ಬ್ರೇಕಿಂಗ್ ನ್ಯೂಸ್
13-03-22 02:01 pm HK Desk news ಕರ್ನಾಟಕ
ಹುಬ್ಬಳ್ಳಿ, ಮಾ.13: ಪಂಚ ರಾಜ್ಯಗಳ ಫಲಿತಾಂಶ ರಾಜ್ಯ ಬಿಜೆಪಿ ಸರಕಾರದ ಮೇಲೆ ದೊಡ್ಡ ಮಟ್ಟಿನ ಪರಿಣಾಮ ಬೀರಲಿದೆ ಎನ್ನುವ ವದಂತಿ ಹಬ್ಬಿರುವಾಗಲೇ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಲಿರುವುದು ಪಕ್ಕಾ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸುಳಿವು ನೀಡಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೋಷಿ, ಈ ಬಗ್ಗೆ ಈಗ ಯಾವುದೇ ಚರ್ಚೆ ಆಗಿಲ್ಲ. ರಾಜ್ಯ ವಿಧಾನಸಭೆ ಅಧಿವೇಶನದ ನಂತರ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಮಂತ್ರಿಮಂಡಲ ವಿಸ್ತರಣೆಯೋ, ಪುನಾರಚನೆಯೋ ಅನ್ನುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹೀನಾಯ ಸೋಲಿನ ಕುರಿತ ಪ್ರಶ್ನೆಗೆ, ಕಾಂಗ್ರೆಸನ್ನು ಸ್ವಾತಂತ್ರ್ಯ ಕಾಲದಲ್ಲಿಯೇ ವಿಸರ್ಜಿಸಬೇಕು ಎಂದು ಗಾಂಧೀಜಿ ಹೇಳಿದ್ದರು. ಆದರೆ, ಇವರು ಕೇಳಿರಲಿಲ್ಲ. ಈಗ ರಾಹುಲ್ ಗಾಂಧಿಯವರು ಸ್ವತಃ ಆ ಕೆಲಸವನ್ನು ಮಾಡುತ್ತಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಉತ್ತರ ಪ್ರದೇಶ ಚುನಾವಣೆ ಗೆಲ್ಲಲು 13 ಜನ ವೀಕ್ಷಕರನ್ನು ಅಲ್ಲಿಗೆ ಕಳುಹಿಸಿತ್ತು. ಇವರೇನು ಅಲ್ಲಿ ಗೂಂಡಾಗಿರಿ ನಡೆಸುವುದಕ್ಕೆ ಇಷ್ಟೊಂದು ಮಂದಿಯನ್ನು ಕಳುಹಿಸಿದ್ರಾ.. ಅಲ್ಲಿ ಕುಸ್ತಿ ಮಾಡಲು ಇರುತ್ತೆ ಎಂದು ಇವರು ಭಾವಿಸಿರಬೇಕು ಎಂದು ಕುಹಕವಾಡಿದರು. ಗೋವಾದಲ್ಲಿ ಫಲಿತಾಂಶ ಬರುವುದಕ್ಕೆ ಮೊದಲೇ ಡಿಕೆಶಿ ಅಲ್ಲಿಗೆ ತೆರಳಿದ್ದರು. ಅವರಿಗೇನು ಅಲ್ಲಿ ಗೂಂಡಾಗಿರಿ ನಡೆಸೋಕೆ ಇತ್ತಾ ಎಂದು ಪ್ರಶ್ನೆ ಮಾಡಿದರು.
Union minister Prahlada Joshi has hinted that there will be a expansion or restructuring in the state amid rumors that the outcome of the five states will have a major impact on the state BJP government.
01-07-25 10:52 pm
Bangalore Correspondent
ಹಾಸನ ಬಳಿಕ ಶಿವಮೊಗ್ಗ ಸರದಿ ; ಎರಡು ದಿನದಲ್ಲಿ ವಿದ್ಯ...
01-07-25 09:57 pm
Stampede, IPS Officer Vikas Kumar Suspension:...
01-07-25 04:19 pm
Sri Rama Sene, Belagavi, SP: ಶ್ರೀರಾಮಸೇನೆ ಸೇನೆ...
30-06-25 10:30 pm
CM Siddaramaiah, Dk Shivakumar, CM Post: ಹೇಯ್...
30-06-25 02:55 pm
01-07-25 08:57 pm
HK News Desk
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 04:36 pm
Mangalore Correspondent
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm