ಬ್ರೇಕಿಂಗ್ ನ್ಯೂಸ್
23-02-22 01:07 pm HK Desk news ಕರ್ನಾಟಕ
ಮೈಸೂರು, ಫೆ.23 : ಶಿವಮೊಗ್ಗ ಗಲಬೆಗೂ- ಹಿಜಾಬ್ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಹರ್ಷ ಸಾವಿಗೆ ಸರ್ಕಾರದ ವೈಫಲ್ಯವೇ ಕಾರಣ. ಹರ್ಷ ಹತ್ಯೆಗೂ ಮುನ್ನ ಅಪಾಯವಿದೆ ಎಂದು ಪೊಲೀಸರಿಗೂ ಮಾಹಿತಿ ಇತ್ತು, ಅವರ ಮನೆಯವರಿಗೂ ಗೊತ್ತಿತ್ತು. ಒಬ್ಬ ಕಾರ್ಯಕರ್ತನಿಗೆ ರಕ್ಷಣೆ ಕೊಡಲು ಆಗದ ನೀವು ರಾಜ್ಯದ ಜನರಿಗೆ ರಕ್ಷಣೆ ಕೊಡುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಸರ್ಕಾರದ ವೈಫಲ್ಯದ ಬಗ್ಗೆ ನಿಮ್ಮವರೇ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಸಂಸದ ಪ್ರತಾಪಸಿಂಹ ಆದಿಯಾಗಿ ಸರ್ಕಾರವನ್ನ ಸಮರ್ಥಿಸಿಕೊಳ್ಳುವವರು ಖಂಡಿಸುತ್ತಿದ್ದಾರೆ. ಬಡವರು, ದಲಿತರು, ಹಿಂದುಳಿದವರ ಬಲಿ ಕೊಟ್ಟು ನೀವು ರಾಜಕೀಯ ಮಾಡುತ್ತಿದ್ದೀರಿ. ಬಿಜೆಪಿಯ ಮಂತ್ರಿ, ಶಾಸಕರ ಮಕ್ಕಳು ಯಾರಾದರೂ ಕೋಮುಗಲಭೆಯಲ್ಲಿ ಕೊಲೆ ಆಗಿದ್ದಾರಾ..? ಸಾಮಾನ್ಯ ಜನರನ್ನು ಬಲಿಕೊಟ್ಟು ರಾಜಕೀಯ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಗ್ಗೆ ಹರಿಹಾಯ್ದ ಎಚ್ಡಿಕೆ
ಮಂಡ್ಯಕ್ಕೆ ಬಂದು ಜೆಡಿಎಸ್ ನವರು ಮಾತ್ರ ಮಣ್ಣಿನ ಮಕ್ಕಳಾ ಎಂದು ಕೇಳಿದ್ದೀರಿ. ನೀವೇ ಮಣ್ಣಿನ ಮಕ್ಕಳು ಎಂದು ಬೋರ್ಡ್ ಹಾಕೊಂಡು ಓಡಾಡಿ. ಬೇಡ ಎಂದು ತಡೆಯುವವರು ಯಾರಿದ್ದಾರೆ. ಆದರೆ ಕನಕಪುರ ಭಾಗದಲ್ಲಿ ನಿಮ್ಮನ್ನ ಮಣ್ಣಿನ ಮಕ್ಕಳು ಎಂದು ಕರೆಯೋದಿಲ್ಲ. ಕಲ್ಲಿನ ಮಕ್ಕಳು ಎಂದಷ್ಟೇ ಕರೆಯುತ್ತಾರೆ ಎಂದು ವ್ಯಂಗ್ಯವಾಡಿರುವ ಹೆಚ್ಡಿಕೆ, ಕಾಂಗ್ರೆಸ್ ನಾಯಕರು ಸದನದಲ್ಲಿ ನಡೆಸಿದ ಹೋರಾಟಕ್ಕೆ ಬಸ್ ವಾಗ್ದಾಳಿ ನಡೆಸಿದ್ದಾರೆ. ಏನಾದ್ರೂ ದಾಖಲೇ ಇಟ್ಟು ಸಚಿವರ ರಾಜೀನಾಮೆ ಕೇಳಬೇಕಲ್ವೆ? ಪಕ್ಷ ಕಟ್ಟಿ ಬೆವರು ಸುರಿಸಿ ಬಂದ ಪ್ರತಿಪಕ್ಷ ನಾಯಕರ ವರ್ತನೆ ನೋಡುತ್ತಿದ್ದೇನೆ. ವಿಧಾನಮಂಡಲ ಇತಿಹಾಸದಲ್ಲೇ ಇದು ಕಪ್ಪು ಚುಕ್ಕೆ ಅಂತ ಸಿಎಂ ಹೇಳುತ್ತಿದ್ದಾರೆ. ಸಮವಸ್ತ್ರ ವಿವಾದ ಚರ್ಚೆ ಮಾಡುವ ಅವಕಾಶವನ್ನು ನಿರ್ನಾಮ ಮಾಡಿದ್ರು. ಜೆಡಿಎಸ್ ಚರ್ಚೆಯಲ್ಲಿ ಪಾಲ್ಗೊಳ್ಳಬಾರದೆಂದು ಬಿಜೆಪಿ, ಕಾಂಗ್ರೆಸ್ ಸೇರಿ ಹುನ್ನಾರ ನಡೆಸಿರಬಹುದು. ನಾನು ಹೊಡೆದಂಗೆ ಮಾಡ್ತೀನಿ, ನೀವು ಅಳುವಂಗೆ ಮಾಡಿ ಅನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಸದನದಲ್ಲಿ ಹೋರಾಟ ಮಾಡಲು ಸಾಕಷ್ಟು ಅವಕಾಶ ಇತ್ತು. ಯಾವ ಪುರುಷಾರ್ಥಕ್ಕಾಗಿ ನೀವು ರಾಜ್ಯಪಾಲರ ಭೇಟಿ. ನಮ್ಮನ್ನಾದರೂ ಕೇಳಿದ್ರೆ ಹೇಳ್ತಿದ್ವಿ. ನಾನು ಸಾಕಷ್ಟು ದಾಖಲೆ ಸಮೇತ ಚರ್ಚೆಗೆ ಹೋಗಿದ್ದೆ. ಆದರೆ ಚರ್ಚೆಗೆ ಅವಕಾಶ ಸಿಗಬಾರದೆಂದು ಸದನದಲ್ಲಿ ಗೊಂದಲ ಮಾಡಿದರು. ನಿಮಗೆ ಮಾತನಾಡೋಕೆ ಅವಕಾಶ ಸಿಗಲ್ಲ ಅಂತ ರಾಜಾರೋಷವಾಗಿ ಕೆಪಿಸಿಸಿ ಅಧ್ಯಕ್ಷರು ಹೇಳುತ್ತಿದ್ದರು. ಹಾಗಾದರೆ ಇದರರ್ಥ ಏನು ಎಂದು ಕುಮಾರಸ್ವಾಮಿ ಕೇಳಿದರು.

ಒಕ್ಕಲಿಗ ಮತಗಳ ಬುಟ್ಟಿಗೆ ಕೈಹಾಕಿದ್ರೆ ಡಿಕೆಶಿ ಕುತ್ತಿಗೆ ಬರುತ್ತೆ !
ದೇವೇಗೌಡರು ಬದುಕಿರೋವರೆಗೂ ಈ ಸಮಾಜ ಅವರನ್ನು ಕೈಬಿಡಲ್ಲ. ಡಿಕೆಶಿ ಒಕ್ಕಲಿಗ ಶಾಸಕರನ್ನಾದರೂ ಸೆಳೆಯಲಿ. ಯಾರನ್ನಾದರೂ ಸೆಳೆಯಲಿ, ನಾವು ತಲೆಕೆಡಿಸಿಕೊಳ್ಳಲ್ಲ. ದೇವೇಗೌಡರು ಇರೋವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ. ಒಕ್ಕಲಿಗ ಶಾಸಕರಿಗೆ ಗಾಳ ಹಾಕಿರೋದು ಅವರ ಕುತ್ತಿಗೆಯನ್ನೇ ಹಿಡಿಯಲಿದೆ. ಈ ಸಂಬಂಧ ನಾನು ಯಾವುದೇ ರಿವರ್ಸ್ ಆಪರೇಷನ್ ಮಾಡಲ್ಲ. ನನ್ನ ಸಂಪರ್ಕದಲ್ಲಿ ಯಾವ ಕಾಂಗ್ರೆಸ್ ಶಾಸಕರು, ಮುಖಂಡರೂ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೆಳವಣಿಗೆ ನೋಡಿ ಆ ಪಕ್ಷದವರೇ ಬರ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
Harsha murder in Shivamogga is shows utter failure of Bjp government in Karnataka slams HD Kumaraswamy.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm