ಬ್ರೇಕಿಂಗ್ ನ್ಯೂಸ್
14-03-22 12:42 pm HK Desk news ಕರ್ನಾಟಕ
Photo credits : Janekere Paramesh
ಸಕಲೇಶಪುರ, ಮಾ.14 :ಅದ್ಯಾವ್ದೋ ಊರಿಗೆ ನೀರು ಕೊಡೋಕೆ ನಮ್ಮ ಮನೆಗಳ ಕೆಳಗೆ ಸುರಂಗ ಕೊರೆದು, ಆ ಸುರಂಗನೂ ಕುಸಿದು, ಅದರೊಟ್ಟಿಗೆ ನಮ್ಮ ಜೀವನಾನೇ ಕುಸಿದು ಹೋಗಿದೆ. ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದ ಯಶೋಧಮ್ಮ ಕಣ್ಣೀರು ಹಾಕುತ್ತಾ ಹೇಳಿದ ಮಾತುಗಳಿವು. ಎತ್ತಿನಹೊಳೆ ಯೋಜನೆಗೆ ನೀರು ಹಾಯಿಸಲು ಮೇಲ್ಬಾಗದಲ್ಲಿ ಮನೆಗಳು ಇರುವಂತೆಯೇ ಸುಮಾರು 120 ಅಡಿ ಆಳದಲ್ಲಿ 130 ಮೀಟರ್ ಉದ್ದ ಸುರಂಗ ಕಾಮಗಾರಿ ಮಾಡಲಾಗಿತ್ತು. ಆ ಸುರಂಗ ಭೂಮಿಯಡಿಯಲ್ಲಿ ಕುಸಿದಿದ್ದು ಅದನ್ನು ಪತ್ತೆ ಮಾಡುವುದಕ್ಕಾಗಿ ದೊಡ್ಡ ಪ್ರಪಾತವನ್ನೇ ತೋಡಲಾಗಿದೆ.
ಕುಸಿದಿರುವ ಸುರಂಗ ಪತ್ತೆಹಚ್ಚಲು ಸುಮಾರು 200 ಅಡಿ ಅಗಲ, 100 ಮೀಟರ್ಗೂ ಉದ್ದ ಹಾಗೂ 120 ಅಡಿ ಆಳಕ್ಕೆ ಭೂಮಿಯನ್ನು ತೋಡಲಾಗಿದ್ದು ಬೃಹತ್ ಪ್ರಪಾತ ಸೃಷ್ಟಿಯಾಗಿದೆ. ಸುರಂಗ ನಿರ್ಮಾಣದ ವೇಳೆ ಒಳಭಾಗದಲ್ಲಿ ಬಂಡೆಗಳನ್ನು ಡೈನಮೆಂಟ್ಗಳಿಂದ ಸಿಡಿಸುವಾಗ ಹೆಬ್ಬನಹಳ್ಳಿ ಹಾಗೂ ಮೂಗಲಿ ಗ್ರಾಮದ ಸುಮಾರು 100ಕ್ಕೂ ಹೆಚ್ಚು ಮನೆಗಳು, ಶಾಲಾ ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯೊಳಗಿನ ನೆಲ ಕುಸಿದಿದೆ. ಬಹುತೇಕ ಎಲ್ಲಾ ಮನೆಗಳು ವಾಸ ಮಾಡುವುದಕ್ಕೆ ಸುರಕ್ಷಿತವಾಗಿಲ್ಲ. ವಾಸ್ತವ ಹೀಗಿದ್ದರೂ ಇಲ್ಲಿನ ಆಡಳಿತ ವರ್ಗ ಯೋಜನಾ ಕಾಮಗಾರಿ ವಿಚಾರದಲ್ಲಿ ಕ್ಯಾರೆಂದಿಲ್ಲ.
ದುರಂತ ಎಂದರೆ ನೀರು ಹಾಯಿಸುವುದಕ್ಕೂ ಮೊದಲೇ ಈ ಸುರಂಗ ಕುಸಿದು ಹೋಗಿದ್ದು ಕಾಮಗಾರಿಯ ಲೋಪದ ಬಗ್ಗೆಯೇ ಪ್ರಶ್ನೆ ಎದುರಾಗಿದೆ. ಲೋಕಯ್ಯ, ಶಿವಪ್ಪ, ಯಶೋಧಮ್ಮ ಸದಾಶಿವ, ಸರೋಜಾ, ರಮೇಶ್, ವಾಸುದೇವ್ ಸೇರಿದಂತೆ ಈ ಭಾಗದಲ್ಲಿ ವಾಸವಿರುವ ನಿವಾಸಿಗಳ 13 ಮನೆಗಳು ಪ್ರಪಾತದ ಪಕ್ಕದಲ್ಲಿ ಅಪಾಯಕ್ಕೀಡಾಗಿವೆ. ಮೆದುವಾದ ಮಣ್ಣು ಕುಸಿಯುತ್ತಲೇ ಇದ್ದು ಸುರಂಗ ಮಾರ್ಗದ ಪತ್ತೆಗಾಗಿ ಹತ್ತಾರು ವಾಹನಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.
ಸುರಂಗ ಕೊರೆಯುವಾಗಲೇ ನಮ್ಮ ಮನೆಗಳು ಬಿರುಕು ಬಿಟ್ಟುಕೊಂಡಿವೆ. ಸುರಂಗ ಕುಸಿದ ಪರಿಣಾಮ ಪ್ರಪಾತ ನಿರ್ಮಾಣ ಮಾಡಿದ್ದಾರೆ. ಯಾವ ತಡೆಗೋಡೆಯೂ ಇಲ್ಲದ ಈ ಪ್ರಪಾತ ಯಾವುದೇ ಸಂದರ್ಭ ಕುಸಿದು ಬೀಳುವುದು ಖಚಿತ. ಕುಸಿದ ಕ್ಷಣದಲ್ಲಿ ಇಲ್ಲಿರುವ ಮನೆಗಳು ನೆಲ ಸಮ ಆಗುತ್ತವೆ. ಯಾವುದೇ ಪರಿಹಾರವನ್ನೂ ನೀಡಿಲ್ಲ. ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸದೆ, ದಬ್ಬಾಳಿಕೆ, ದೌರ್ಜನ್ಯದಿಂದ ನಮ್ಮನ್ನು ಜೀವಂತ ಶವಗಳನ್ನಾಗಿ ಮಾಡಿ ಎತ್ತಿನಹೊಳೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಲೋಕೇಶ್ ಅಲವತ್ತುಕೊಂಡಿದ್ದಾರೆ.
ಹಿಂದೆಲ್ಲಾ 25 ರಿಂದ 30 ಅಡಿ ಬಾವಿ ತೆಗೆದರೆ ನೀರು ಬರುತ್ತಿತ್ತು. ಈಗ 120 ಅಡಿ ಆಳ ಸುರಂಗ ತೆಗೆದು, ಪುನಃ ಅಷ್ಟೇ ಆಳದಲ್ಲಿ ತೆರೆದ ಚಾನಲ್ನಲ್ಲಿ ನೀರು ಹರಿಸಲು ಭೂಮಿ ಬಗೆದ ಪರಿಣಾಮ 40 ವರ್ಷಗಳಿಂದ ಊರಿಗೆ ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿಯೇ ಬತ್ತಿಹೋಗಿದೆ. ಮೂರು ತೆರೆದ ಬಾವಿ, ಎರಡು ಕೆರೆ, ಮೂರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದು ಕುಡಿಯುವುದಕ್ಕೂ ನೀರಿಲ್ಲದಾಗಿದೆ. ಬಯಲು ಸೀಮೆಗೆ ನೀರು ಕೊಡುತ್ತೇವೆಂದು ನಮ್ಮ ನೀರಿನ ಮೂಲಗಳನ್ನು ಸರ್ವ ನಾಶ ಮಾಡಿದ್ದಾರೆ ಎಂದು ಲೋಕಯ್ಯ ಹೆಬ್ಬನಹಳ್ಳಿ ಹಿಡಿಶಾಪ ಹಾಕುತ್ತಾರೆ.
40, 50 ವರ್ಷಗಳಿಂದ ಅಜ್ಜನ ಕಾಲದಿಂದ ಇದೇ ಜಾಗದ ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು 2.3 ಗುಂಟೆ ಜಾಗದಲ್ಲಿ ಕಾಫಿ, ಅಡಿಕೆ, ತೆಂಗು ಬೆಳೆದು ಬದುಕುತ್ತಿದ್ದೇವೆ. ಕಳೆದ ಎರಡು ದಶಕಗಳಿಂದ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸುತ್ತಲೇ ಬಂದಿದ್ದರೂ, ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ನಮಗೆ ಯಾವುದೇ ಪರಿಹಾರ ನೀಡದೆ, ಎತ್ತಿನಹೊಳೆ ಯೋಜನೆ ಕಾಮಗಾರಿ 24X7 ಮಾಡುತ್ತಿದ್ದಾರೆ. ನಮ್ಮ ಬದುಕು ಬೀದಿಗೆ ಬಂದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಯಾರೂ ನಮ್ಮ ನೆರವಿಗೆ ಬರುತ್ತಿಲ್ಲ ಎಂದು ಸದಾಶಿವ ಸಂತ್ರಸ್ತ ಹೆಬ್ಬನಹಳ್ಳಿ ಹೇಳುತ್ತಾರೆ.
ಹೆಬ್ಬನಹಳ್ಳಿ ಗ್ರಾಮದಲ್ಲಿ ಸುರಂಗ ಮಾರ್ಗ ಕುಸಿದಿದ್ದು, ತೆರೆದ ಚಾನಲ್ ಮೂಲಕ ನೀರು ಹರಿಸುವ ಕಾಮಗಾರಿ ಮಾಡಲಾಗುತ್ತಿದೆ. ಎರಡೂ ಬದಿಯಲ್ಲಿ ಇರುವ ಮನೆಗಳಿಗೆ ಹೆಚ್ಚು ಹಾನಿ ಉಂಟಾಗುವ ಸಾಧ್ಯತೆ ಕಂಡುಬಂದಿದೆ. 13 ಮನೆಗಳು ಅಪಾಯದಲ್ಲಿದ್ದು, ಸುರಕ್ಷತೆ ಹಾಗೂ ಮುಂಜಾಗ್ರತೆ ದೃಷ್ಟಿಯಿಂದ ಬೇರೆಡೆ ಸ್ಥಳಾಂತರ ಮಾಡುವ ಬಗ್ಗೆ ವಿಶ್ವೇಶ್ವರಯ್ಯ ಜಲನಿಗಮ ಅಧೀಕ್ಷಕ ಎಂಜಿನಿಯರ್ ಅವರಿಗೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಅಲ್ಲಿನ ಇಂಜಿನಿಯರ್ ಗಳು ಹೇಳುತ್ತಾರೆ.
ಎತ್ತಿನಹೊಳೆ ಯೋಜನೆಯಲ್ಲಿ ನೀರು ಸಿಗಲ್ಲ ಎಂದು ಬಹಳಷ್ಟು ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರೂ, ರಾಜ್ಯ ಸರಕಾರ ಕೋಲಾರ, ಚಿಕ್ಕಬಳ್ಳಾಪುರದ ಜನರಿಗೆ ಮಂಕುಬೂದಿ ಎರಚಿ ನೀರಾವರಿ ಕಾಮಗಾರಿ ನಡೆಸುತ್ತಿದ್ದಾರೆ. ಪ್ರತಿ ಬಾರಿ ಬಜೆಟ್ ನಲ್ಲಿ ಸಾವಿರಾರು ಕೋಟಿ ತೆಗೆದಿಡುತ್ತಾರೆ. ಈಗಾಗಲೇ ಹತ್ತು ಸಾವಿರ ಕೋಟಿ ಸುರಿದಿದ್ದಾರೆ. ಜನರ ದುಡ್ಡನ್ನು ಪೋಲು ಮಾಡಿ, ಜನರ ಬದುಕನ್ನು ಸರ್ವನಾಶ ಮಾಡಿ ಇನ್ಯಾರದ್ದೋ ಶವ ಹೂಳಲು ಗುಂಡಿ ತೋಡುತ್ತಿದ್ದಾರೆ. ಸರಕಾರದ ಮಹಾನ್ ಅಕ್ರಮವನ್ನು ಜನರು ನೋಡಿಕೊಂಡು ಸುಮ್ಮನಿದ್ದಾರೆ.
Unscientific works, in laying pipelines, under Yettinahole project, has badly affected Aluvalli in Sakleshpur taluk, Hassan district. The pipelines are left uncovered and valves are not closed. Thus, water leaks from the pipe, turning the whole place marshy. This has dampened the soil, which has started to cave in. Around one acre of land has caved in, damaging coffee, pepper, silver oak, banana, and cardamom plants. The land has become unfit for agriculture. Nagesh has appealed to the authorities to build retaining walls and to resolve his problem.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm