ ಇವುಗಳ ಕಾರ್ಯಚಾರಣೆಗೆ ಅವಕಾಶ ಕಲ್ಪಿಸಲಾಗಿದೆ.
ಇದೇ ವೇಳೆ ಶಾಲೆಗಳ ಪುನರಾರಂಭದ ಕುರಿತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ತೆಗೆದುಕೊಳ್ಳಲು ನಿಯಮಗಳನ್ನು ಸರಳಗೊಳಿಸಲಾಗಿದೆ. ಪೋಷಕರ ಲಿಖಿತ ಒಪ್ಪಂದದೊಂದಿಗೆ ವಿದ್ಯಾರ್ಥಿಗಳು ಹಾಜರಾಬಹುದು ಎಂದು ತಿಳಿಸಿದೆ. ಈ ವೇಳೆ ಹಾಜರಾತಿ ಕಡ್ಡಾಯವಲ್ಲ. ಬೇಕಾದಲ್ಲಿ ಆನ್ಲೈನ್ ಕ್ಲಾಸ್ಗಳನ್ನು ಮುಂದುವರೆಸಬಹುದು ಎಂದು ತಿಳಿಸಿದೆ. ಈ ಕುರಿತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಈ ಕುರಿತು ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಿದೆ.
ಜೊತೆಗೆ ವ್ಯವಹಾರದಿಂದ ವ್ಯವಹಾರದ ಉದ್ದೇಶಕ್ಕಾಗಿ ನಡೆಯುವ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಿದ್ದು, ಇವೆಲ್ಲಾ ಮಾರ್ಗಸೂಚಿಗಳ ಪಾಲನೆ ಮಾಡುವುದು ಅಗತ್ಯ ಎಂದು ತಿಳಿಸಿದೆ. ಈ ಕುರಿತು ವಾಣಿಜ್ಯ ಇಲಾಖೆ ನಿರ್ದೇಶನ ನೀಡಲಿದೆ.
ಕ್ರೀಡಾಪಟುಗಳ ತರಬೇತಿಗಾಗಿ ಬಳಸುವ ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಇದಕ್ಕಾಗಿ ಕ್ರೀಡಾ ಸಚಿವಾಲಯದ ಮಾರ್ಗದರ್ಶನದಂತೆ ಕಾರ್ಯಚರಣೆ ನಡೆಸಬೇಕು ಎಂದು ತಿಳಿಸಿದೆ.
ಇದೇ ವೇಳೆ ಸಭೆ ಸಮಾರಂಭಗಳಲ್ಲಿ 100 ಜನರಿಗಿಂತ ಹೆಚ್ಚಿನ ಜನ ಭಾಗಿಯಾಗಲು ಅನುಮತಿ ನೀಡಲಾಗಿದೆ. ಇನ್ನು ಕಂಟೈನ್ಮೆಟ್ ಪ್ರದೇಶದಲ್ಲಿ ಅಕ್ಟೋಬರ್ 15ರ ಬಳಿಕ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm