ಬ್ರೇಕಿಂಗ್ ನ್ಯೂಸ್
28-03-22 03:22 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.28: ಹಿಜಾಬ್ ಹೊಯ್ದಾಟ, ಹೈಕೋರ್ಟ್ ತೀರ್ಪಿನ ಬಳಿಕ ಇಂದು ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿದೆ. ಹಿಜಾಬ್ ಧರಿಸಲು ಬಿಡದಿದ್ದರೆ ಶಿಕ್ಷಣವೇ ಬೇಡ ಎಂದು ಹಠ ಮಾಡುತ್ತಿದ್ದ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಇಂದು ಸೈಲಂಟಾಗಿಯೇ ಪರೀಕ್ಷೆಗೆ ಹಾಜರಾಗಿದ್ದಾರೆ. ಶಾಲೆಯ ವರೆಗೂ ಹಿಜಾಬ್ ಧರಿಸಿ ಬಂದು ತರಗತಿ ಕೊಠಡಿಗೆ ಪರೀಕ್ಷೆ ಬರೆಯುವಾಗ ಅದನ್ನು ತೆಗೆದಿಟ್ಟು ಹೋಗಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಹಿಜಾಬ್ ವಿಚಾರದಲ್ಲಿ ಹಠ ಮಾಡಬಾರದು ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದಾರೆ. ಹಿಜಾಬ್ ಸಂಘರ್ಷ ತಲೆದೋರಿದ್ದ ಉಡುಪಿ, ಶಿವಮೊಗ್ಗ, ಮಂಗಳೂರಿನಲ್ಲಿಯೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಹೆಚ್ಚಿನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದಾರೆ.
ಗದಗ ಜಿಲ್ಲೆಯ ಶಾಲೆಯೊಂದರಲ್ಲಿ ಹಿಜಾಬ್ ಧರಿಸಿಯೇ ತರಗತಿಯೊಳಗೆ ಪ್ರವೇಶ ನೀಡಿದ್ದು ಬಳಿಕ ಪರೀಕ್ಷಾಧಿಕಾರಿಗಳು ವಿದ್ಯಾರ್ಥಿನಿಯರ ಹಿಜಾಬ್ ತೆಗೆಯುವಂತೆ ಸೂಚಿಸಿದ್ದಾರೆ. ಹಿಜಾಬ್ ಧರಿಸಿಕೊಂಡು ಬಂದವರನ್ನು ಹೊರಗೆ ಕಳುಹಿಸಿದ್ದು ಬಳಿಕ ತೆಗೆದಿಟ್ಟು ತರಗತಿಗೆ ಬಂದಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬೆಂಗಳೂರಿನ ಕೆಲವು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಸುಗಮವಾಗಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯ ಶಾಲೆಗೆ ಭೇಟಿ ನೀಡಿದರು. ಯಾರದ್ದೋ ಮಾತು ಕೇಳಿ ಪರೀಕ್ಷೆ ಮಿಸ್ ಮಾಡ್ಕೋಬೇಡಿ. ಎಲ್ಲದಕ್ಕಿಂತಲೂ ಶಿಕ್ಷಣ ಮುಖ್ಯ , ಶಿಕ್ಷಣದ ಶಿಸ್ತು ಪಾಲಿಸಿ. ಮಕ್ಕಳೇ , ನಿಮ್ಮ ಮೊದಲ ಆಯ್ಕೆ ಶಿಕ್ಷಣವೇ ಆಗಿರಲಿ ಎಂದು ಮನವಿ ಮಾಡಿದ್ದಾರೆ. ಒಂದಷ್ಟು ವಿದ್ಯಾರ್ಥಿಗಳನ್ನು ಕೆಲವರು ದಾರಿ ತಪ್ಪಿಸ್ತಿರೋದು ದುರದೃಷ್ಟಕರ. ಅವರಿಗೆಲ್ಲಾ ಮತ್ತೆ ಮನವಿ ಮಾಡುತ್ತೀವಿ. ಯಾರೂ ದಾರಿ ತಪ್ಪಬೇಡಿ. ಹಿಜಾಬ್ ಧರಿಸುವವರ ಹಕ್ಕನ್ನ ನಾನು ಕಿತ್ತುಕೊಳ್ಳಲು ಆಗಲ್ಲ, ಧರ್ಮ ಮುಖ್ಯ ಅನ್ನುವಂತವರಿಗೆ ಶಿಕ್ಷಣ ಕೋಡೋದು ಕಷ್ಟ, ವಿದ್ಯಾರ್ಥಿಗಳಿಗೆ ಪರೀಕ್ಷೆ, ಶಿಕ್ಷಣ ಎಲ್ಲದಕ್ಕಿಂತ ಮುಖ್ಯ. ಸಮವಸ್ತ್ರವನ್ನ ಹಾಕಿಕೊಂಡು ಎಲ್ಲರೂ ಪರೀಕ್ಷೆ ಬರೆಯಿರಿ ಎಂದು ಹೇಳಿದ್ದಾರೆ.
ಈ ನಡುವೆ ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾಳೆ. ಈ ವೇಳೆ ಪ್ರಶ್ನಿಸಿದಾಗ, ನನಗೆ ಶಿಕ್ಷಣ ಇಲಾಖೆಯ ಆದೇಶ ಗೊತ್ತಿಲ್ಲ. ನೋ ಐಡಿಯಾ ಎಂದಿದ್ದಾಳೆ. ಶಾಲೆಯಲ್ಲಿ ನಮಗೆ ಈ ಆದೇಶದ ಬಗ್ಗೆ ಹೇಳಿಲ್ಲ. ಹಿಜಾಬ್ ತೆಗೆಯಿರಿ ಅಂದರೆ ರಿಮೂವ್ ಮಾಡಿ ಹೋಗುತ್ತೇವೆ. ಇಲ್ಲ ಅಂದರೆ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದಿದ್ದಾಳೆ.
ರಾಯಚೂರು ನಗರದ ಸರ್ಕಾರಿ ಶಾಲೆಗೆ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬಂದಿದ್ದು ಬಳಿಕ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿಟ್ಟು ಹೋಗಿದ್ದಾರೆ. ಹಿಜಾಬ್ ತೆಗೆದ ಬಳಿಕ ಪರೀಕ್ಷಾ ಕೇಂದ್ರದೊಳಗೆ ಸಿಬ್ಬಂದಿ ಅನುಮತಿ ನೀಡಿದ್ದಾರೆ. ರಾಮನಗರದಲ್ಲೂ ವಿದ್ಯಾರ್ಥಿನಿಯರು ಹಿಜಾಬ್, ಬುರ್ಖಾ ಧರಿಸಿ ಪರೀಕ್ಷಾ ಕೇಂದ್ರಗಳತ್ತ ಆಗಮಿಸಿದ್ದರು. ಬಳಿಕ ಹಿಜಾಬ್ ಕಳಚಿ ಬರುವಂತೆ ಶಿಕ್ಷಕರು ಸೂಚನೆ ನೀಡಿದ್ದು, ಹಿಜಾಬ್, ಬುರ್ಖಾ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಹಿಜಾಬ್ ಬದಲು ದುಪ್ಪಟ್ಟಾ
ಇನ್ನು ಕೆಲವು ಕಡೆ ತರಗತಿಯೊಳಗೆ ಪರೀಕ್ಷೆ ಬರೆಯುವಾಗ ವಿದ್ಯಾರ್ಥಿನಿಯರು ಹಿಜಾಬ್ ಬದಲು ದುಪ್ಪಟ್ಟಾವನ್ನೇ ಸುತ್ತಿಕೊಂಡು ಬಂದಿದ್ದಾರೆ. ಆದರೆ ಸಮವಸ್ತ್ರ ಹೊರತುಪಡಿಸಿ ಯಾವುದಕ್ಕೂ ಅವಕಾಶ ಇಲ್ಲ ಎಂದು ಅಧಿಕಾರಿ ಸಿಬಂದಿ ವಿದ್ಯಾರ್ಥಿಗಳ ಮನವೊಲಿಸಿದ್ದಾರೆ.
Karnataka SSLC exam: As scheduled, Karnataka Secondary Education Examination Board is conducting the class 10 final examination from Monday, March 28, 2022. This year more than eight lakh students got themselves registered to take the exam. Ahead the exam, state primary and secondary education minister BC Nagesh said that wearing of hijab (headscarf) will not be allowed in the halls.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm