ಬ್ರೇಕಿಂಗ್ ನ್ಯೂಸ್
18-03-22 10:32 pm HK Desk news ಕರ್ನಾಟಕ
ಮೈಸೂರು, ಮಾ.18 : ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಲ್ಲದೆ, ಕಳೆದ ಬಾರಿ ಬಿಜೆಪಿ ವಕ್ತಾರರಾಗಿ ಪಕ್ಷದ ಕಠಿಣ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪ್ರಬಲ ಸಮರ್ಥಕರಾಗಿ ಕಾಣಿಸಿಕೊಂಡು ಸಿದ್ದರಾಮಯ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಮೈಸೂರಿನ ಗೋ. ಮಧುಸೂದನ್ ಅವರಿಗೆ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದ್ದು ಅವರ ಬೆಂಬಲಿಗರಿಗೆ ಆಘಾತ ಉಂಟು ಮಾಡಿದೆ. ಇದರ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೈವಾಡ ಇದೆ. ಮಧುಸೂದನ್ ಅವರನ್ನು ಸೈಡ್ ಲೈನ್ ಮಾಡುವ ದೃಷ್ಟಿಯಿಂದ ಉದ್ದೇಶಪೂರ್ವಕ ಈ ಕೆಲಸ ಮಾಡಿದ್ದಾರೆ ಎನ್ನುವ ಆರೋಪವನ್ನೂ ಬೆಂಬಲಿಗರು ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆಗಾಗಿ ಹೊಸ ಸದಸ್ಯರನ್ನು ಸೇರಿಸಲು 50 ಸಾವಿರ ಅರ್ಜಿ ಫಾರಂ ಜೊತೆಗೆ ಭಾರೀ ಸಿದ್ಧತೆ ನಡೆಸಿದ್ದ ಮಧುಸೂದನ್ ಅವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಿರುವುದು ನುಂಗಲಾರದ ತುತ್ತಾಗಿದೆ. ಮಧುಸೂಧನ್ ಸ್ಪರ್ಧೆಯಿಂದ ಹೊರಗೆ ಬಿದ್ದ ಕಾರಣ ಶಾಕ್ ಆಗಿರುವ ಅವರ ಬೆಂಬಲಿಗರು ನಗುಮೊಗದಿಂದಲೇ ಬಿಜೆಪಿ ಪದಾಧಿಕಾರಿಗಳಿಗೆ ಚುನಾವಣಾ ಸಾಮಗ್ರಿಗಳ ಜೊತೆಗೆ ಅರ್ಜಿ ಫಾರಂಗಳನ್ನೂ ಹಿಂತಿರುಗಿಸಿದ್ದಾರೆ.
ಕಳೆದ 18 ವರ್ಷಗಳಿಂದ ದಕ್ಷಿಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಧುಸೂದನ್ ಏಳು ತಿಂಗಳಿನಿಂದ ಚುನಾವಣೆಗೆ ತಯಾರಿ ನಡೆಸಿದ್ದರು. ಕಳೆದ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನಿರಾಕರಿಸಿದಂತೆ ಮಧುಸೂದನ್ ಅವರಿಗೂ ಟಿಕೆಟ್ ನೀಡದೆ ಅವಮಾನ ಮಾಡಿದ್ದಾರೆ ಎಂದು ಅವರ ಬೆಂಬಲಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಇದಕ್ಕೆಲ್ಲಾ ಬಿಎಲ್ ಸಂತೋಷ್ ಅವರೇ ಕಾರಣ ಎಂಬುದು ಬೆಂಬಲಿಗರ ಆರೋಪ.

ಬಿ.ಎಲ್. ಸಂತೋಷ್ ಮತ್ತು ಮಧುಸೂಧನ್ ಮೂರು ದಶಕಗಳ ಹಿಂದೆ ಮೈಸೂರು ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಯಲ್ಲಿ ಜೊತೆಯಾಗೇ ಇದ್ದವರು. ಬಳಿಕ ಇಬ್ಬರೂ ಆರ್ಎಸ್ಎಸ್ ಪ್ರಚಾರಕರಾಗಿ, ಎರಡು ವರ್ಷ ಪಂಜಾಬ್ನಲ್ಲಿ ಕೆಲಸ ಮಾಡಿದ ನಂತರ ರಾಜ್ಯಕ್ಕೆ ಹಿಂತಿರುಗಿದ್ದರು. ರಾಮಜನ್ಮ ಭೂಮಿ ಆಂದೋಲನದ ವೇಳೆ ಮಧುಸೂದನ್ ಜನಪ್ರಿಯ ಭಾಷಣಕಾರರಾಗಿ ಪ್ರಸಿದ್ಧಿ ಪಡೆದಿದ್ದರು. ಆನಂತರ ರಾಜ್ಯ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು.
2013ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಿಡಿದು ನಿಂತ ಯಡಿಯೂರಪ್ಪ ಕೆಜೆಪಿ ಕಟ್ಟಿ ಸ್ಪರ್ಧಿಸಿದ ಕಾರಣ ಬಿಜೆಪಿ ಸ್ಥಿತಿ ಹೀನಾಯವಾಗಿತ್ತು. ಕೇವಲ 40 ಸ್ಥಾನ ಪಡೆದ ನಂತರ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂಬ ಒತ್ತಡವೂ ಹೆಚ್ಚಿತ್ತು. ಆ ಸಂದರ್ಭದಲ್ಲಿ ಬಿ.ಎಲ್.ಸಂತೋಷ್ ವಿರೋಧ ಇದ್ದರೂ, ಅದನ್ನು ಲೆಕ್ಕಿಸದೆ ಮಧುಸೂದನ್ ಅವರು ಬಿ.ಎಸ್ ಯಡಿಯೂರಪ್ಪ ಪಕ್ಷಕ್ಕೆ ವಾಪಸಾಗಬೇಕೆಂದು ಬ್ಯಾಟಿಂಗ್ ಮಾಡಿದ್ದರು. ಇದು ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಸಂತೋಷ್ ಯಡಿಯೂರಪ್ಪ ಮತ್ತೆ ಪಕ್ಷ ಮರಳುವುದಕ್ಕೆ ಆಗಲೇ ವಿರೋಧ ಹೊಂದಿದ್ದರು.

ಯಡಿಯೂರಪ್ಪ ಮರು ಪ್ರವೇಶದ ಬಳಿಕ 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರದ ಸನಿಹ ತರುವಲ್ಲಿ ಯಶಸ್ವಿಯಾಗಿದ್ದರು. ಆನಂತರ ಲೋಕಸಭಾ ಚುನಾವಣೆಯಲ್ಲೂ ಪಕ್ಷವು ಉತ್ತಮ ಪ್ರದರ್ಶನ ನೀಡಲು ಯಡಿಯೂರಪ್ಪ ಆಗಮನ ಕಾರಣವಾಗಿತ್ತು. ಆರೆಸ್ಸೆಸ್ ನಾಯಕರ ಸಹಮತದ ನಡುವೆಯೇ ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತಂದಿದ್ದರಿಂದ ಪಕ್ಷಕ್ಕೆ ಲಾಭವೇ ಆಗಿದ್ದರೂ, ವಿರೋಧಿ ಬಣ ಮಾತ್ರ ಅವರನ್ನು ಹೊರಕ್ಕೆ ದೂಡಲು ಶತಾಯಗತಾಯ ಪ್ರಯತ್ನಿಸುತ್ತಲೇ ಇದೆ. ಈಗ ಅವರ ಪರವಾಗಿ ಸಮರ್ಥನೆ ಮಾಡುತ್ತಿದ್ದ ಮಧುಸೂದನ್ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ. ಅಧ್ಯಕ್ಷರ ಬದಲಾವಣೆ ಬಳಿಕ ಬಹುತೇಕ ಸೈಡ್ ಲೈನ್ ಆಗಿದ್ದ ಮಧುಸೂದನ್ ಇನ್ನು ಪೂರ್ತಿಯಾಗಿ ಚಲಾವಣೆಯಲ್ಲಿ ಇಲ್ಲದ ನಾಣ್ಯ ಎನ್ನುವಂತಾಗಲಿದ್ದಾರೆ.
Close aide of Yediyurappa, Madhusudan gifted with gate pass, political revenge by B L Santosh.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm