ಬ್ರೇಕಿಂಗ್ ನ್ಯೂಸ್
21-03-22 10:15 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.21: ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕುಗಳನ್ನು ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಈ ಬಗ್ಗೆ ಒಂದು ವರ್ಷದ ಹಿಂದೆಯೇ ಎಲ್ಲ ರಾಜ್ಯಗಳಿಗೂ ಕೇಂದ್ರ ಸರಕಾರದ ಸಹಕಾರಿ ಸಚಿವಾಲಯದಿಂದ ಸುತ್ತೋಲೆ ಕಳುಹಿಸಿದ್ದು, ಕೇರಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಅನುಷ್ಠಾನ ಆಗಿದೆ. ಆದರೆ ಬಿಜೆಪಿ ಆಡಳಿತ ಇರುವ ಕರ್ನಾಟಕದಲ್ಲಿ ಇದರ ಜಾರಿ ಆಗದಿರುವುದು ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ಕೇಂದ್ರದಲ್ಲಿ ಸಹಕಾರಿ ಮತ್ತು ಕಾರ್ಪೊರೇಟ್ ಸಚಿವಾಲಯವನ್ನು ಹೊಂದಿರುವ ಅಮಿತ್ ಷಾ, ಕರ್ನಾಟಕ ಸರಕಾರದ ಬಳಿಯಿಂದ ವರದಿ ಕೇಳಿದ್ದಾರೆ. ಈ ನಡುವೆ ಎಪ್ರಿಲ್ 1ರಂದು ಅಮಿತ್ ಷಾ ಬೆಂಗಳೂರಿಗೆ ಬರಲಿದ್ದಾರೆ ಎನ್ನಲಾಗುತ್ತಿದ್ದು, ಅಷ್ಟರಲ್ಲಿ ಈ ಬಗ್ಗೆ ವರದಿ ರೆಡಿ ಮಾಡಲು ರಾಜ್ಯ ಸರಕಾರ ಮುಂದಾಗಿದೆ. ಕಳೆದ ಮಾ.13ರಂದು ಸಿಎಂ ಬೊಮ್ಮಾಯಿ ಮತ್ತು ಮುಖ್ಯ ಕಾರ್ಯದರ್ಶಿಯವರು ತುರ್ತು ಸಭೆ ನಡೆಸಿದ್ದು, ವಿಲೀನ ಪ್ರಕ್ರಿಯೆ ಕೇರಳದಲ್ಲಿ ಯಾವ ರೀತಿ ಮಾಡಲಾಗಿದೆ ಎಂಬ ಬಗ್ಗೆ ವರದಿ ಪಡೆಯಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಸಹಕಾರಿ ಸಚಿವ ಸೋಮಶೇಖರ್, ವಿಲೀನ ಪ್ರಕ್ರಿಯೆ ಬಗ್ಗೆ ಅಧ್ಯಯನ ನಡೆಸಲು ರಾಜ್ಯದಿಂದ ಕೇರಳಕ್ಕೆ ಅಧಿಕಾರಿಗಳ ತಂಡ ತೆರಳಲಿದ್ದಾರೆ. ಅಧ್ಯಯನ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಸದ್ಯ ಸಹಕಾರಿ ವಲಯದಲ್ಲಿ ಮೂರು ಹಂತಗಳಿದ್ದು, ಕೃಷಿ ಪತ್ತಿನ ಸಹಕಾರಿ ಸಂಘಗಳು, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕುಗಳು ಮತ್ತು ಅಪೆಕ್ಸ್ ಬ್ಯಾಂಕು ಇದೆ. ಇಲ್ಲಿ ಡಿಸಿಸಿ ಬ್ಯಾಂಕಿನ ನಿರ್ವಹಣೆಗಾಗಿ ಸೊಸೈಟಿಗಳಿಂದ ಹೆಚ್ಚುವರಿಯಾಗಿ ಒಂದು ಶೇಕಡಾ ನಿರ್ವಹಣಾ ವೆಚ್ಚವನ್ನು ಪಡೆಯಲಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಮಧ್ಯವರ್ತಿ ಕೆಲಸ ಮಾಡುವ ಡಿಸಿಸಿ ಬ್ಯಾಂಕನ್ನು ಇಲ್ಲವಾಗಿಸಲು ವಿಲೀನ ಪ್ರಕ್ರಿಯೆಗೆ ಸರಕಾರ ಮುಂದಾಗಿದೆ. ಇದರ ಪ್ರಕಾರ, ಮುಂದೆ ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಸೊಸೈಟಿಗಳು ಮತ್ತು ಅಪೆಕ್ಸ್ ಬ್ಯಾಂಕುಗಳು ಮಾತ್ರ ಇರಲಿವೆ. ಡಿಸಿಸಿ ಬ್ಯಾಂಕಿನ ಶಾಖೆಗಳು ನೇರವಾಗಿ ಅಪೆಕ್ಸ್ ಬ್ಯಾಂಕ್ ಕಾರ್ಯ ವ್ಯಾಪ್ತಿಗೆ ಬರಲಿವೆ. ಈ ಮೂಲಕ ರಾಜ್ಯ ಸರಕಾರದಿಂದ ಸಾಲಮನ್ನಾ ಸೇರಿ ವಿವಿಧ ಯೋಜನೆಗಳಡಿ ಸೊಸೈಟಿಗಳಿಗೆ ಜಾರಿಯಾಗುವ ಅನುದಾನದ ಹಣವನ್ನು ಡಿಸಿಸಿ ಬ್ಯಾಂಕುಗಳು ಮಧ್ಯದಲ್ಲಿ ಹಿಡಿದಿಡುವುದು ತಪ್ಪಲಿದೆ.
ಡಿಸಿಸಿ ಬ್ಯಾಂಕುಗಳಿಗೆ ಆಡಳಿತಾಧಿಕಾರಿ ನೇಮಕ
ಈ ನಿಟ್ಟಿನಲ್ಲಿ ಆಯಾ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕುಗಳ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನುವುದನ್ನು ಅರಿಯಲು ರಾಜ್ಯ ಸರಕಾರದಿಂದ ಐಎಎಸ್ ದರ್ಜೆಯ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಶಿವಮೊಗ್ಗ, ಬೆಳಗಾವಿ ಸೇರಿ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಆಡಳಿತಾಧಿಕಾರಿ ನೇಮಕ ಆಗಿದೆ. ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಇನ್ನೂ ಆಡಳಿತಾಧಿಕಾರಿ ನೇಮಕ ಆಗಿಲ್ಲ. ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಸ್ವತಃ ಆಡಳಿತಾಧಿಕಾರಿ ನೇಮಕ ಆಗದಂತೆ ಉನ್ನತ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಗಳಿವೆ.
ಡಿಸಿಸಿ ಬ್ಯಾಂಕುಗಳ ಅವ್ಯವಹಾರಕ್ಕೆ ಅಂಕುಶ
ಡಿಸಿಸಿ ಬ್ಯಾಂಕನ್ನು ಅಪೆಕ್ಸ್ ಬ್ಯಾಂಕ್ ಜೊತೆಗೆ ವಿಲೀನ ಮಾಡುವುದು ಜಿಲ್ಲಾ ಮಟ್ಟದಲ್ಲಿ ಡಿಸಿಸಿ ಬ್ಯಾಂಕ್ ಹೆಸರಲ್ಲಿ ಮೆರೆದಾಡುವ ರಾಜಕಾರಣಿಗಳ ಆಟಾಟೋಪಕ್ಕೆ ಕಡಿವಾಣ ಬೀಳಲಿದೆ. ಮಂಗಳೂರು, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಭಾರೀ ಅವ್ಯವಹಾರದ ಆರೋಪ ಹೊತ್ತಿರುವ ಡಿಸಿಸಿ ಬ್ಯಾಂಕುಗಳ ವಿರುದ್ಧ ಈಗಾಗಲೇ ಹಲವು ಹಂತಗಳಲ್ಲಿ ತನಿಖೆ ನಡೆಯುತ್ತಿದ್ದು, ಹೈಕೋರ್ಟ್ ದೂರು ಕೂಡ ದಾಖಲಾಗಿದೆ. ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕಿನಲ್ಲಿ ಕಳೆದ 28 ವರ್ಷಗಳಿಂದ ಅಧ್ಯಕ್ಷರಾಗಿ ಮುಂದುವರಿಯುತ್ತಿರುವ ರಾಜೇಂದ್ರ ಕುಮಾರ್ ವಿರುದ್ಧವೂ ಭಾರೀ ಅವ್ಯವಹಾರದ ಆರೋಪ ಇದೆ. ಇವರ ಅಧಿಕಾರಕ್ಕೆ ಕಡಿವಾಣ ಬೀಳುವ ಜೊತೆಗೆ ಅವ್ಯವಹಾರದ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಅನ್ನುವ ನಿರೀಕ್ಷೆ ಇದೆ.
ಬ್ಯಾಂಕ್ ಹೆಸರಲ್ಲಿ ಮೆರೆದಾಟಕ್ಕೆ ಇತಿಶ್ರೀ
ಡಿಸಿಸಿ ಬ್ಯಾಂಕುಗಳನ್ನೇ ಬರ್ಖಾಸ್ತುಗೊಳಿಸುವುದರಿಂದ ಜಿಲ್ಲಾ ಮಟ್ಟದಲ್ಲಿ ಸಹಕಾರಿ ವಲಯದ ರಾಜಕಾರಣಕ್ಕೆ ಇತಿಶ್ರೀ ಬೀಳಲಿದೆ. ಡಿಸಿಸಿ ಬ್ಯಾಂಕುಗಳ ನಿರ್ದೇಶಕರಾಗಿ ಆಯ್ಕೆಯಾಗುವುದು, ಅದಕ್ಕೆ ಚುನಾವಣೆ ಹೆಸರಲ್ಲಿ ಭ್ರಷ್ಟಾಚಾರ ನಡೆಸುವುದು, ಬ್ಯಾಂಕಿನಲ್ಲಿ ಅವ್ಯವಹಾರ ಎಸಗುವುದು, ಜನರ ದುಡ್ಡಿನಲ್ಲಿ ಮೆರೆದಾಡುವುದು ಇತ್ಯಾದಿ ಆಟಾಟೋಪಗಳಿಗೆ ವಿರಾಮ ಬೀಳಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಂದೇ ಡಿಸಿಸಿ ಬ್ಯಾಂಕ್ ಇದ್ದು ಅದನ್ನು ವಿಭಜಿಸಬೇಕೆಂದು ಉಡುಪಿ ಭಾಗದ ನಾಯಕರು ಹೋರಾಟ ನಡೆಸುತ್ತಿದ್ದರೂ, ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಮಂಗಳೂರಿನ ಡಿಸಿಸಿ ಬ್ಯಾಂಕಿನಲ್ಲಿ ನೂರಕ್ಕೂ ಹೆಚ್ಚು ಶಾಖೆಗಳಿದ್ದು, ಅಲ್ಲಿನ ವ್ಯವಹಾರ, ಲಾಭ, ನಷ್ಟವನ್ನು ನೋಡಿಕೊಂಡು ಅವನ್ನು ಉಳಿಸಿಕೊಳ್ಳುವುದೋ, ಶಾಖೆಯನ್ನು ಬಂದ್ ಮಾಡುವುದೋ ಅನ್ನುವ ಬಗ್ಗೆಯೂ ಅಪೆಕ್ಸ್ ಬ್ಯಾಂಕ್ ನಿರ್ಧಾರ ತೆಗೆದುಕೊಳ್ಳುತ್ತದೆ.
ಮಂಗಳೂರಿನ ಡಿಸಿಸಿ ಬ್ಯಾಂಕಿಗೆ ಸದ್ಯದಲ್ಲೇ ಆಡಳಿತಾಧಿಕಾರಿ ನೇಮಕ ಆಗಲಿದ್ದು, ಇಲ್ಲಿನ ಅವ್ಯವಹಾರ, ಸ್ವಸಹಾಯ ಗುಂಪುಗಳಿಗೆ ಕಾನೂನು ಉಲ್ಲಂಘಿಸಿ ನೀಡುತ್ತಿರುವ ಹಣದ ಬಗ್ಗೆಯೂ ಅಧಿಕಾರಿ ರಾಜ್ಯ ಸರಕಾರಕ್ಕೆ ವರದಿ ನೀಡಲಿದ್ದಾರೆ. ಒಟ್ಟಿನಲ್ಲಿ ಇನ್ನು ಆರು ತಿಂಗಳಲ್ಲಿ ವಿಲೀನ ಪ್ರಕ್ರಿಯೆ ಮುಗಿಯಲಿದೆ ಎನ್ನುವ ಮಾಹಿತಿಗಳಿದ್ದು, ಅಲ್ಲಿಗೆ ಡಿಸಿಸಿ ಬ್ಯಾಂಕಿನ ಹೆಸರಲ್ಲಿ ಮಾಡುತ್ತಿರುವ ಡಂಭಾಚಾರದ ಆಟಾಟೋಪಕ್ಕೂ ಕೊನೆ ಬೀಳಲಿದೆ.
The state on Friday set up a eight-member committee headed by former National Bank for Agriculture and Rural Development Cooperative Bank even during the BJP Party ruling in the state of Karnataka.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm