ಬ್ರೇಕಿಂಗ್ ನ್ಯೂಸ್
21-03-22 05:08 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.21 : ಉಕ್ರೇನ್ ಯುದ್ಧಭೂಮಿಯಲ್ಲಿ ರಷ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಯುವಕ ನವೀನ್ ಮೃತದೇಹ ಅಂತೂ ತಾಯ್ನಾಡಿಗೆ ತಲುಪಿದೆ. ಘಟನೆ ನಡೆದು 20 ದಿನಗಳ ನಂತರ ನವೀನ್ ಶವ ಬೆಂಗಳೂರಿಗೆ ತರಲಾಗಿದ್ದು, ಇಲ್ಲಿಂದ ಹುಟ್ಟೂರು ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮಕ್ಕೆ ಕರೆದೊಯ್ಯಲಾಗಿದೆ.
ನಸುಕಿನ ಜಾವ ವಿಮಾನದ ಮೂಲಕ ಬೆಂಗಳೂರಿಗೆ ತಲುಪಿದ್ದು, ಇಲ್ಲಿಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಆಂಬುಲೆನ್ಸ್ ಮೂಲಕ ನವೀನ್ ಶವ ಚಳಗೇರಿ ತಲುಪಿದೆ. ಮೃತದೇಹ ಬರುತ್ತಲೇ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆ ಶೇಖರಪ್ಪ ಮತ್ತು ತಾಯಿ ಮಗನ ಶವ ನೋಡಿ ಗೋಳಿಟ್ಟರು. ಅಲ್ಲದೆ, ಕುಟುಂಬಸ್ಥರು, ಸ್ಥಳೀಯರು ಸೇರಿ ಗೌರವ ನಮನ ಸಲ್ಲಿಸಿದ್ದಾರೆ. ಮಧ್ಯಾಹ್ನ 2 ಗಂಟೆ ವರೆಗೆ ಶೇಖರಪ್ಪ ಮನೆಯ ಬಳಿ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಆನಂತರ ಶವ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.

ನವೀನ್ ಪೋಷಕರು ಮೃತದೇಹ ತರುವುದಕ್ಕಾಗಿ ರಾಜ್ಯ ಸರಕಾರದ ಮುಂದೆ ಅಹವಾಲು ಇಟ್ಟಿದ್ದರು. ಅಲ್ಲಿ ಸಿಕ್ಕಿಬಿದ್ದ ಇತರೇ ವಿದ್ಯಾರ್ಥಿಗಳನ್ನು ಕರೆತರುವ ಕೆಲಸ ನಡೆದಿದ್ದರೂ, ಮೃತಪಟ್ಟ ನವೀನ್ ಶವ ತರುವ ಬಗ್ಗೆ ಯಾವುದೇ ಭರವಸೆ ಇರಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಮಾತ್ರ, ಶವ ಕರೆತರುವ ಕೆಲಸ ಆಗುತ್ತಿದೆ. ರಾಯಭಾರ ಕಚೇರಿ ಜೊತೆಗೆ ಮಾತನಾಡಲಾಗಿದೆ ಎಂದು ಭರವಸೆ ನೀಡಿದ್ದರು. ಹಾಗಿದ್ದರೂ, ಕೆಲವು ನಾಯಕರು ಶವ ಕರೆತರುವುದು ಕಷ್ಟದ ಕೆಲಸ. ಜೀವಂತ ಇದ್ದವರನ್ನೇ ಕರೆತರುವುದು ಕಷ್ಟವಾಗಿದೆ, ಸತ್ತವರನ್ನು ಕರೆತರೋದು ಹೇಗೆ ಎಂದು ಪ್ರಶ್ನೆ ಮಾಡಿದ್ದರು.

ಹೆತ್ತವರು ತಮ್ಮ ಮಗನನ್ನು ಜೀವಂತ ನೋಡಲು ಆಗಿಲ್ಲ. ಡಾಕ್ಟರ್ ಆಗಿ ಊರಿಗೆ ಬರಬೇಕಾಗಿತ್ತು. ಶವವನ್ನಾದರೂ ತಂದುಕೊಡಿ ಎಂದು ಗೋಗರೆದಿದ್ದರು. ಇದೀಗ ಶವ ಬರುತ್ತಲೇ ಹೆತ್ತವರು ಮಗನ ಶವವನ್ನು ದಾವಣಗೆರೆಯ ಮೆಡಿಕಲ್ ಕಾಲೇಜಿಗೆ ದಾನ ಮಾಡುವುದಾಗಿ ತಿಳಿಸಿದ್ದಾರೆ. ಆಮೂಲಕ ಮಗನ ಕಳಕೊಂಡ ದುಃಖದ ನಡುವೆಯೂ ದೇಹವನ್ನು ದಾನ ಮಾಡುವ ಮೂಲಕ ಸಾರ್ಥಕ ಕಾರ್ಯ ಮಾಡಿದ್ದಾರೆ. ವೀರಶೈವ ಧರ್ಮದ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಪೂರೈಸಿ ಸಂಜೆ ವೇಳೆಗೆ ಮೆರವಣಿಗೆ ಮೂಲಕ ದಾವಣಗೆರೆಗೆ ಕೊಂಡೊಯ್ದು ಆಸ್ಪತ್ರೆಗೆ ನೀಡಲಾಗುವುದು ಎಂದು ಕುಟುಂಬ ಮೂಲಗಳು ಹೇಳಿವೆ.
ಅಮೆರಿಕಕ್ಕೂ ಆಗದ ಕಾರ್ಯವನ್ನು ಮೋದಿ ಮಾಡಿದ್ದಾರೆ

ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಸರಕಾರದ ಪ್ರಮುಖ ನಾಯಕರು, ಅಧಿಕಾರಿಗಳು ಚಳಗೇರಿ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಮಾತನಾಡಿದ ಬೊಮ್ಮಾಯಿ, ಉಕ್ರೇನಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ಕರೆತರುವ ದೊಡ್ಡ ಕಾರ್ಯವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಅದಕ್ಕಾಗಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನವೀನ್ ಮೃತಪಟ್ಟ ಬಳಿಕ ಕುಟುಂಬದ ಜೊತೆಗೆ ಪ್ರಧಾನಿಯವರೇ ಮಾತನಾಡಿದ್ದರು. ಆನಂತರ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಅವರ ಸೂಚನೆಯಂತೆ ಮೃತದೇಹವನ್ನು ಕರೆತರುವ ಕೆಲಸ ಆಗಿದೆ. ಸಾವಿರಾರು ಸಂಖ್ಯೆಯಲ್ಲಿ ಸಿಕ್ಕಿಬಿದ್ದವರನ್ನು ಅಲ್ಲಿಂದ ರಕ್ಷಿಸಿ ಕರೆತರಲಾಗಿದೆ. ಇಂತಹ ಕಾರ್ಯವನ್ನು ಅಮೆರಿಕ ಕೂಡ ಮಾಡಿಲ್ಲ ಎಂದು ಹೇಳಿದರು.
Mortal remains of Indian medical killed, who was killed in Russian shelling in a war-torn Ukraine, have arrived in Bengaluru on Monday. Naveen Shekarappa Gyanagaudar, a Final Year Medical student at Kharkiv National Medical University, died on March 1, in the conflict zone. Naveen was a resident of Karnataka's Haveri district.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm