ಬ್ರೇಕಿಂಗ್ ನ್ಯೂಸ್
24-05-22 02:14 pm HK News Desk ದೇಶ - ವಿದೇಶ
ನವದೆಹಲಿ, ಮೇ 24: ಐತಿಹಾಸಿಕ ಕುತುಬ್ ಮಿನಾರ್ ಸ್ಮಾರಕದ ಆವರಣದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂಬ ವಾದಕ್ಕೆ ದೆಹಲಿಯ ಸಾಕೇತ ಕೋರ್ಟ್ ನಿರಾಕರಣೆ ತೋರಿದೆ. ಕುತುಬ್ ಮಿನಾರ್ ಸಂರಕ್ಷಿತ ಸ್ಮಾರಕ. ಅಂತಹ ಜಾಗದಲ್ಲಿ ಒಂದು ವರ್ಗಕ್ಕೆ ಪೂಜೆಗೆ ಅವಕಾಶ ನೀಡಿದರೆ ದೇಶದ ಜಾತ್ಯತೀತ ಕಲ್ಪನೆಗೆ ಧಕ್ಕೆ ಬರುತ್ತದೆ. ಸಂವಿಧಾನದ ಜಾತ್ಯತೀತ ತತ್ವಗಳಿಗೆ ಧಕ್ಕೆಯಾಗುತ್ತದೆ ಎಂದು ಕೋರ್ಟ್ ಹೇಳಿದೆ.
ದೆಹಲಿಯ ಹರಿಶಂಕರ್ ಜೈನ್ ಎಂಬವರು ಕುತುಬ್ ಮಿನಾರ್ ಕಾಂಪ್ಲೆಕ್ಸ್ ನಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನೀವು ಈಗ ಇಲ್ಲಿನ ಸಂರಕ್ಷಿತ ಜಾಗವನ್ನು ದೇವಸ್ಥಾನದ ರೂಪದಲ್ಲಿ ನೋಡಲು ಬಯಸುತ್ತಿದ್ದೀರಿ. ಆದರೆ, 800 ವರ್ಷಗಳ ಹಿಂದೆ ದೇವಸ್ಥಾನ ಆಗಿತ್ತು ಎಂಬುದನ್ನು ಈಗ ನೀವು ಹಕ್ಕು ಸ್ಥಾಪನೆ ಮಾಡಲು ಹೇಗೆ ಸಾಧ್ಯ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಕೋರ್ಟಿನಲ್ಲಿ ಅಫಿಡವಿಟ್ ನೀಡಿರುವ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯು, ಸ್ಮಾರಕ ಅಥವಾ ಸಂರಕ್ಷಿತ ಪ್ರದೇಶ ಎನ್ನುವಾಗ ಆ ಜಾಗದಲ್ಲಿ ಒಂದು ವರ್ಗಕ್ಕೆ ಪೂಜೆ ಸಲ್ಲಿಸಲು ಹೇಗೆ ಅವಕಾಶ ನೀಡುವುದು. ಅಲ್ಲಿ ಯಾವುದೇ ವ್ಯಕ್ತಿಗೂ ಪೂಜೆ ಅಥವಾ ಇನ್ಯಾವುದೇ ರೀತಿಯಲ್ಲಿ ಹಕ್ಕು ಸ್ಥಾಪನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅರ್ಜಿದಾರರು ಕುತುಬ್ ಮಿನಾರ್ ಸ್ತೂಪದ ಆವರಣದಲ್ಲಿ 27 ದೇವಸ್ಥಾನ ಮತ್ತು ಜೈನ ಮಂದಿರಗಳನ್ನು ನಾಶ ಪಡಿಸಲಾಗಿದೆ. ಅವುಗಳ ಪುನರುತ್ಥಾನಕ್ಕೆ ಅವಕಾಶ ಕೊಡಬೇಕೆಂದು ಕೇಳಿಕೊಂಡಿದ್ದರು.
ಇತ್ತೀಚೆಗೆ ಪ್ರಾಚ್ಯವಸ್ತು ಇಲಾಖೆಯ ಮಾಜಿ ನಿರ್ದೇಶಕರಲ್ಲಿ ಒಬ್ಬರಾದ ಧರಮ್ ವೀರ್ ಶರ್ಮಾ ನೀಡಿದ್ದ ಹೇಳಿಕೆಯಿಂದಾಗಿ ವಿವಾದ ಹೊತ್ತಿಕೊಂಡಿತ್ತು. ಕುತುಬ್ ಮಿನಾರ್ ಸ್ತೂಪವನ್ನು ಇತಿಹಾಸ ಪುಸ್ತಕದಲ್ಲಿ ಹೇಳುವಂತೆ ಕುತುಬ್ ಅಲ್ ದೀನ್ ಐಬಕ್ ಕಟ್ಟಿಸಿದ್ದಲ್ಲ. ಅದಕ್ಕೂ ಹಿಂದೆ ದೆಹಲಿಯ ರಾಜನಾಗಿದ್ದ ವಿಕ್ರಮಾದಿತ್ಯ ಸೂರ್ಯನ ದಿಕ್ಕು ತಿಳಿಯುವುದಕ್ಕಾಗಿ ಸ್ತೂಪವನ್ನು ಕಟ್ಟಿಸಿದ್ದ. ಸ್ಮಾರಕದ ಆವರಣದಲ್ಲಿ ಹಿಂದು ದೇವರ ವಿಗ್ರಹಗಳು ಪತ್ತೆಯಾಗಿವೆ ಎಂದು ಶರ್ಮಾ ಹೇಳಿಕೆ ನೀಡಿದ್ದರು. ಇದೇ ವೇಳೆ, ವಿಶ್ವ ಹಿಂದು ಪರಿಷತ್ ವಕ್ತಾರ ವಿನೋದ್ ಬನ್ಸಾಲ್, ಅದು ಕುತುಬ್ ಮಿನಾರ್ ಅಲ್ಲ. ಹಿಂದೆ ಅದರ ಹೆಸರು ವಿಷ್ಣು ಸ್ತಂಭ ಎಂಬುದಾಗಿತ್ತು ಎಂದಿದ್ದಾರೆ.
ಗುಡಿ ಒಡೆದ ಮಾತ್ರಕ್ಕೆ ದೈವತ್ವ ನಾಶವಾಗಲ್ಲ
ಕೋರ್ಟಿನಲ್ಲಿ ನ್ಯಾಯಾಧೀಶರು, ಅಲ್ಲಿನ ವಿಗ್ರಹಗಳು ಯಾವುದೇ ಪೂಜೆ ಇಲ್ಲದೆ 800 ವರ್ಷಗಳಿಂದ ಉಳಿದುಕೊಂಡಿದ್ದರೆ, ಮುಂದೆಯೂ ಹಾಗೆ ಇದ್ದುಬಿಡಲಿ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಕೀಲ ಹರಿಶಂಕರ್ ಜೈನ್, ಗುಡಿಯನ್ನು ಒಡೆದು ಹಾಕಿದ ಮಾತ್ರಕ್ಕೆ ಅದರ ಪಾವಿತ್ರ್ಯ ಅಥವಾ ದೈವತ್ವ ನಾಶವಾಗುವುದಿಲ್ಲ. ಸ್ಮಾರಕ ಇರುವ ಪ್ರದೇಶದಲ್ಲಿ ದೇವರ ಮೂರ್ತಿ ಇದೆ. ಸುಪ್ರೀಂ ಕೋರ್ಟ್ ಹಿಂದೊಮ್ಮೆ ನೀಡಿದ್ದ ತೀರ್ಪಿನ ಪ್ರಕಾರ, ದೇವರ ವಿಗ್ರಹ ಇದ್ದರೆ ಅಲ್ಲಿ ಭಕ್ತರಿಗೆ ಪೂಜೆ ನಡೆಸುವುದಕ್ಕೂ ಅವಕಾಶ ಇರುತ್ತದೆ ಎಂದು ವಾದ ಮಂಡಿಸಿದರು. ಆದರೆ, ಕೋರ್ಟ್ ಈ ವಾದವನ್ನು ಪುರಸ್ಕರಿಸಿಲ್ಲ. ಈ ಕುರಿತು ಜೂನ್ 9ರಂದು ತೀರ್ಪು ನೀಡುವುದಾಗಿ ಕೋರ್ಟ್ ಹೇಳಿದೆ.
ಮಸೀದಿ ಬಳಿ ಎರಡು ಗಣಪತಿ ವಿಗ್ರಹ
ಕುತುಬ್ ಮಿನಾರ್ ಸ್ಮಾರಕದ ಆವರಣದಲ್ಲಿರುವ ಕುವ್ವಾತುಲ್ ಇಸ್ಲಾಮ್ ಮಸೀದಿಯ ಬಳಿ ಎರಡು ಗಣಪತಿ ವಿಗ್ರಹಗಳಿವೆ. ಅವನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಿ, ಪೂಜೆ ಕೈಗೊಳ್ಳಬೇಕು ಎಂದು ಇತ್ತೀಚೆಗೆ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ಅಧ್ಯಕ್ಷ ತರುಣ್ ವಿಜಯ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಹಿಂದು ಸಂಘಟನೆಗಳ ಕಾರ್ಯಕರ್ತರು ಕುತುಬ್ ಮಿನಾರ್ ಬಳಿ ಪ್ರತಿಭಟನೆ ನಡೆಸಿ, ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಬೇಕೆಂದು ಧರಣಿ ನಡೆಸಿದ್ದರು. ಆಬಳಿಕ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
Delhi court on Tuesday listed the order in the Qutub Minar complex for June 9. The arguments in the matter was concluded today and the court added that the parties would be at liberty to file brief synopsis if any within a week.“The more fundamental question is what is the character. You say it’s a monument without worship and as such it should continue like that. They says it’s a temple pre existing and suppose this is a situation, can it be decided under Order 7 Rule 11?" the court said while dictating the judgment, according to Live Law.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm