ಬ್ರೇಕಿಂಗ್ ನ್ಯೂಸ್
25-05-22 05:38 pm HK News Desk ದೇಶ - ವಿದೇಶ
ನವದೆಹಲಿ, ಮೇ 25: ಕಾಂಗ್ರೆಸ್ ಪಕ್ಷದಲ್ಲಿ ರೆಬಲ್ ನಾಯಕನೆಂದೇ ಗುರುತಿಸಿಕೊಂಡಿದ್ದ ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷ ತ್ಯಜಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬುಧವಾರ ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿಯ ಬೆಂಬಲದಲ್ಲಿ ಸ್ವತಂತ್ರವಾಗಿ ರಾಜ್ಯಸಭೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಸಂಸದ ರಾಮಗೋಪಾಲ್ ಯಾದವ್ ಜೊತೆಗಿದ್ದರು.
ಸುದೀರ್ಘ 30 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ ತೊರೆದು ಸ್ವತಂತ್ರವಾಗಿ ಇರಲು ಬಯಸಿದ್ದೇನೆ. ಈ ಬಗ್ಗೆ ಅಖಿಲೇಶ್ ಯಾದವ್ ಅವರಲ್ಲಿ ಬೆಂಬಲ ಕೇಳಿದ್ದು ಸಪೋರ್ಟ್ ಮಾಡಿದ್ದಾರೆ. ಕಾಂಗ್ರೆಸ್ ಬಗ್ಗೆ ಯಾವುದೇ ಟೀಕೆ ಮಾಡಲು ಇಚ್ಚಿಸುವುದಿಲ್ಲ. ನಾನು ವಿರೋಧ ಪಕ್ಷಗಳ ಹಲವು ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನನ್ನ ಹೆಂಡ್ತಿಯೂ ನಾವು ಉತ್ತರ ಪ್ರದೇಶದ ಜೊತೆ ಸಂಬಂಧ ಹೊಂದಿರುವುದನ್ನು ಹೇಳಿದ್ದಾಳೆ. ಕಳೆದ ಬಾರಿಯೂ ಉತ್ತರ ಪ್ರದೇಶದಿಂದಲೇ ನಾನು ಅಭ್ಯರ್ಥಿಯಾಗಿದ್ದೆ. ಮುಂದಿನ ಆರು ವರ್ಷಗಳ ಕಾಲ ಸಂಸತ್ತಿನಲ್ಲಿ ಉತ್ತರ ಪ್ರದೇಶದ ಪರವಾಗಿ ದನಿಯೆತ್ತಲಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಮೇ 16ರಂದೇ ರಾಜಿನಾಮೆ ನೀಡಿದ್ದು ಇನ್ನೆಂದು ಕಾಂಗ್ರೆಸ್ ನಾಯಕನಾಗಿರುವುದಿಲ್ಲ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ನಾವು ವಿರೋಧ ಪಕ್ಷದಲ್ಲಿದ್ದು ಮೋದಿ ಸರಕಾರದ ವಿರುದ್ಧ ಮೈತ್ರಿಕೂಟ ರಚಿಸಲು ಪ್ರಯತ್ನಿಸಬೇಕಾಗಿದೆ. 2024ರಲ್ಲಿ ಮೋದಿ ಸರಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಲು ವಾತಾವರಣ ಸೃಷ್ಟಿಸಬೇಕು. ನಾವೆಲ್ಲ ಸೇರಿ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಕಪಿಲ್ ಸಿಬಲ್ ಇದೇ ವೇಳೆ ಹೇಳಿದರು.
ರಾಜ್ಯಸಭೆ ಆಯ್ಕೆಗೆ ಅರ್ಹತೆ ಕಳಕೊಂಡ ಕಾಂಗ್ರೆಸ್
ಕಪಿಲ್ ಸಿಬಲ್ ಸೇರಿದಂತೆ ಉತ್ತರ ಪ್ರದೇಶದಿಂದ ಆಯ್ಕೆಯಾದ ಹನ್ನೊಂದು ರಾಜ್ಯಸಭೆ ಸದಸ್ಯರ ಅವಧಿ ಜುಲೈ 4ಕ್ಕೆ ಕೊನೆಯಾಗಲಿದೆ. ಈ ಪೈಕಿ ಬಿಜೆಪಿ ಐದು, ಸಮಾಜವಾದಿ ಪಾರ್ಟಿ ನಾಲ್ಕು, ಬಿಎಸ್ಪಿ ಮೂರು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಹೊಂದಿತ್ತು. ಆದರೆ ಈ ಬಾರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನ, ಬಿಎಸ್ಪಿ ಒಂದು ಸ್ಥಾನವನ್ನು ಮಾತ್ರ ಹೊಂದಿರುವುದರಿಂದ ಆ ಪಕ್ಷಗಳು ರಾಜ್ಯಸಭೆಗೆ ಆಯ್ಕೆ ಮಾಡುವ ಅರ್ಹತೆ ಹೊಂದಿಲ್ಲ. ರಾಜ್ಯಸಭೆಯಲ್ಲಿ ಒಟ್ಟು 245 ಸದಸ್ಯ ಬಲ ಇದ್ದು, ಅದರಲ್ಲಿ 31 ಸದಸ್ಯರು ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಾರೆ.
ಕಪಿಲ್ ಸಿಬಲ್ ನಾಮಪತ್ರ ಸಲ್ಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಕಪಿಲ್ ಸಿಬಲ್ ನಾಮಪತ್ರ ಸಲ್ಲಿಸಿದ್ದು ಅವರು ಎಸ್ಪಿ ಬೆಂಬಲದಲ್ಲಿ ರಾಜ್ಯಸಭೆ ಹೋಗಲಿದ್ದಾರೆ. ಅವರೊಬ್ಬ ಹಿರಿಯ ವಕೀಲರಾಗಿದ್ದು, ರಾಜ್ಯಸಭೆಯಲ್ಲಿ ಸಮಾಜವಾದಿ ಪಾರ್ಟಿ ಪರವಾಗಿ ಮತ್ತು ಅವರ ಸ್ವಂತ ನಿಲುವನ್ನು ಹೊಂದಲಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್, ಕಪಿಲ್ ಸಿಬಲ್ ಅವರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸಲು ಅರ್ಹತೆ ಕಳಕೊಂಡಿದ್ದರಿಂದ ಸಹಜವಾಗಿಯೇ ಎಸ್ಪಿ ಬೆಂಬಲ ಪಡೆದು ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ.
Senior Congress leader and former union minister Kapil Sibal Wednesday filed his nomination for Rajya Sabha elections in the presence of Samajwadi Party chief Akhilesh Yadav and party MP Ram Gopal Yadav and said that he had quit the Congress on May 16. Sibal also said he has filed the nomination as an Independent candidate.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm