ಬ್ರೇಕಿಂಗ್ ನ್ಯೂಸ್
03-03-22 10:31 am HK Desk news ಕರ್ನಾಟಕ
ವಿಜಯಪುರ, ಮಾ.3: ಉಕ್ರೇನಲ್ಲಿ ಹಾವೇರಿ ಜಿಲ್ಲೆಯ ನವೀನ್ ಎಂಬ ಯುವಕ ಮೃತಪಟ್ಟ ಬಳಿಕ ಅಲ್ಲಿ ಸಿಕ್ಕಿಬಿದ್ದಿರುವ ವಿದ್ಯಾರ್ಥಿಗಳ ಹೆತ್ತವರು, ಸಂಬಂಧಿಕರ ಆಕ್ರೋಶ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ತಿರುಗಿದೆ. ವಿಜಯಪುರ ಜಿಲ್ಲೆಯ ವಿವಿಧಾ ಎಂಬ ಮೆಡಿಕಲ್ ವಿದ್ಯಾರ್ಥಿನಿಯ ತಂದೆ ಮಲ್ಲಿಕಾರ್ಜುನಮಠ ಮನೆಯಲ್ಲಿ ಆತಂಕದ ನಡುವೆಯೇ ರಾಜ್ಯದ ಸಂಸದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಭಾರತ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನವೀನ್ ಸಾವು ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರ, ಕೇಂದ್ರ ಸಚಿವರು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರ ಭಾರತೀಯರನ್ನ ರಕ್ಷಣೆ ಮಾಡೋ ಗಂಧ ಗಾಳಿ ಗೊತ್ತಿಲ್ಲದಂತೆ ಮಾಡುತ್ತಿದೆ. ಒಂದು ವಾರ ಆದ್ರೂ ಈಗ ಎಚ್ಚೆತ್ತ ರೀತಿ ಮಾಡುತ್ತಿದ್ದಾರೆ. ಎಲ್ಲ ಮೋದಿ ಅವರ ಹೆಸರು ಹೇಳುತ್ತಾರೆ. ಮೋದಿ ಒಬ್ಬರೇ ಏನು ಮಾಡಲು ಸಾಧ್ಯ, ಕೇಂದ್ರದಲ್ಲಿ ಮೋದಿ ಅವರನ್ನು ಬಿಟ್ಟು ಎಲ್ಲರೂ ಅಸಮರ್ಥರು.
ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೈಲಿ ಏನೂ ಮಾಡಲಾಗುತ್ತಿಲ್ಲ. ರಾಜ್ಯದ 28 ಸಂಸದರು ಇದ್ದೂ ಇಲ್ಲದಂತಿದ್ದಾರೆ. ವಿಜಯಪುರ ಸಂಸದ ರಮೇಶ ಜಿಗಜಿಣಗಿ ಒಬ್ಬ ದರಿದ್ರ. ಇವರೆಲ್ಲಾ ನನ್ನ ಮಗಳ ಹಾಗೂ ಎಲ್ಲ ವಿದ್ಯಾರ್ಥಿಗಳ ಜೀವ ತೆಗೆಯಲು ನಿಂತಿದ್ದಾರೆ. ನನ್ನ ಮಗಳಿಗೆ ಏನಾದರೂ ಆದರೆ ವಿಜಯಪುರ ಸಂಸದ ಹಾಗೂ ದೇಶದ ಸಂಸದರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯದ ಜನರು ನನಗೆ ಇಲ್ಲಿ ಸ್ವಲ್ಪ ಧೈರ್ಯ ತುಂಬಿದ್ದಾರೆ. ಮೋದಿ ಅವರು ರಷ್ಯಾ ಜೊತೆಗೆ ಮಾತನಾಡಿದರೆ ಕೆಲವೇ ನಿಮಿಷಗಳಲ್ಲಿ ನಮ್ಮ ಮಕ್ಕಳು ಸುರಕ್ಷಿತವಾಗಿ ರಷ್ಯಾ ಬಾರ್ಡರ್ ಸೇರುತ್ತಾರೆ. ಆದರೆ ಈ ಕೆಲಸ ಆಗುತ್ತಿಲ್ಲ. ಸದ್ಯ ಮಗಳ ಜೊತೆಗೆ ಸಂಪರ್ಕದಲ್ಲಿದ್ದೇನೆ, ವಿಡಿಯೋ ಕಾಲ್ ನಲ್ಲಿ ಅಲ್ಲಿನ ಭಯಾನಕತೆಯನ್ನು ಕಣ್ಣಾರೆ ನೋಡಿದ್ದೇನೆ. ಬಾಂಬ್ ದಾಳಿ, ರಾಕೆಟ್ ದಾಳಿ ನೋಡಿದ್ದೇನೆ. ಎಲ್ಲರನ್ನೂ ತುರ್ತಾಗಿ ಸುರಕ್ಷಿತವಾಗಿ ಕರೆ ಕರೆತರಬೇಕಿದೆ. ನನ್ನ ಮಗಳು ವಿವಿಧಾ ಸಹಿತ 12 ವಿದ್ಯಾರ್ಥಿಗಳು ಅಲ್ಲಿದ್ದಾರೆ. ರೈಲಿನ ಮೂಲಕ ಪೊಲೇಂಡ್ ನತ್ತ ಹೊರಟಿದ್ದಾರೆ ಎನ್ನುವ ಮಾಹಿತಿಯಿದೆ.
ಉಕ್ರೇನಿನ ಖಾರ್ಕಿವ್ ನಲ್ಲಿ ಸಿಲುಕಿದ್ದ ವಿವಿಧಾ ಮಲ್ಲಿಕಾರ್ಜುನಮಠ, ಅಲ್ಲಿಂದ ರೈಲು ಮೂಲಕ ಪ್ರಯಾಣ ಬೆಳೆಸಿದ್ದಾರೆ. ಗಡಿ ಭಾಗದ ಉಜಗೊಂಡ, ಲಿವಿವ್ ಮೂಲಕ ಪೋಲೆಂಡ್ ದೇಶ ತಲುಪಲಿದ್ದಾರೆ. ನಂತರ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಮಲ್ಲಿಕಾರ್ಜುನ ಮಠ ಹೇಳಿದ್ದಾರೆ.
Vijayapura Ramesh Jigajinagi is a cursed man he's of no help slam parents of Ukraine students. There are 28 MPs but that's of no has he added.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm