ಬ್ರೇಕಿಂಗ್ ನ್ಯೂಸ್
02-06-22 06:23 pm HK News Desk ದೇಶ - ವಿದೇಶ
ವಡೋದರಾ, ಜೂನ್ 2: ಗುಜರಾತಿನ ವಡೋದರಾ ನಗರದ 24 ವರ್ಷದ ಯುವತಿಯೊಬ್ಬಳಿಗೆ ಮದುವೆ ಸಿದ್ಧತೆ ನಡೆದಿದೆ. ಜೂನ್ 9ರಂದು ಮೆಹಂದಿ. 11ರಂದು ಗೋತ್ರಿಯ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ. ಆದರೆ, ಇನ್ನೂ ಮದುವೆಗೆ ಗಂಡು ಸಿದ್ಧವಾಗಿಲ್ಲ. ಆದರೂ ಮದುವೆಯಂತೂ ಆಗುತ್ತಾಳಂತೆ. ಏನೋ ಹಿಂದೆ ರಾಜರ ಕಾಲದಲ್ಲಿದ್ದಂತೆ ಸ್ವಯಂವರ ಮಾಡಿಕೊಳ್ಳುತ್ತಾಳೆ ಅಂದರೆ ತಪ್ಪು ಗ್ರಹಿಕೆ. ಆಕೆ ತನ್ನನ್ನು ತಾನೇ ಮದುವೆಯಾಗುತ್ತಾಳಂತೆ !
ಹೌದು.. ವಡೋದರಾ ನಗರದ ಕ್ಷಮಾ ಬಿಂದು ಎಂಬ ಯುವತಿ ತನ್ನನ್ನು ತಾನೇ ಮದುವೆ ಆಗುತ್ತಿದ್ದಾಳಂತೆ. ಅದಕ್ಕಾಗಿ ತನ್ನ ಹೆತ್ತವರನ್ನೂ ಒಪ್ಪಿಸಿಕೊಂಡು ಮದುವೆ ಕಾರ್ಯಕ್ಕೆ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದಾಳೆ. ಸಾಂಪ್ರದಾಯಿಕ ಮದುವೆ ಕಾರ್ಯದ ಎಲ್ಲ ಹಂತಗಳನ್ನೂ ಪೂರೈಸಲಿದ್ದಾಳಂತೆ. ತಾನು ಹರೆಯಕ್ಕೆ ಬರುವಾಗಲೇ ಬೇರೊಬ್ಬರನ್ನು ಮದುವೆಯಾಗಬೇಕೆಂದು ಅನಿಸಿಯೇ ಇಲ್ಲ. ಏನು ಸಂಪ್ರದಾಯ ಇದೆಯೋ, ಅದು ನನಗೆ ಹೀಗೆ ಆಗಬೇಕು ಎಂದು ಕಡ್ಡಾಯವನ್ನೂ ಮಾಡಿಲ್ಲ. ಆದರೆ ನಾನು ಕೂಡ ಮದುಮಗಳು ಆಗಬೇಕು ಅಂದ್ಕೊಂಡಿದ್ದೆ. ಅದಕ್ಕಾಗಿ ನನ್ನನ್ನು ನಾನೇ ಮದುವೆಯಾಗಲು ನಿರ್ಧರಿಸಿದ್ದೇನೆ. ಈ ರೀತಿಯ ಪದ್ಧತಿಗೆ ಸೊಲೊಗಮಿ ಎನ್ನುತ್ತಾರೆ ಎಂದು ಹೇಳಿಕೊಂಡಿದ್ದಾಳೆ ಕ್ಷಮಾ.

ವೆಬ್ ಸಿರೀಸ್ ಒಂದರಲ್ಲಿ ನಟಿಯೊಬ್ಬಳು ಪ್ರತಿ ಮಹಿಳೆಯೂ ಮದುಮಗಳಾಗಲು ಇಚ್ಚಿಸುತ್ತಾಳೆ, ಆದರೆ ಯಾರದ್ದೋ ಪತ್ನಿಯಾಗಲು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಅದರಂತೆಯೇ ನಾನು ಯಾರನ್ನೋ ಮದುವೆಯಾಗುವ ಬದಲು ನಾನು ಹೆಚ್ಚು ಪ್ರೀತಿಸುವ ನನ್ನನ್ನೇ ವರಿಸಲು ಇಚ್ಚಿಸಿದ್ದೇನೆ ಎಂದಿದ್ದಾಳೆ. ಅಂದಹಾಗೆ, ಕ್ಷಮಾ ಸಮಾಜಶಾಸ್ತ್ರದಲ್ಲಿ ಎಂಎ ಪೂರೈಸಿದ್ದು ಖಾಸಗಿ ಕಂಪನಿ ಒಂದರಲ್ಲಿ ಎಚ್ ಆರ್ ವಿಭಾಗದಲ್ಲಿ ಕೆಲಸದಲ್ಲಿದ್ದಾಳೆ.

ತಮ್ಮನ್ನು ತಾವು ಮದುವೆಯಾಗುವುದಂದ್ರೆ, ಅದೊಂದು ಒಪ್ಪಿಗೆಯ ಸಂಬಂಧ. ಷರತ್ತು ರಹಿತ ಪ್ರೀತಿಗೆ ಬೆಸೆಯುವ ಬಂಧ. ನಮ್ಮನ್ನು ನಾವು ಒಪ್ಪಿಕೊಳ್ಳುವುದು ಮತ್ತು ಸ್ವೀಕರಿಸಿಕೊಳ್ಳುವುದು. ಕೆಲವರು ಇನ್ಯಾರನ್ನೋ ಪ್ರೀತಿಸಿ ಮದುವೆಯಾಗುತ್ತಾರೆ. ನಾನು ನನ್ನನ್ನೇ ಪ್ರೀತಿಸಿ ಮದುವೆ ಮಾಡಿಕೊಳ್ಳುತ್ತಿದ್ದೇನೆ ಅಷ್ಟೇ. ಕೆಲವರಿಗೆ ಇದನ್ನು ಕೇಳಿ ವಿಚಿತ್ರ ಅನಿಸಬಹುದು. ಅದು ಮಹಿಳೆಯರಿಗೆ ಬಿಟ್ಟ ವಿಷಯ ಎಂದು ಸುಮ್ಮನಿದ್ದುಬಿಡಿ ಎಂದಿದ್ದಾಳೆ.

ಈಗಾಗಲೇ ತನ್ನ ಮದುವೆ ಕಾರ್ಯದ ಆಮಂತ್ರಣವನ್ನು ಗೆಳೆಯ-ಗೆಳತಿಯರಿಗೆಲ್ಲ ಕೊಟ್ಟಿದ್ದಾಳೆ. ಜೂನ್ 9ರಿಂದ ಮೆಹಂದಿ ಸೇರಿದಂತೆ ಮದುವೆ ಸಂಪ್ರದಾಯ ನಡೆಯಲಿದೆ. ವರನು ಹೇಳುವ ಐದು ಪ್ರತಿಜ್ಞೆಯನ್ನೂ ತಾನೇ ನೆರವೇರಿಸಿಕೊಳ್ಳುವುದಾಗಿ ಹೇಳಿದ್ದಾಳೆ. ಇದೆಲ್ಲವೂ ವಡೋದರಾ ನಗರದ ಗೋತ್ರಿ ಎಂಬಲ್ಲಿನ ದೇವಸ್ಥಾನದಲ್ಲಿ ನಡೆಯಲಿದೆಯಂತೆ. ವಿಶೇಷ ಅಂದ್ರೆ, ಕ್ಷಮಾ ಮದುವೆಯ ನಂತರ ಗೋವಾಕ್ಕೆ ಎರಡು ವಾರದ ಹನಿಮೂನ್ ಟೂರ್ ಇಟ್ಟುಕೊಂಡಿದ್ದಾಳೆ. ಜೊತೆಗೆ ಯಾರು ಇರುತ್ತಾರೆ ಅನ್ನುವುದನ್ನು ಮಾತ್ರ ಹೇಳಿಕೊಂಡಿಲ್ಲ.
This month, India will witness its first sologamy as 24-year-old Kshama Bindu from Vadodra marries herself on June 11. Yes, you read it right! In a ‘never witnessed before’ kind of marriage, a young woman from Gujarat will tie knot with herself in a wedding ceremony that will feature all the traditional festivities and guests, except a groom.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm