ಬ್ರೇಕಿಂಗ್ ನ್ಯೂಸ್
10-06-22 10:15 am HK News Desk ದೇಶ - ವಿದೇಶ
ವಡೋದರಾ, ಜೂ 10: ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಗುಜರಾತ್ನ ವಡೋದರಾದ ಯುವತಿ, ನಿಗದಿಗಿಂತ ಮೂರು ದಿನ ಮುನ್ನವೇ 'ದಾಂಪತ್ಯ' ಜೀವನಕ್ಕೆ ಕಾಲಿರಿಸಿದ್ದಾಳೆ.
ಕೆಂಪು ಬಣ್ಣದ ಉಡುಗೆಯಲ್ಲಿ ವಧುವಿನ ಅಲಂಕಾರದಲ್ಲಿ 24 ವರ್ಷದ ಕ್ಷಮಾ ಬಿಂದು, ಹಣೆಯಲ್ಲಿ ದಪ್ಪನೆಯ ಸಿಂಧೂರ ಮತ್ತು ಕೊರಳಲ್ಲಿ ಮಂಗಳಸೂತ್ರ ಪ್ರದರ್ಶಿಸಿ, ತನ್ನ ಮದುವೆಯಾಯಿತು ಎಂದು ಬುಧವಾರ ಹೇಳಿಕೊಂಡಿದ್ದಾಳೆ. "ನಾನು ಕೊನೆಗೂ ವಿವಾಹಿತ ಮಹಿಳೆ ಎನಿಸಿಕೊಂಡಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ" ಎಂದು ಆಕೆ ತಿಳಿಸಿದ್ದಾಳೆ.

ಮದುವೆಯ ಎಲ್ಲ ಸಂಪ್ರದಾಯ ಹಾಗೂ ವಿಧಾನಗಳನ್ನೂ ಅನುಸರಿಸಬೇಕು. ತಾನು ವಿವಾಹಿತೆ ಆಗಬೇಕು. ಆದರೆ ಅದು ಗಂಡಿನ ಜತೆಗಲ್ಲ. ತನ್ನನ್ನು ತಾನೇ ಮದುವೆಯಾಗುವುದು (ಸೋಲೋಗಮಿ) ಎಂದು ಹೇಳಿಕೊಂಡಿದ್ದಳು. ಅದರಂತೆ ಮಂತ್ರೋಚ್ಛಾರ, ಸಪ್ತಪದಿ ಸಂಪ್ರದಾಯಗಳನ್ನು ಅನುಸರಿಸಿ, ಥೇಟು ಮದುವೆ ಮನೆಯಂತೆಯ ವಾತಾವರಣದಲ್ಲಿ ಕ್ಷಮಾ ಬಿಂದು ತನ್ನ ಮಾತಿನಂತೆ ಸ್ವಯಂ ವಿವಾಹವಾಗಿದ್ದಾಳೆ.
ಜೂನ್ 11ರಂದು ದೇವಸ್ಥಾನದಲ್ಲಿ ಮದುವೆಯಾಗುವುದಾಗಿ ಆಕೆ ಈ ಮೊದಲು ಘೋಷಿಸಿಕೊಂಡಿದ್ದಳು. ಆದರೆ ಇದು ವಿವಾದ ಸೃಷ್ಟಿಸಿತ್ತು. ದೇವಸ್ಥಾನದಲ್ಲಿ ಮದುವೆಯಾಗಲು ಬಿಡುವುದಿಲ್ಲ ಎಂದು ಸ್ಥಳೀಯ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದರು. ಆಕೆಯ 'ಸ್ವಯಂ ವಿವಾಹ'ಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಕೊನೆಗೆ ಗಲಾಟೆಗಳು ನಡೆಯಬಾರದು ಎಂದು ಮೂರು ದಿನ ಮುನ್ನವೇ ಆಕೆ ಮದುವೆಯಾಗಿದ್ದಾಳೆ.
)
ವಡೋದರಾದ ಗೋತ್ರಿ ಪ್ರದೇಶದಲ್ಲಿನ ಆಕೆಯ ಮನೆಯಲ್ಲಿ 40 ನಿಮಿಷಗಳ ಈ 'ಡಿಜಿಟಲೈಸ್ಡ್' ಮದುವೆ ಆಚರಣೆ ನಡೆದಿದೆ. ಆಕೆಯ ಜೀವನದುದ್ದಕ್ಕೂ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದ ಕೆಲವು ಗೆಳತಿಯರು ಆಕೆಯ ಮೇಲೆ ಹೂವಿನ ಮಳೆಗರೆದು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಮದುವೆಯಲ್ಲಿ ಕಾಣಿಸಿಕೊಳ್ಳದ ಎರಡು ಪ್ರಮುಖ ಅಂಶಗಳೆಂದರೆ, ವರ ಮತ್ತು ಪುರೋಹಿತರು! "ಇತರೆ ಹೆಣ್ಣುಮಕ್ಕಳಂತೆ, ಮದುವೆಯಾದ ಬಳಿಕ ನಾನು ನನ್ನ ಮನೆಯನ್ನು ತೊರೆಯುವ ಅಗತ್ಯವಿಲ್ಲ. ಇದು ಈ ಮದುವೆಯ ಮತ್ತೊಂದು ಬಹುದೊಡ್ಡ ಪ್ರಯೋಜನ" ಎಂದು ಆಕೆ ಹೇಳಿಕೊಂಡಿದ್ದಾಳೆ.

ಈ ರೀತಿ ಸ್ವಯಂ ಮದುವೆಯಾಗುತ್ತಿರುವ ಭಾರತದ ಮೊದಲ ಮಹಿಳೆ ಎಂದು ಕ್ಷಮಾ ಬಿಂದು ಹೇಳಿಕೊಂಡಿದ್ದಳು. "ಇದು ಬಹಳ ಗುಟ್ಟು ಗುಟ್ಟಾಗಿ ನಡೆಯಬೇಕಿತ್ತು. ಹೀಗಾಗಿ ನನ್ನ 10 ಗೆಳತಿಯರು ಮತ್ತು ಸಹೋದ್ಯೋಗಿಗಳು ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು" ಎಂದು ತಿಳಿಸಿದ್ದಾಳೆ

ಮದುವೆಗೂ ಮುನ್ನ ಆಕೆ 'ಮೆಹೆಂದಿ' ಮತ್ತು 'ಅರಿಶಿನ' ಶಾಸ್ತ್ರಗಳನ್ನು ಕೂಡ ಅನುಸರಿಸಿದ್ದಾಳೆ. ಕ್ಷಮಾ ಬಿಂದುವಿನ ಮನೆಗೆ ಅನೇಕರು ನಿರಂತರವಾಗಿ ಭೇಟಿ ನೀಡುತ್ತಿದ್ದರಿಂದ ಅಕ್ಕಪಕ್ಕದ ಮನೆಯವರು ತಕರಾರು ತೆಗೆದಿದ್ದರು. "ನನ್ನ ಮದುವೆ ದಿನ ಯಾರಾದರೂ ಗದ್ದಲ ಸೃಷ್ಟಿಸುವ ಸಾಧ್ಯತೆ ಇದೆ ಎಂದು ನನಗೆ ಅನಿಸಿತ್ತು. ನನ್ನ ವಿಶೇಷ ದಿನವನ್ನು ಹಾಳುಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಮೊದಲೇ ಮದುವೆಯಾದೆ" ಎಂದಿದ್ದಾಳೆ.
ನಾನು ದೇವಸ್ಥಾನದಲ್ಲಿ ಮದುವೆಯಾಗಲು ಬಯಸಿದ್ದೆ. ಆದರೆ ದುರದೃಷ್ಟವಶಾತ್, ಯಾವುದೇ ತೊಂದರೆ ಉಂಟಾಗದಂತೆ ತಪ್ಪಿಸಲು ಸ್ಥಳ ಬದಲಾವಣೆ ಮಾಡಬೇಕಾಯಿತು" ಎಂದು ಹೇಳಿದ್ದಾಳೆ. ಸಪ್ತಪದಿ ತುಳಿದಿರುವ ಆಕೆ, ಜೀವನದುದ್ದಕ್ಕೂ ತನ್ನನ್ನು ತಾನು ಖುಷಿಯಾಗಿ ಇರಿಸಿಕೊಳ್ಳುವ ಏಳು ಪ್ರತಿಜ್ಞೆಗಳನ್ನು ಮಾಡಿದ್ದಾಳೆ.
ಕ್ಷಮಾ ಬಿಂದುವಿನ 'ಸ್ವಯಂ ಪ್ರೀತಿ' ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು. ಆದರೆ ಕೆಲವರು ಆಕೆಗೆ ಬೆಂಬಲ ನೀಡಿದ್ದರು. ಅಪರಿಚಿತರು ಹಾಗೂ ಅನಪೇಕ್ಷಿತರು ಮದುವೆಗೆ ಅಡ್ಡಿಪಡಿಸದಂತೆ ಮನೆಯೊಳಗೆ ಬಾಗಿಲು ಹಾಕಿಕೊಂಡು ಈ ಮದುವೆ ನಡೆಸಲಾಗಿದೆ. ಈ ವೇಳೆ ಆಕೆಯ ಗೆಳತಿಯರು ನರ್ತಿಸಿ ಸಂಭ್ರಮಿಸಿದ್ದಾರೆ. ಮದುವೆ ಬಳಿಕ ಎರಡು ವಾರ ಗೋವಾದಲ್ಲಿ 'ಹನಿಮೂನ್' ಮಾಡುವುದಾಗಿ ಆಕೆ ಹೇಳಿಕೊಂಡಿದ್ದಳು.
The 24-year-old Gujarat woman, Kshama Bindu, kept her promise and tied the knot with herself. While the idea may sound bizarre, it is one of the growing relationship trends and is usually called sologamy or self-marriage. Speaking to Times of India, she said, “I am very happy to finally be a married woman." Her wedding ceremony had all the ordinary events, including pheras. The 24-year-old was to get married on June 11. However, she decided to prepone her wedding in order to avoid any type of controversy on the wedding day.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm