ಬ್ರೇಕಿಂಗ್ ನ್ಯೂಸ್
01-06-22 09:57 am HK Desk ದೇಶ - ವಿದೇಶ
ಕೋಲ್ಕತಾ, ಜೂ.01: ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಮೇ 31, ಮಂಗಳವಾರ ಸಂಗೀತ ಕಾರ್ಯಕ್ರಮದ ಮಧ್ಯೆ ಎದೆನೋವು ಕಾಣಿಸಿಕೊಂಡಿದ್ದು ಹೋಟೆಲ್ಗೆ ವಾಪಸ್ ಆಗುವ ವೇಳೆ ಮೆಟ್ಟಿಲಲ್ಲಿ ಕುಸಿದುಬಿದ್ದ ಮೃತಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಹಳಷ್ಟು ಮಂದಿ ಕೆಕೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸಹ-ಗಾಯಕರಾದ ಸೋನು ನಿಗಮ್, ಶ್ರೇಯಾ ಘೋಷಾಲ್, ಮೋಹಿತ್ ಚೌಹಾಣ್ ಮೊದಲಾದವರು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಮರುಗಿದ್ದಾರೆ.
"ಕಣ್ಣೀರು ನಿಲ್ಲುವುದಿಲ್ಲ. ಎಂಥ ವ್ಯಕ್ತಿ ಅವರು, ಎಂಥ ಧ್ವನಿ, ಎಂಥ ಮನಸು, ಎಂಥ ಮನುಷ್ಯ ಅವರು, ಕೆಕೆ ಚಿರಾಯು" ಎಂದು ಖ್ಯಾತ ಸಂಗೀತ ನಿರ್ದೇಶಕ, ಗೀತೆ ರಚನೆಕಾರ ವಿಶಾಲ್ ದಾಡ್ಲಾನಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಕೆಕೆ ಪೂರ್ಣ ಹೆಸರು ಕೃಷ್ಣಕುಮಾರ್ ಕುನ್ನತ್. ಮಲಯಾಳಿ ಕುಟುಂಬದವರಾದ ಕೆಕೆ ಹುಟ್ಟಿದ್ದು ದೆಹಲಿಯಲ್ಲಿ. ಯಾವುದೇ ಗಾಯನ ತರಬೇತಿ ಇಲ್ಲದೆಯೇ ಹಾಡಿನ ಕ್ಷೇತ್ರಕ್ಕೆ ಕಾಲಿಟ್ಟ ಧೀಮಂತ ಪ್ರತಿಭೆ ಅವರು. ಹೊಟೇಲ್ ಉದ್ಯಮದಲ್ಲಿ ಮಾರ್ಕೆಟಿಂಗ್ ಅಸೋಸಿಯೇಟ್ ಆಗಿ ಸ್ವಲ್ಪ ಕಾಲ ಕೆಲಸ ಮಾಡಿದ ಅವರು ಹಾಡಿನ ಹುಚ್ಚಿಗೆ ಸಿಕ್ಕು ದೆಹಲಿಯಿಂದ ಮುಂಬೈಗೆ ಬಂದಿದ್ದರು.
ಸಿನಿಮಾದ ಹಿನ್ನೆಲೆ ಗಾಯನಕ್ಕೆ ಬರುವ ಮುನ್ನ ಜಾಹೀರಾತುಗಳಿಗೆ ಧ್ವನಿ (ಜಿಂಗಲ್ಸ್) ನೀಡುತ್ತಿದ್ದರು. 1994ರಿಂದ 1998ರವರೆಗೆ ಅವರು 11 ಭಾಷೆಗಳಲ್ಲಿ 3500ಕ್ಕೂ ಹೆಚ್ಚು ಜಿಂಗಲ್ಸ್ ಹಾಡಿದ್ದರು. ಅದಾದ ಬಳಿಕ ಅವರು ಆಲ್ಬಂ ಸಾಂಗ್ಗಳ ಮೂಲಕ ಜನಪ್ರಿಯತೆ ಗಳಿಸಿದರು. 1999ರಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದಲ್ಲಿ ಅವರು ಹಾಡಿದ ಎರಡು ಹಾಡುಗಳು ಸೂಪರ್ ಡೂಪರ್ ಎನಿಸಿದವು. 'ತಡಪ್ ತಡಪ್ ಕಿ ಇಸ್ ದಿಲ್ ಮೇ' ಮತ್ತು 'ಕಾಯ್ಪೋಚೆ' ಹಾಡುಗಳು ಎರಡು ದಶಕಗಳ ಹಿಂದಿನ ಕಾಲೇಜು ಹುಡುಗ ಹುಡುಗಿಯರ ಫೇವರಿಟ್ ಎನಿಸಿದ್ದವು.
ಕೆಕೆ ಜನಪ್ರಿಯ ಹಾಡುಗಳು:
700ಕ್ಕೂ ಹೆಚ್ಚು ಹಾಡು:
ಕೆಕೆ ಹಿಂದಿ ಭಾಷೆಯಲ್ಲಿ ಅತಿಹೆಚ್ಚು ಹಾಡಿದ್ದಾರೆ. ಅವರ ಅವಿಸ್ಮರಣೀಯ ಹಾಡುಗಳ ದೊಡ್ಡ ಪಟ್ಟಿಯೇ ಇದೆ. ಹಿಂದಿ ಅಲ್ಲದೇ ತಮಿಳು, ತೆಲುಗು, ಕನ್ನಡ, ಮಲಯಾಳಂ, ಗುಜರಾತಿ, ಬಂಗಾಳಿ ಸೇರಿ ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಅವರು ಹಾಡಿದ್ಧಾರೆ. ಹಿಂದಿಯಲ್ಲೇ 500ಕ್ಕೂ ಹೆಚ್ಚು ಹಾಡುಗಳು ಅವರ ಕಂಠಸಿರಿಯಲ್ಲಿ ಬಂದಿವೆ. ನೂರಕ್ಕೂ ಹೆಚ್ಚು ಹಾಡುಗಳು ಆಲ್ಟೈಮ್ ಹಿಟ್ ಎನಿಸಿವೆ. ಹಿಂದಿ ಬಿಟ್ಟರೆ ಅವರು ಹೆಚ್ಚು ಹಾಡಿದ್ದು ತಮಿಳು ಮತ್ತು ತೆಲುಗಿನಲ್ಲಿ. ಕನ್ನಡದಲ್ಲಿ ಸುಮಾರು 15 ಹಾಡು ಹಾಡಿರಬಹುದು. ಕುತೂಹಲವೆಂದರೆ, ಕೆಕೆ ಮಲಯಾಳಿಯಾದರೂ ಮಲಯಾಳಂ ಭಾಷೆಯಲ್ಲಿ ಅವರು ಹಾಡಿದ್ದು ಒಂದೇ ಹಾಡು.
Saddened by the untimely demise of noted singer Krishnakumar Kunnath popularly known as KK. His songs reflected a wide range of emotions as struck a chord with people of all age groups. We will always remember him through his songs. Condolences to his family and fans. Om Shanti.
— Narendra Modi (@narendramodi) May 31, 2022
Singer KK died hours after a concert in Kolkata today. His official Instagram page has visuals of a concert in a Kolkata auditorium held some 10 hours ago. The 53-year-old singer collapsed at the hotel where he was staying after the concert in Kolkata's Nazrul Mancha auditorium. Doctor at CMRI hospital said the singer was brought dead.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm