ಬ್ರೇಕಿಂಗ್ ನ್ಯೂಸ್
03-05-22 08:46 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 3: ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಕಾಂಗ್ರೆಸ್ ಮುಖಂಡ ಆರ್.ಡಿ.ಪಾಟೀಲ ಮತ್ತು ಇಂಜಿನಿಯರ್ ಮಂಜುನಾಥ ಮೇಳಕುಂದಿ ಈ ಹಿಂದೆ ಪಿಡಬ್ಲ್ಯುಡಿ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆ ನೇಮಕಾತಿಯಲ್ಲೂ ಅಕ್ರಮ ನಡೆಸಿದ್ದರು. ಇಬ್ಬರು ಕೂಡ ಪ್ರಕರಣದಲ್ಲಿ ಆರೋಪಿಗಳಾಗಿ ಪೊಲೀಸರ ಬಲೆಗೆ ಬಿದ್ದಿದ್ದರು ಅನ್ನುವ ಮಾಹಿತಿ ಹೊರಬಿದ್ದಿದೆ.
ಭೂಸನೂರು ಕರ್ನಾಟಕ ನೀರಾವರಿ ನಿಗಮದ ಅಮರ್ಜಾ ಅಣೆಕಟ್ಟು ಯೋಜನೆ ವಿಭಾಗದಲ್ಲಿ ಸಹಾಯ ಇಂಜಿನಿಯರ್ ಆಗಿರುವ ಮಂಜುನಾಥ ಮೇಳಕುಂದಿ ಹಾಗೂ ಕಾಂಗ್ರೆಸ್ ಮುಖಂಡ ರುದ್ರಗೌಡ ಪಾಟೀಲ ಇಬ್ಬರೂ ಕಳೆದ 2021ರ ಡಿಸೆಂಬರ್ ನಲ್ಲಿ ನಡೆದಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹುದ್ದೆಯ ಪರೀಕ್ಷೆ ಅಕ್ರಮದಲ್ಲೂ ಭಾಗಿಯಾಗಿದ್ದರು. ಮಂಜುನಾಥ್ 4ನೇ ಹಾಗೂ ಆರ್.ಡಿ.ಪಾಟೀಲ್ 6ನೇ ಆರೋಪಿಯಾಗಿದ್ದರು.
ಮುದ್ರಣ ಕೇಂದ್ರದಿಂದಲೇ ಪ್ರಶ್ನೆಪತ್ರಿಕೆ ಲೀಕ್
ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳು ಅಥವಾ ಪಿಯುಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಮುದ್ರಣವಾಗುವಲ್ಲಿಂದಲೇ ಲೀಕ್ ಮಾಡುವ ಸಾಮರ್ಥ್ಯವನ್ನು ಇವರು ಹೊಂದಿದ್ದರು. ಅಲ್ಲಿನ ಸಿಬಂದಿಯನ್ನೇ ಅದಕ್ಕಾಗಿ ಡೀಲ್ ಮಾಡಿಕೊಂಡಿದ್ದರು. ಈ ಹಿಂದೆ ಸೋರಿಕೆ ಕೆಲಸ ಮಾಡುತ್ತಿದ್ದ ಶಿವಕುಮಾರಯ್ಯ ಅಲಿಯಾಸ್ ತಾತ ಎಂಬಾತ ಮೃತಪಟ್ಟ ಬಳಿಕ ಮಂಜುನಾಥ್ ಮೇಳಕುಂದಿ ಮತ್ತು ಆರ್.ಡಿ. ಪಾಟೀಲ ಬೇರೆ ನೌಕರರನ್ನು ಅದಕ್ಕಾಗಿ ಇರಿಸಿಕೊಂಡಿದ್ದರು. ಪ್ರಶ್ನೆ ಪತ್ರಿಕೆ ಮುದ್ರಣ ಸಂಸ್ಥೆಯಲ್ಲೇ ಸಿಬಂದಿಯನ್ನು ತಮ್ಮ ನಿಯಂತ್ರಣದಲ್ಲಿಟ್ಟು ಯಾವುದೇ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದರು ಅನ್ನೋದನ್ನು ಸಿಐಡಿ ತನಿಖೆಯಲ್ಲಿ ಪತ್ತೆ ಮಾಡಲಾಗಿದೆ.
2021ರ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನಡೆದಿತ್ತು. ಈ ವೇಳೆ, ಆಯ್ದ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಹೊಂದಿದ್ದ ಬ್ಲೂಟೂತ್ ವಿತರಿಸಿದ್ದ. ಇದಕ್ಕಾಗಿ ತಮಗೆ ಸಲ್ಲುವ ಪರೀಕ್ಷಾ ಮೇಲ್ವಿಚಾರಕರನ್ನು ಇರಿಸಿಕೊಂಡಿದ್ದ. ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ವೀರಣ್ಣ ಗೌಡ ಎಂಬಾತ ಬ್ಲೂಟೂತ್ ಬಳಸಿ ಉತ್ತರ ಬರೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಈ ಬಗ್ಗೆ ಬೆಂಗಳೂರಿನ ಸೈಂಟ್ ಜಾನ್ ಶಾಲೆಯ ಪ್ರಾಂಶುಪಾಲರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮಂಜುನಾಥ್ ಮೇಳಕುಂದಿ ಹಾಗೂ ಆರ್.ಡಿ. ಪಾಟೀಲ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದರು. ತನಿಖೆಯಲ್ಲಿ ಪ್ರತಿ ಅಭ್ಯರ್ಥಿಯಿಂದ 8-10 ಲಕ್ಷ ರೂಪಾಯಿ ವಸೂಲಿ ಮಾಡಿದ್ದು ಪತ್ತೆಯಾಗಿತ್ತು. ಆನಂತರ ಜಾಮೀನಿನಲ್ಲಿ ಇಬ್ಬರು ಕೂಡ ಬಿಡುಗಡೆಯಾಗಿದ್ದರು.
ಇದೀಗ ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿಯೂ ಇದೇ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಪಿಎಸ್ಐ ಪರೀಕ್ಷೆ ಬರೆದಿದ್ದ ಕೆಲವು ಅಭ್ಯರ್ಥಿಗಳಿಂದ ಹುದ್ದೆ ಗಿಟ್ಟಿಸುವುದಕ್ಕಾಗಿ 60-70 ಲಕ್ಷ ಡೀಲ್ ಮಾಡಿಕೊಂಡಿದ್ದರು ಅನ್ನೋ ಮಾಹಿತಿಗಳಿವೆ. ಪ್ರಶ್ನೆ ಪತ್ರಿಕೆ ಮುದ್ರಣ ಕೇಂದ್ರಗಳ ಕೆಲವು ಸಿಬಂದಿಗಳಿಂದ ಪರೀಕ್ಷೆ ನಡೆಯುವ 3-4 ದಿನಗಳ ಹಿಂದೆಯೇ ಪ್ರಶ್ನೆ ಪತ್ರಿಕೆ ಪಡೆಯುತ್ತಿದ್ದ ಆರೋಪಿಗಳು ಅದನ್ನು ಅಭ್ಯರ್ಥಿಗಳಿಗೆ ಮಾರುತ್ತಿದ್ದರು. ಆಮೂಲಕ ಭರಪೂರ ಹಣ ಮಾಡುತ್ತಿದ್ದರು. ಇದೇ ವೇಳೆ, ಕೆಲವು ಅಭ್ಯರ್ಥಿಗಳನ್ನು ಹುದ್ದೆ ಗ್ಯಾರಂಟಿ ಎಂದು ನಂಬಿಸಿ ದೊಡ್ಡ ಮೊತ್ತದ ಹಣ ಪಡೆಯುತ್ತಿದ್ದರು.
ದಿವ್ಯಾ ಹಾಗರಗಿಗೆ ಎರಡು ಕೋಟಿ ಸಂದಾಯ ?
ಕಲಬುರಗಿ ಜಿಲ್ಲೆಯ ಅಫಜಲಪುರದ ಜ್ಞಾನಜ್ಯೋತಿ ಶಾಲೆಯಲ್ಲಿ ಭಾರೀ ಅಕ್ರಮ ಆಗಿದೆ ಎನ್ನುವುದು ಕೇಳಿಬಂದಿರುವ ಆರೋಪ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ದಿವ್ಯಾ ಹಾಗರಗಿಯನ್ನು ಇದಕ್ಕಾಗಿ ಡೀಲ್ ಮಾಡಿಕೊಂಡಿದ್ದ ಮಂಜುನಾಥ ಮೇಳಕುಂದಿ ಮತ್ತು ಆರ್.ಡಿ.ಪಾಟೀಲ್, ಅಲ್ಲಿ ತಮಗೆ ಸಹಕರಿಸುವುದಕ್ಕಾಗಿ ಆಕೆಗೆ ಎರಡು ಕೋಟಿ ರೂಪಾಯಿ ಹಣ ನೀಡಿದ್ದರು ಎಂದು ಹೇಳಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥ್ ಸೇರಿದಂತೆ ಮೇಲ್ವಿಚಾರಕರು, ಇತರ ಕೆಲವು ಸಿಬಂದಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಇದೇ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷೆ ಬರೆದಿದ್ದ 50ಕ್ಕೂ ಹೆಚ್ಚು ಮಂದಿಗೆ ಪಿಎಸ್ಐ ಹುದ್ದೆ ಸಿಕ್ಕಿತ್ತು. ಈ ಪೈಕಿ 35 ಮಂದಿ ಆರ್.ಡಿ. ಪಾಟೀಲ್ ಕಡೆಯವರು ಮತ್ತು 10 ಮಂದಿ ಮಂಜುನಾಥ್ ಮೇಳಕುಂದಿ ಕಡೆಯವರು ಅನ್ನುವುದು ಸಿಐಡಿ ತನಿಖೆಯಲ್ಲಿ ತಿಳಿದುಬಂದಿದೆ.
ಈ ನಡುವೆ, ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಬಲೆಗೆ ಕೆಡವಲಾಗುತ್ತಿದೆ. ಈವರೆಗೆ 12 ಮಂದಿ ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಒಎಂಆರ್ ಶೀಟ್ ನಲ್ಲಿ ಅವ್ಯವಹಾರ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ. ಇದರ ನಡುವೆ, ಬೆಂಗಳೂರಿನಲ್ಲಿ 22 ಮಂದಿ ಅಭ್ಯರ್ಥಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಅವರನ್ನೂ ಪೊಲೀಸರು ಬಂಧಿಸುವ ಸಾಧ್ಯತೆಯಿದೆ.
Rudra Gowda D Patil and Manjunath Melakundi, who are arrested in the PSI recruitment scam were earlier accused in the assistant engineer post recruitment in PWD also.Manjunatha Melakundi is working at assistant engineer in the Koralli Camp subdivision of Amrja dam project of Bhoosanur Karnataka irrigation authority limited.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm