ಬ್ರೇಕಿಂಗ್ ನ್ಯೂಸ್
07-06-22 09:04 pm HK News Desk ದೇಶ - ವಿದೇಶ
ನವದೆಹಲಿ, ಜೂ 07: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ಹಾಗೂ ಸಹಚರರ ಮನೆಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಶೋಧ ಕಾರ್ಯ ನಡೆಸಿ, 2.85 ಕೋಟಿ ರೂ. ನಗದು ಹಾಗೂ 1.8 ಕೆಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿದೆ.
ಸತ್ಯೇಂದ್ರ ಜೈನ್ ತಮ್ಮ ಪತ್ನಿ, ಪುತ್ರಿಯರು, ಸ್ನೇಹಿತರು ಹಾಗೂ ಸಹಚರರ ಸಹಾಯದಿಂದ 16 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಹೊತ್ತಿದ್ದಾರೆ. ಮೇ 20 ರಂದು ಸತ್ಯೇಂದ್ರ ಜೈನ್ ಅವರನ್ನು ಇಡಿ ಬಂಧಿಸಿತ್ತು. ಪ್ರಸ್ತುತ ಸತ್ಯೇಂದ್ರ ಜೈನ್ ಇಡಿ ವಶದಲ್ಲಿದ್ದಾರೆ.


ಶೋಧ ಕಾರ್ಯದ ವೇಳೆ ಸಿಕ್ಕಿರುವ 500 ಹಾಗೂ 2,000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಜೋಡಿಸಿ `ಇಡಿ’ ಎಂದು ವಿನ್ಯಾಸಗೊಳಿಸಲಾಗಿದೆ. ನೋಟಿನ ಕಂತೆಗಳಿಂದಲೇ ಇಡಿ ಎಂದು ವಿನ್ಯಾಸಗೊಳಿಸಿ ತೆಗೆದಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
![]()
2015 ಫೆಬ್ರವರಿಯಿಂದ 2017ರ ಮೇ ತಿಂಗಳಿನ ವರೆಗೆ ದೆಹಲಿ ಸರ್ಕಾರದ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿ, 2018ರಲ್ಲಿ ಪ್ರಕರಣ ದಾಖಲಿಸಿತ್ತು. ಇದೀಗ ಇಡಿ, ಸಿಬಿಐ ದಾಖಲಿಸಿರುವ ಎಫ್ಐಆರ್ ಆಧಾರದ ಮೇಲೆ ಐಪಿಸಿ ಸೆಕ್ಷನ್ 109 ಹಾಗೂ ಸೆಕ್ಷನ್ 13(2)ರ ಅಡಿ ತನಿಖೆ ನಡೆಸುತ್ತಿದೆ.
ಪ್ರಧಾನಿ ಮೋದಿ ಆಪ್ ಸರ್ಕಾರಗಳ ಹಿಂದೆ ಬಿದ್ದಿದ್ದಾರೆ:

ಪ್ರಧಾನಿ ನರೇಂದ್ರ ಮೋದಿ ಆಮ್ ಆದ್ಮಿ ಪಕ್ಷ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ, ಪಂಜಾಬಿನಲ್ಲಿನ ಆಪ್ ಸರ್ಕಾರಗಳ ಹಿಂದೆ ಬಿದ್ದಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಆರೋಪಿಸಿದ್ದಾರೆ.
![]()
ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ಸತ್ಯೇಂದ್ರ ಜೈನ್ ವಿರುದ್ಧ ಆರೋಪ ಸುಳ್ಳು ಎಂದಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಬಲದೊಂದಿಗೆ ಪ್ರಧಾನಿ ಮೋದಿ ಆಪ್ ಪಕ್ಷ ಮತ್ತು ದೆಹಲಿ ಮತ್ತು ಪಂಜಾಬಿನ ಸರ್ಕಾರಗಳ ಹಿಂದೆ ಬಿದ್ದಿದ್ದಾರೆ. ಸುಳ್ಳಿನ ನಂತರ ಸುಳ್ಳು, ಸುಳ್ಳಿನ ನಂತರ ಸುಳ್ಳು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ನೀವು( ಪ್ರಧಾನಿ) ಎಲ್ಲಾ ತನಿಖಾ ತಂಡಗಳ ಬಲವನ್ನು ಹೊಂದಿದ್ದೀರಿ ಆದರೆ, ದೇವರು ನಮ್ಮೊಂದಿಗೆ ಇದ್ದಾನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
The Enforcement Directorate (ED) on Monday conducted searches at Delhi Health Minister Satyendar Jain's residence and other locations in the national capital in connection with a money laundering case filed against the minister.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm