ಬ್ರೇಕಿಂಗ್ ನ್ಯೂಸ್
06-06-22 10:59 am HK News Desk ದೇಶ - ವಿದೇಶ
ಅಬುಜಾ, ಜೂ 06: ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ಬಂದೂಕುಧಾರಿಯೋರ್ವ ಸಾಮೂಹಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿದ್ದಾರೆ.
ಭಾನುವಾರ ಬೆಳಗಿನ ಜಾವ ಚರ್ಚ್ನಲ್ಲಿ ಪ್ರಾರ್ಥನೆ ಮಾಡಲು ಅನೇಕ ಮಂದಿ ಆಗಮಿಸಿದ್ದರು. ಈ ವೇಳೆ ಮುತ್ತಿಗೆ ಹಾಕಿ ಬಂದೂಕುಧಾರಿ ಆರಂಭದಲ್ಲಿ ಹೊರಗಡೆ ದಾಳಿ ನಡೆಸಿ ನಂತರ ಒಳಗಡೆ ದಾಳಿ ನಡೆಸಿದ್ದಾನೆ. ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಮನೆಬಂದಂತೆ ಗುಂಡು ಹಾರಿಸಿದ್ದಾನೆ.
ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯೊ ಇಬುಕುನ್ ಒಡುನ್ಲಾಮಿ, ಬಂದೂಕುಧಾರಿ ಚರ್ಚ್ ಕಟ್ಟಡದ ಹೊರಗೆ ಮತ್ತು ಒಳಗೆ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಯಾರು ಎನ್ನುವುದು ತಿಳಿದು ಬಂದಿಲ್ಲ.
ನಂತರ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಒಂಡೋ ರಾಜ್ಯ ಗವರ್ನರ್ ಅರಕುನ್ರಿನ್ ಒಲುವರೊಟಿಮಿ ಅಕೆರೆಡೊಲು ಅವರು, ಇದೊಂದು ದೊಡ್ಡ ಹತ್ಯಾಕಾಂಡ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ದಾಳಿಕೋರರ ಗುರುತು ಮತ್ತು ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲ. “ಚರ್ಚ್ನಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗ ಅಪರಿಚಿತ ಬಂದೂಕುಧಾರಿಗಳು ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ ಮಾಡಿದರು. ಈ ವೇಳೆ ಅನೇಕರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು. ಪ್ಯಾರಿಷ್ನ ಬಿಷಪ್ ಮತ್ತು ಪಾದ್ರಿಗಳು ದಾಳಿಯಿಂದ ಹಾನಿಗೊಳಗಾಗದೆ ಬದುಕುಳಿದಿದ್ದಾರೆ” ಎಂದು ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ವಕ್ತಾರ ರೆವರೆಂಡ್ ಆಗಸ್ಟೀನ್ ಇಕ್ವು ಹೇಳಿದ್ದಾರೆ.
ನೈಜೀರಿಯಾ ಇಸ್ಲಾಮಿಕ್ ಬಂಡಾಯದ ವಿರುದ್ಧ ಹೋರಾಡುತ್ತಿದೆ ;
ಅಧ್ಯಕ್ಷ ಮುಹಮ್ಮದ್ ಬುಹಾರಿ ದಾಳಿಯನ್ನು ಖಂಡಿಸಿದ್ದು, ಇದು ಹೇಯ ಕೃತ್ಯ ಎಂದು ಕರೆದಿದ್ದಾರೆ. ಪೋಪ್ ಫ್ರಾನ್ಸಿಸ್ ಸಂತ್ರಸ್ತರಿಗಾಗಿ ಪ್ರಾರ್ಥಿಸಿದ್ದಾರೆ ಎಂದು ವ್ಯಾಟಿಕನ್ ಹೇಳಿದೆ. ನೈಜೀರಿಯಾ ಈಶಾನ್ಯದಲ್ಲಿ ಇಸ್ಲಾಮಿಕ್ ದಂಗೆ ಮತ್ತು ಸುಲಿಗೆ ದಾಳಿ ಮತ್ತು ಅಪಹರಣಗಳನ್ನು ನಡೆಸುವ ಸಶಸ್ತ್ರ ಗ್ಯಾಂಗ್ಗಳ ವಿರುದ್ಧ ಹೋರಾಡುತ್ತಿದೆ. ಈ ದಾಳಿಗಳು ಹೆಚ್ಚಾಗಿ ವಾಯುವ್ಯದಲ್ಲಿ ಸಂಭವಿಸುತ್ತವೆ. ಆದರೆ ನೈಋತ್ಯದಲ್ಲಿ ಇಂತಹ ದಾಳಿಗಳು ಕಡಿಮೆ.
What happened today is tragic. No better way to qualify it. It is the most tragic event! Horrific! What we have seen in America is a child play to what has happened here. That it happened in a church, to say the least, is most condemnable. I feel terribly sad. pic.twitter.com/f2NVh1tzZZ
— Arakunrin Akeredolu (@RotimiAkeredolu) June 5, 2022
I was at the scene of the terror attack on innocent worshipers at St. Francis Catholic Church in Owo, today. I also visited the hospitals where survivors of the attack are receiving medical attention.
— Arakunrin Akeredolu (@RotimiAkeredolu) June 5, 2022
The attack was the most dastardly act that could happen in any society. pic.twitter.com/I8xv80CTfL
At least 50 people including women and children were killed and others injured after gunmen attacked a Catholic church in Nigeria's Ondo state during mass yesterday, according to media reports. The attack took place in Owo, a town in Ondo state, as many worshippers gathered at the church during the morning mass on Sunday. According to local news agency, the gunmen first detonated explosives near the church altar before firing at the worshipers and killing scores of them on the spot.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm