ಬ್ರೇಕಿಂಗ್ ನ್ಯೂಸ್
21-03-22 06:23 pm HK Desk news ಕರ್ನಾಟಕ
ಶಿವಮೊಗ್ಗ, ಮಾ.21 : ಆ ಪ್ರೇಮಿಗಳದ್ದು ಆರು ವರ್ಷಗಳ ಪ್ರೀತಿ, ಪ್ರೇಮ. ಆದರೆ, ಪ್ರೀತಿಸಿದ ಹುಡುಗಿಯನ್ನೇ ಧಿಕ್ಕರಿಸಿ ಯುವಕ ಬೇರೆ ವಿವಾಹವಾಗಿದ್ದ. ಇದರಿಂದ ಬೇಸತ್ತ ಹುಡುಗಿ ಅತ್ತ ಪ್ರಿಯಕರ ಬೇರೊಬ್ಬಳಿಗೆ ತಾಳಿ ಕಟ್ಟುವ ಹೊತ್ತಲ್ಲೇ ನೇಣಿಗೆ ಕೊರಳೊಡ್ಡಿ ಸಾವಿಗೆ ಶರಣಾಗಿದ್ದಾಳೆ. ಇತ್ತ ಪ್ರೀತಿಸಿದ ಹುಡುಗಿ ಸಾವು ತಿಳಿಯುತ್ತಲೇ ಯುವಕ ಮದುವೆ ಮನೆಯಿಂದಲೇ ಪರಾರಿಯಾಗಿದ್ದಾನೆ. ಮತ್ತೊಂದು ಕಡೆ ತಾಳಿ ಕಟ್ಟಿ ಹಸೆಮಣೆ ಏರಿದ್ದ ನವ ವಿವಾಹಿತೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಆರು ವರ್ಷಗಳ ಪ್ರೀತಿ ಆರು ಸೆಕೆಂಡುಗಳಲ್ಲಿ ದುರಂತ ಅಂತ್ಯ ಕಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ಓ.ಟಿ ರಸ್ತೆಯ ನಿವಾಸಿ, ಕಾಲೇಜು ಉಪನ್ಯಾಸಕಿ ರೂಪಶ್ರೀ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಇತ್ತ ಮನೆಯವರು ನಿಶ್ಚಯಿಸಿದ್ದ ವಧುವಿನೊಂದಿಗೆ ವಿವಾಹವಾದ ಪ್ರಿಯಕರ ಮುರಳಿ ಮದುವೆ ಮನೆಯಿಂದಲೇ ನಾಪತ್ತೆಯಾಗಿದ್ದಾನೆ.
ನಗರದ ಕಾಲೇಜು ಒಂದರಲ್ಲಿ ಉಪನ್ಯಾಸಕರಾಗಿರುವ ಮುರಳಿ ಹಾಗು ರೂಪಶ್ರೀ ಜೋಡಿ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜಿನಲ್ಲಿರುವಾಗಲೇ ಇಬ್ಬರು ಪ್ರೀತಿಯ ಬಲೆಗೆ ಬಿದ್ದು ಒಳ್ಳೆಯ ಭವಿಷ್ಯ ಕಂಡುಕೊಂಡು ಮದುವೆಯಾಗಲು ನಿರ್ಧರಿಸಿದ್ದರು. ರೂಪಶ್ರೀ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಪಿ.ಹೆಚ್.ಡಿ ಅಂತಿಮ ಹಂತಕ್ಕೆ ಬಂದಿದ್ದ ಹಿನ್ನಲೆಯಲ್ಲಿ ಕಳೆದ ಆರು ತಿಂಗಳಿನಿಂದ ಕಾಲೇಜಿಗೆ ಹೋಗುತ್ತಿರಲಿಲ್ಲ. ಮುರಳಿ ಕೂಡ ಡಿವಿಎಸ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ. ರೂಪಶ್ರೀಗೆ ತಂದೆ, ತಾಯಿ ಹಾಗು ಓರ್ವ ಸಹೋದರನಿದ್ದಾನೆ. ಬಡತನದಲ್ಲಿ ಬೆಳೆದಿದ್ದರೂ ಕಷ್ಟದಲ್ಲಿ ಓದಿ ಪಿ.ಹೆಚ್.ಡಿ ಪದವಿ ಗಳಿಸಿದ ಮಗಳ ಸಂಭ್ರಮ ಕಣ್ತುಂಬಿಕೊಳ್ಳಲು ಪೋಷಕರು ಕಾತುರರಾಗಿದ್ದರು. ಆದರೆ ವಿಧಿ ಬೇರೆಯೇ ಬಗೆದಿದ್ದು ದುರಂತವೇ ಎದುರಾಗಿದೆ.

ರೂಪಶ್ರೀ - ಮುರಳಿ ಪ್ರೇಮದ ಕಥೆಯಲ್ಲಿ ಎಲ್ಲವೂ ಮುಗಿದು ಹೋಗಿತ್ತು. ಇತ್ತ ಪ್ರಿಯಕರ ಪ್ರೀತಿಯ ನೆಪದಲ್ಲಿ ಆಕೆಯನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ರೂಪಶ್ರೀಯನ್ನು ದೂರ ಮಾಡ್ತಿದ್ದ. ಪ್ರೀತಿಯ ಬಲೆಗೆ ಬಿದ್ದಿದ್ದ ರೂಪಶ್ರೀ ಇತ್ತ ಮನೆಯಲ್ಲಿ ಆ ವಿಚಾರವನ್ನು ಹೇಳದೆ ರಹಸ್ಯವಾಗಿಟ್ಟಿದ್ದಳು. ಹೆತ್ತವರು ಹತ್ತು ಗಂಡುಗಳನ್ನು ನೋಡಿದ್ರೂ ಆಕೆ ಮದುವೆಗೆ ನಿರಾಕರಣೆ ಮಾಡಿದ್ದಳು. ಸರ್ಕಾರಿ ನೌಕರಿ, ದೊಡ್ಡ ಹುದ್ದೆಯಲ್ಲಿದ್ದ ಗಂಡುಗಳನ್ನೇ ಮನೆಯವರು ನೋಡಿದ್ರೂ, ರೂಪಶ್ರೀ ನಿರಾಕರಿಸಿದ್ದು ಮನೆಯವರಿಗೆ ಸಂಶಯ ಮೂಡಿಸಿತ್ತು. ಕೊನೆಗೆ, ಯಾಕೆ ನಾವು ನೋಡಿದ ಹುಡುಗರನ್ನೆಲ್ಲ ನಿರಾಕರಿಸುತ್ತಿದ್ದೀಯಾ ಎಂದು ಮನೆಯವರು ಕೇಳಿದಾಗ, ಆಕೆ ತನ್ನ ಪ್ರೀತಿಯ ಬಗ್ಗೆ ಹೇಳಿದ್ದಳು. ಅಲ್ಲದೆ, ಅವನನ್ನೇ ಮದುವೆಯಾಗುವುದಾಗಿ ಹೇಳಿ ಕುಟುಂಬದವರನ್ನು ಮನವೊಲಿಸಿದ್ದಳು.
ಬಳಿಕ ರೂಪಶ್ರೀ ಮನೆಯವರು ಮುರಳಿ ಮನೆಗೆ ಬಂದು ಮದುವೆ ಪ್ರಸ್ತಾಪ ಮುಂದಿಟ್ಟಾಗ, ಹುಡುಗನ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ ಕಳೆದ ತಿಂಗಳು ರೂಪಶ್ರೀ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಮೆಗ್ಗಾನ್ ಆಸ್ಪತ್ರೆ ದಾಖಲಾಗಿದ್ದಳು. ಮೆಗ್ಗಾನ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡು ಮನೆಗೆ ವಾಪಸ್ಸಾದಾಗ ಹುಡುಗಿ ಕುಟುಂಬದವರು ಮತ್ತೆ ಮುರುಳಿ ಮನೆಯವರನ್ನು ಮನವೊಲಿಸಿ ಮದುವೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಆ ಮನೆಯವರು ರೂಪಶ್ರೀ ಮನೆಮಂದಿಗೆ ಅವಮಾನವನ್ನೇ ಮಾಡಿದ್ದರು.
ಹುಡುಗಿ ರೂಪಶ್ರೀ ಎಷ್ಟೇ ಕಾಡಿ ಬೇಡಿದ್ರೂ ಆತನ ಕಲ್ಲು ಹೃದಯ ಮಾತ್ರ ಕರಗಲಿಲ್ಲ. ಮುರಳಿ ತನ್ನ ಮನೆಯವರು ನಿಶ್ಚಯಿಸಿದ್ದ ವಧುವನ್ನೇ ಮದುವೆಯಾಗಲು ಅಣಿಯಾಗಿದ್ದ. ಅದರಂತೆ ಭಾನುವಾರ ಶಿವಮೊಗ್ಗದ ಆದಿ ಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಯಾಗಿತ್ತು. ಮದುವೆ ತಾಳಿಕಟ್ಟುವ ಮಹೂರ್ತದಲ್ಲಿಯೇ ರೂಪಶ್ರೀ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಸಾಯುವ ಮುನ್ನ ಮುರಳಿ ತನಗೆ ಮಾಡಿದ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿ ಡೆತ್ ನೋಟ್ ಬರೆದಿದ್ದಾಳೆ.
ನವವಧುವಿನಿಂದಲೂ ಆತ್ಮಹತ್ಯೆ ಯತ್ನ !

ಮದುವೆ ಮಂಟಪದಲ್ಲಿ ಇರುವಾಗಲೇ ಇತ್ತ ರೂಪಶ್ರೀ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದುಬಂದಿತ್ತು. ತಕ್ಷಣ ಆತ ಅಲ್ಲಿಂದಲೇ ನಾಪತ್ತೆಯಾಗಿದ್ದಾನೆ. ಗಂಡನ ಪ್ರೀತಿಯ ವಿಷಯ ಗೊತ್ತಾಗುತ್ತಿದ್ದಂತೆ ಕಂಗೆಟ್ಟ ನವ ವಧು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಪೋಷಕರು ಆಕೆಯನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರೂಪಶ್ರೀ ಆತ್ಮಹತ್ಯೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುರಳಿ ವಿರುದ್ಧ ಆತ್ಮಹತ್ಯೆಗೆ ಪ್ರಚೋಧನೆ ಮತ್ತು ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಇಬ್ಬರು ಹೆಣ್ಣು ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಿದ ಮುರುಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ತನ್ನ ಮಗನ ಪ್ರೀತಿಯನ್ನು ಮುಚ್ಚಿಟ್ಟು ಬೇರೊಂದು ವಧುವಿನೊಂದಿಗೆ ವಿವಾಹ ನಿಶ್ಚಯಿಸಿದ್ದ ಮುರುಳಿ ಪೋಷಕರು ತೆಗೆದುಕೊಂಡ ತಪ್ಪು ನಿರ್ಧಾರದಿಂದ ಇಂದು ಎರಡು ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.
In a rapid turn of events, a lady killed herself, having been frustrated over the fact that her long-time lover married another girl on Sunday March 20. On learning about this, the groom vanished from the wedding hall. The bride too tried to kill herself but survived. These incidents happened on Sunday.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm