ಬ್ರೇಕಿಂಗ್ ನ್ಯೂಸ್
29-09-20 05:20 pm Bangalore Correspondent ದೇಶ - ವಿದೇಶ
ಬೆಂಗಳೂರು, ಸೆಪ್ಟಂಬರ್ 29: ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್, ಇಡೀ ಜಗತ್ತನ್ನೇ ತತ್ತರಿಸುವಂತೆ ಮಾಡಿರುವ ಬೆನ್ನಲ್ಲೇ ಈಗ ಚೀನಾದಿಂದ ಮತ್ತೊಂದು ರೀತಿಯ ವೈರಸ್ ಭಾರತಕ್ಕೆ ಲಗ್ಗೆ ಇಟ್ಟಿರುವುದು ದೃಢಪಟ್ಟಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಕ್ಯಾಟ್ ಕ್ಯೂ ವೈರಸ್ (CQV - Cat Que Virus) ಎಂದು ಹೆಸರಿಸಲಾಗಿರುವ ಈ ವೈರಸ್ ಚೀನಾ ಮತ್ತು ವಿಯೆಟ್ನಾಂ ದೇಶಗಳ ಹಲವರಲ್ಲಿ ಸೋಂಕಿಗೆ ಕಾರಣವಾಗಿದೆ. ಇದೇ ವೇಳೆ, ಭಾರತದಲ್ಲೂ ಈ ವೈರಸ್ ಕಾಣಿಸಿಕೊಂಡಿದ್ದು ಪತ್ತೆಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ನಡೆಸಿದ ಅಧ್ಯಯನದಲ್ಲಿ ಎರಡು ಸಿಕ್ಯೂವಿ ಸೋಂಕು ಪ್ರಕರಣ ಭಾರತದಲ್ಲಿ ಪತ್ತೆಯಾಗಿದೆ. ಆ ಎರಡೂ ಪ್ರಕರಣ ಕರ್ನಾಟಕದಲ್ಲೇ ಇರುವುದು ಆತಂಕ ಮೂಡಿಸಿದೆ. ಚೀನಾ ಮತ್ತು ವಿಯೆಟ್ನಾನಲ್ಲಿ ಸೊಳ್ಳೆ ಮತ್ತು ಹಂದಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಭಾರತದಲ್ಲೂ ಕೆಲವು ಜಾತಿಯ ಸೊಳ್ಳೆಗಳು ಈ ವೈರಸ್ ಸೋಂಕಿಗೆ ಸುಲಭವಾಗಿ ತುತ್ತಾಗುತ್ತವೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹಾಗೆಯೇ, ಹಂದಿಗಳಿಗೂ ಸೋಂಕು ಬೇಗ ಹರಡಲಿದೆ. ಹಂದಿ ಮತ್ತು ಸೊಳ್ಳೆಗಳ ಮೂಲಕ ಮನುಷ್ಯನಿಗೆ ರೋಗ ಹರಡುತ್ತದೆ ಎನ್ನುತ್ತಾರೆ ಐಸಿಎಂಆರ್ ವಿಜ್ಞಾನಿಗಳು.
ಕ್ಯಾಟ್ ಕ್ಯೂ ವೈರಸ್ ಸೋಂಕು ತಗುಲಿದವರಿಗೆ ಉಸಿರಾಟದ ತೊಂದರೆ, ಎದೆ ನೋವು, ನುಂಗಲು ತೊಂದರೆ, ಮಿದುಳು ಪೊರೆಯಲ್ಲಿ ಊತ, ಮಕ್ಕಳ ಮಿದುಳಿನಲ್ಲಿ ಊತ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಚೀನಾದಲ್ಲಿ ಹೊಸ ಸೋಂಕು ಬೆಳಕಿಗೆ ಬಂದ ನಂತರ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಯ ವಿಜ್ಞಾನಿಗಳು ದೇಶಾದ್ಯಂತ 883 ವ್ಯಕ್ತಿಗಳ ರಕ್ತದ ಮಾದರಿಗಳನ್ನ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದ್ದಾರೆ. ಯಾರಲ್ಲೂ ವೈರಸ್ ಸಿಕ್ಕಿಲ್ಲವಾದರೂ ಇಬ್ಬರಲ್ಲಿ ಈ ವೈರಾಣುವಿನ ಪ್ರತಿಕಾಯಗಳ(Anti-bodies) ಉಪಸ್ಥಿತಿ ಕಂಡುಬಂದಿದೆ. ಅಂದರೆ ಈ ಇಬ್ಬರಲ್ಲಿ ಸೋಂಕು ಬಂದು ಹೋಗಿದ್ದರ ಕುರುಹು ಇದು ಎನ್ನಲಾಗಿದೆ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm