ಬ್ರೇಕಿಂಗ್ ನ್ಯೂಸ್
30-03-22 01:10 pm HK Desk news ಕರ್ನಾಟಕ
ಮಂಡ್ಯ, ಮಾ.30: ಕೊಲ್ಲೂರಿನಲ್ಲಿ ಟಿಪ್ಪು ಹೆಸರಿನಲ್ಲಿ ಸಲಾಂ ಆರತಿ ಮಾಡುವುದಕ್ಕೆ ಆಕ್ಷೇಪ ಕೇಳಿಬಂದ ಬೆನ್ನಲ್ಲೇ ಮಂಡ್ಯದ ಮೇಲುಕೋಟೆಯಲ್ಲೂ ಸಲಾಂ ಪೂಜಾ ಪದ್ಧತಿ ಇರುವುದು ಬೆಳಕಿಗೆ ಬಂದಿದೆ. ಮೇಲುಕೋಟೆ ಚೆಲುವನಾರಾಯಣ ದೇವಾಲಯದಲ್ಲಿ ಪ್ರತಿನಿತ್ಯ ದೀವಟಿಗೆ ಸಲಾಂ ಹೆಸರಿನಲ್ಲಿ ಟಿಪ್ಪು ಸ್ಮರಣೆ ನಡೆಯುತ್ತಿದ್ದು ಇದರ ಹೆಸರು ಬದಲಿಸಬೇಕೆಂದು ಹಿಂದು ಸಂಘಟನೆಗಳು ಆಕ್ಷೇಪ ಎತ್ತಿವೆ.
ಮೇಲುಕೋಟೆ ಚೆಲುವನಾರಾಯಣ ದೇವಸ್ಥಾನಕ್ಕೆ ಮೈಸೂರಿನ ರಾಜನಾಗಿದ್ದ ಟಿಪ್ಪು ಅಭಯ ನೀಡಿದ್ದ ಎಂಬ ನೆಪದಲ್ಲಿ ಆತನ ಹೆಸರಿನಲ್ಲಿ ದೀವಟಿಗೆ ಸಲಾಂ ಎಂದು ಪ್ರತಿನಿತ್ಯ ಪೂಜೆ ನಡೆಯುತ್ತದೆ. ಹಿಂದಿನಿಂದಲೂ ಪಾರಂಪರಿಕವಾಗಿ ನಡೆದು ಬಂದಿದ್ದ ಸಂಧ್ಯಾರತಿಯನ್ನೇ ದೀವಟಿಗೆ ಸಲಾಂ ಎಂದು ಟಿಪ್ಪು ಕಾಲದಲ್ಲಿ ಆತನ ಅಣತಿಯಂತೆ ಬದಲಾವಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಕೊಲ್ಲೂರಿನಲ್ಲಿ ಸಲಾಂ ಆರತಿ ಹೆಸರು ಬದಲಿಸಬೇಕೆಂಬ ಆಗ್ರಹ ಕೇಳಿಬಂದ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ಹಿಂದು ಸಂಘಟನೆಗಳ ನಾಯಕರು, ಧಾರ್ಮಿಕ ಪರಿಷತ್ ನಾಯಕರು ಮೇಲುಕೋಟೆಯ ದೀವಟಿಗೆ ಸಲಾಂ ಆರತಿಯನ್ನು ಒಂದೋ ನಿಲ್ಲಿಸಬೇಕು, ಇಲ್ಲವೇ ಅದರ ಹೆಸರು ಬದಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು, ಹೆಸರು ಬದಲಾವಣೆಗೆ ಒತ್ತಾಯಿಸಿದ್ದಾರೆ. ಹಿಂದು ಸಂಪ್ರದಾಯದಲ್ಲಿ ಸಲಾಂ ಹೆಸರಿನ ಆರತಿಗೆ ಅವಕಾಶ ಇಲ್ಲ. ಅನ್ಯಧರ್ಮದ ದೇವರು, ರಾಜನ ಹೆಸರಿನಲ್ಲಿ ಪೂಜೆ ನಡೆಸೋದು ಬೇಡ. ಹಾಗಾಗಿ ದೀವಟಿಗೆ ಸಲಾಂ ಎನ್ನುವ ಪೂಜಾ ಪದ್ಧತಿಯನ್ನು ಬದಲಿಸುವಂತೆ ಒತ್ತಾಯ ಮಾಡಿದ್ದಾರೆ.
Salam Mangalarati ritual at Mandya temple requested to be cancelled after Kollur temple.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm