ಬ್ರೇಕಿಂಗ್ ನ್ಯೂಸ್
23-03-22 05:08 pm HK Desk news ಕರ್ನಾಟಕ
ಶಿವಮೊಗ್ಗ, ಮಾ.23: ಕರಾವಳಿಯಲ್ಲಿ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಕಿಚ್ಚು ಈಗ ಮಲೆನಾಡಿಗೂ ಹಬ್ಬಿದೆ. ಶಿವಮೊಗ್ಗದ ಪ್ರಸಿದ್ಧ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯುವ ಐದು ದಿನಗಳ ಮಾರಿಕಾಂಬ ಉತ್ಸವದಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿಷೇಧ ಹಾಕಲಾಗಿದೆ.
ಹಿಂದು ಸಂಘಟನೆಗಳ ಆಗ್ರಹ, ಪ್ರತಿಭಟನೆಯ ಬಳಿಕ ದೇವಸ್ಥಾನದ ಆಡಳಿತ ಕಮಿಟಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು ಅನ್ಯಧರ್ಮೀಯರನ್ನು ವ್ಯಾಪಾರದಿಂದ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬ ಜಾತ್ರೆಯಲ್ಲಿ ಮತ, ಧರ್ಮದ ಭೇದ ಇಲ್ಲದೆ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಆಸುಪಾಸಿನ ಹಲವು ನಗರ, ಪೇಟೆಗಳಿಂದ ಜನರು ಉತ್ಸವಕ್ಕೆ ಬರುತ್ತಾರೆ. ಕಳೆದ ಬಾರಿ 2020ರ ಫೆಬ್ರವರಿ ತಿಂಗಳಲ್ಲಿ ಉತ್ಸವ ನಡೆದಿತ್ತು.

ಮಾರಿಕಾಂಬ ಜಾತ್ರೆ ನಡೆಯೋದಕ್ಕೂ ಮೊದಲೇ ವ್ಯಾಪಾರಸ್ಥರು ಮಳಿಗೆ ಏಲಂ ಪಡೆಯುತ್ತಾರೆ. ಆದರೆ ಈ ಬಾರಿ ಹಿಂದು ಸಂಘಟನೆ ಕಾರ್ಯಕರ್ತರೊಬ್ಬರು ಮಳಿಗೆಯನ್ನು ಪಡೆದಿದ್ದು, ಅದನ್ನು ಬಳಿಕ ಹಿಂದುಯೇತರರಿಗೆ ನೀಡಬಾರದು ಎಂದು ನಿರ್ಧರಿಸಿ ಹಿಂದುಗಳಿಗೆ ಮಾತ್ರ ಬಟವಾಡೆ ಮಾಡಲಾಗಿತ್ತು. ಮಳಿಗೆ ಬಟವಾಡೆಯಲ್ಲಿ 9 ಲಕ್ಷ ರೂಪಾಯಿ ಗಳಿಕೆ ಆಗಿದ್ದು. ಅದರ ವರಮಾನ ದೇವಸ್ಥಾನಕ್ಕೆ ಹೋಗುತ್ತದೆ. ಜಾತ್ರೆಯಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತಿದ್ದು, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ವ್ಯಾಪಾರಿಗಳೆಲ್ಲ ಭಾರೀ ಕಮಾಯಿ ಮಾಡುತ್ತಿದ್ದರು. ಈ ಬಾರಿ ಹಿಂದುಗಳಿಗೆ ಮಾತ್ರ ಅವಕಾಶ ಎಂದು ನಿರ್ಧಾರಕ್ಕೆ ಬಂದಿರುವುದರಿಂದ ಅನ್ಯಧರ್ಮೀಯರಿಗೆ ನಷ್ಟ ಎದುರಾಗಿದೆ.


ಇತ್ತೀಚೆಗೆ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಮುಸ್ಲಿಂ ಮೂಲಭೂತವಾದಿಗಳು ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಯಾಗಿ ಮುಸ್ಲಿಂ ವ್ಯಾಪಾರಸ್ಥರನ್ನು ಬಹಿಷ್ಕರಿಸಲು ಹಿಂದು ಸಂಘಟನೆಗಳು ಮುಂದಾಗಿವೆ. ಇದಕ್ಕಾಗಿ ಕರಾವಳಿಯ ಪ್ರಸಿದ್ಧ ದೇವಸ್ಥಾನಗಳ ಉತ್ಸವಗಳಿಗೆ ಮುಸ್ಲಿಮರಿಗೆ ಬ್ರೇಕ್ ಹಾಕಿದ್ದು ಸುದ್ದಿಯಾಗುತ್ತಲೇ ಶಿವಮೊಗ್ಗದಲ್ಲಿಯೂ ಅದೇ ರೀತಿಯ ಬೆಳವಣಿಗೆ ನಡೆದಿದೆ. ಬಜರಂಗದಳದ ಪ್ರಮುಖರೇ ಸ್ಟಾಲ್ ಬಟವಾಡೆ ಮಾಡಿರುವುದರಿಂದ ಈಗ ಸ್ಟಾಲ್ ಗಳ ಮುಂದೆ ಕೇಸರಿ ಬಾವುಟವನ್ನೂ ಹಾಕಲಾಗಿದೆ.
Restrictions on Muslim traders even at Shivamogga Kote Mariyamma jatre after Muslim traders restricted at Kapu Jatre.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm