ಬ್ರೇಕಿಂಗ್ ನ್ಯೂಸ್
18-06-22 03:52 pm HK News Desk ದೇಶ - ವಿದೇಶ
ಬೈಂದೂರು, ಜೂನ್ 18: ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿದ್ದ 18 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವುಗೈದ ಘಟನೆ ನಡೆದಿದ್ದು, ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.
ಮಹಾರಾಷ್ಟ್ರ ನಿವಾಸಿ ಈಶ್ವರ್ ದಾಲಿಚಂದ್ ಪೊರ್ವಾಲ್ (48) ಚಿನ್ನಾಭರಣ ಕಳಕೊಂಡ ವ್ಯಕ್ತಿ. ಈಶ್ವರ್ ದಾಲಿಚಂದ್ ಮುಂಬೈ ಮತ್ತು ಹೈದರಾಬಾದ್ ನಲ್ಲಿ ಚಿನ್ನಾಭರಣಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಮುಂಬೈಗೆ ತೆರಳಿದ್ದ ಈಶ್ವರ್ ಅಲ್ಲಿನ ಜುವೆಲ್ಲರಿಗಳಲ್ಲಿ ಚಿನ್ನವನ್ನು ಖರೀದಿಸಿದ್ದು ಒಟ್ಟು 466.960 ಗ್ರಾಮ್ ಚಿನ್ನವನ್ನು ಸೂಟ್ ಕೇಸ್ ನಲ್ಲಿ ಭದ್ರವಾಗಿಸಿ ಮುಂಬೈನಿಂದ ಮಂಗಳೂರಿಗೆ ಬಸ್ಸಿನಲ್ಲಿ ಬರುತ್ತಿದ್ದ.
ಬಸ್ಸನ್ನು ರಾತ್ರಿ ವೇಳೆ ಶಿರೂರಿನ ನೀರ್ಗದ್ದೆ ಎಂಬಲ್ಲಿ ನಿಲ್ಲಿಸಿದ್ದು, ಊಟ ಮಾಡುವವರು ಮಾಡಿಕೊಳ್ಳಿ ಎಂದು ಬಸ್ ಸಿಬಂದಿ ಪ್ರಯಾಣಿಕರಿಗೆ ತಿಳಿಸಿದ್ದರು. ಲಂಚ್ ವಿರಾಮ ಆಗಿದ್ದರಿಂದ ಪ್ರಯಾಣಿಕರು ಬಸ್ಸಿನಿಂದ ಇಳಿದಿದ್ದರು. ಇದೇ ವೇಳೆ, ಯಾರೋ ಅಪರಿಚಿತರು ಬಸ್ಸಿಗೆ ಹತ್ತಿದ್ದಾರೆ ಎನ್ನಲಾಗಿದ್ದು, ಬಸ್ಸಿನಲ್ಲಿದ್ದ ಬ್ಯಾಗ್ ಚೆಕ್ ಮಾಡಿ ಚಿನ್ನಾಭರಣ ಕದ್ದೊಯ್ದಿದ್ದಾರೆ ಎನ್ನುವ ಶಂಕೆಯಿದೆ. ಈಶ್ವರ್ ಊಟ ಮುಗಿಸಿ ಬಸ್ಸಿಗೆ ಬಂದು ನೋಡಿದಾಗ, ಮೇಲ್ಭಾಗದಲ್ಲಿ ಇಟ್ಟಿದ್ದ ಸೂಟ್ ಕೇಸ್ ಓಪನ್ ಆಗಿತ್ತು. ಬೀಗ ಒಡೆದು ಚಿನ್ನಾಭರಣ ಎಗರಿಸಿದ್ದು ಕಂಡುಬಂದಿದೆ. ಸೂಟ್ ಕೇಸ್ ಒಳಗಡೆ ಸ್ಟೀಲ್ ಬಾಕ್ಸ್ ನಲ್ಲಿ ಚಿನ್ನವನ್ನು ಇಡಲಾಗಿತ್ತು. ಈ ಬಗ್ಗೆ ಚಿನ್ನ ಕಳಕೊಂಡ ಈಶ್ವರ್ ದಾಲಿಚಂದ್ ಸ್ಥಳೀಯ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
A bag containing gold worth Rs 18 lac was stolen from the Mumbai-Mangaluru bus as the bus was stopped for tea break at Shiroor.Eshwar Dalichand Porwal (48), a resident of Maharashtra is the victim of this crime. He buys gold from Mumbai and Hyderabad and sells the same in Mangaluru for the past 10 years. Accordingly, he had purchased gold from various shops of Mumbai weighing 466.960 grams worth Rs 18 lac and had kept it in a steel box and was going to Mangaluru.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm