ಬ್ರೇಕಿಂಗ್ ನ್ಯೂಸ್
01-03-22 08:34 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.1: ಹಿಜಾಬ್ ಕುರಿತು ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ಜಡ್ಜ್ ವಿರುದ್ಧ ಕೀಳಾಗಿ ಚಿತ್ರಿಸಿ ಬರೆದಿದ್ದ ಮಂಗಳೂರು ಮುಸ್ಲಿಮ್ಸ್ ಫೇಸ್ಬುಕ್ ಪೇಜ್ ವಿರುದ್ಧ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು ಕೇಸು ದಾಖಲಿಸಿದ್ದಾರೆ.
ಮಂಗಳೂರು ಮುಸ್ಲಿಮ್ಸ್ ಪೇಜ್ ಅಡ್ಮಿನ್ ಆಗಿರುವ ಅತೀಕ್ ಶರೀಫ್ ಎಂಬಾತನ ವಿರುದ್ಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಠಾಣೆಯಲ್ಲಿ ಸುಮೊಟೋ ಕೇಸು ದಾಖಲಾಗಿದೆ. ಫೆ.12ರಂದು ಈ ಬಗ್ಗೆ ಪೋಸ್ಟ್ ಮಾಡಿದ್ದು ಜಡ್ಜ್ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡಲಾಗಿತ್ತು. ಈ ರೀತಿಯ ಜಡ್ಜ್ ನಿಂದ ಹಿಜಾಬ್ ಕುರಿತ ಅರ್ಜಿಗೆ ನ್ಯಾಯ ದೊರಕಲು ಸಾಧ್ಯವೇ ಎಂದು ಜಡ್ಜ್ ಕೃಷ್ಣ ಎಸ್. ದೀಕ್ಷಿತ್ ಭಾಗವಹಿಸಿದ್ದ ಕಾರ್ಯಕ್ರಮದ ಫೋಟೋವನ್ನು ಮುಂದಿಟ್ಟು ಪ್ರಶ್ನೆ ಮಾಡಲಾಗಿತ್ತು.
ಈ ಫೇಸ್ಬುಕ್ ಪೋಸ್ಟ್ ಬಗ್ಗೆ ಲೈಕ್, ಕಮೆಂಟ್ಸ್ ಮಾಡಿದ್ದವರ ವಿರುದ್ಧವೂ ಪೊಲೀಸರು ಕ್ರಮ ಜರುಗಿಸಲಿದ್ದಾರೆ. ಹಿಜಾಬ್ ಪ್ರಕರಣದಲ್ಲಿ ವಿಚಾರಣೆ ಮತ್ತು ತೀರ್ಪು ನೀಡಲು ಹೈಕೋರ್ಟ್ ಮುಖ್ಯ ನ್ಯಾಯಾಧೀಶ ರಿತುರಾಜ್ ಅವಸ್ಥಿ, ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆಎಂ ಖಾಝಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ರಚಿಸಲಾಗಿತ್ತು.
ಇತ್ತೀಚೆಗೆ ನಟ ಅಹಿಂಸಾ ಚೇತನ್ ಕೂಡ ಹಿಜಾಬ್ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ಬಗ್ಗೆ ಪ್ರಶ್ನೆ ಮಾಡಿ, ಜೈಲು ಸೇರಿದ್ದರು. ಚೇತನ್ ತಾನು ಫೇಸ್ಬುಕ್ ನಲ್ಲಿ ಬರೆದಿದ್ದ ಎರಡು ವರ್ಷಗಳ ಹಿಂದಿನ ಪೋಸ್ಟ್ ಒಂದನ್ನು ಟ್ವಿಟರ್ ನಲ್ಲಿ ಷೇರ್ ಮಾಡಿದ್ದರು. ಈ ಜಡ್ಜ್ ರೇಪ್ ಪ್ರಕರಣದಲ್ಲಿ ಸಮಾಜಬಾಹಿರ ಪ್ರತಿಕ್ರಿಯೆ ಒಂದನ್ನು ನೀಡಿದ್ದರು. ಇಂಥ ನ್ಯಾಯಾಧೀಶರು ಹಿಜಾಬ್ ಕುರಿತು ತೀರ್ಪು ನಿರೀಕ್ಷಿಸಲು ಸಾಧ್ಯವೇ. ಇವರ ತೀರ್ಪು ಸರ್ವಸಮ್ಮತ ಇರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಲ್ಲದೆ, ನಟನನ್ನು ಬಂಧಿಸಿದ್ದರು.
ಮಂಗಳೂರು ಮುಸ್ಲಿಮ್ಸ್ ಫೇಸ್ಬುಕ್ ಪೇಜ್ ವಿರುದ್ಧ ಕಳೆದ ಫೆ.23ರಂದು ಮಂಗಳೂರಿನ ಪೊಲೀಸರು ಕೂಡ ಕೇಸು ದಾಖಲಿಸಿದ್ದರು. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನನ್ನು ಬೀದಿ ನಾಯಿ ಎಂದು ಕರೆದಿದ್ದಲ್ಲದೆ, 2015ರಲ್ಲಿ ಪ್ರವಾದಿ ಪೈಗಂಬರ್ ಅವರನ್ನು ಅವಹೇಳಕಾರಿ ಬರೆದಿದ್ದಕ್ಕೆ ಈ ಶಿಕ್ಷೆ ಸಿಕ್ಕಿದೆ ಎಂದು ಅರ್ಥ ಬರುವಂತೆ ಪೋಸ್ಟ್ ಮಾಡಲಾಗಿತ್ತು.
On Tuesday, the Cyber Crime Division of the Bengaluru South division registered a case against Ateeq Shariff, the administrator of a Facebook page ‘Mangalore Muslims’ for posting derogatory messages against one of the three judges of the Karnataka High Court hearing the hijab case. The case has been registered against Shariff and another associate for posting derogatory content on February 12 against one of the judges questioning his credentials and integrity. The case was registered by the Cyber Crime Division on its own.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am