ಬ್ರೇಕಿಂಗ್ ನ್ಯೂಸ್
19-02-22 02:03 pm HK Desk news ಕರ್ನಾಟಕ
ತುಮಕೂರು, ಫೆ.19 : ಹಿಜಾಬ್ ಗಲಾಟೆಯ ಪರಿಣಾಮ ವಿದ್ಯಾರ್ಥಿಗಳ ಮೇಲೆ ಮಾತ್ರ ಬೀರಿದ್ದಲ್ಲ. ಕೆಲವು ಕಡೆ ಕಾಲೇಜು ಶಿಕ್ಷಕರ ಮೇಲೂ ಗಂಭೀರ ಪರಿಣಾಮ ಬೀರಿದೆ. ತುಮಕೂರಿನಲ್ಲಿ ಹಿಜಾಬ್ ಹಾಕಲು ನಿರ್ಬಂಧ ಹಾಕಿದ ನೆಪದಲ್ಲಿ ಇಂಗ್ಲಿಷ್ ಉಪನ್ಯಾಸಕಿಯೊಬ್ಬರು ಕೆಲಸವನ್ನೇ ತ್ಯಜಿಸಿದ್ದಾರೆ.
ಜೈನ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಚಾಂದಿನಿ ಹಿಜಾಬ್ ಕಾರಣಕ್ಕೆ ಉದ್ಯೋಗವನ್ನೇ ತ್ಯಜಿಸಿದ ಯುವತಿ. ಇದು ನನ್ನ ವೈಯಕ್ತಿಕ ಗೌರವದ ವಿಚಾರ. ಹಿಜಾಬ್ ಇಲ್ಲದೆ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಚಾಂದಿನಿ ಹೇಳಿದ್ದಾರೆ.
ಜೈನ್ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ಮಾಡುತ್ತಿದ್ದೇನೆ. ಈ ಸಮಯದಲ್ಲಿ ನನಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಈಗ ಪ್ರಾಂಶುಪಾಲರು ಕರೆದು ಹಿಜಾಬ್ ತೆಗೆದು ತರಗತಿಯಲ್ಲಿ ಪಾಠ ಮಾಡುವಂತೆ ಸೂಚಿಸಿದ್ದಾರೆ. ಈವರೆಗೂ ಹಿಜಾಬ್ ಧರಿಸಿಯೇ ಪಾಠ ಮಾಡಿದ್ದೇನೆ. ಈಗ ಹಿಜಾಬ್ ತೆಗೆಯಲು ಹೇಳಿದ್ದು ನನಗೆ ಹರ್ಟ್ ಆಗಿದೆ. ಗೌರವಕ್ಕೆ ಧಕ್ಕೆಯಾಗಿದೆ. ನನಗೆ ಮುಂದೆ ಈ ಕಾಲೇಜಿನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಾಜಿನಾಮೆ ನೀಡಿದ್ದೇನೆ ಎಂದು ಚಾಂದಿನಿ ಹೇಳಿದ್ದಾರೆ.
ಧರ್ಮದ ಪ್ರಕಾರ ನಡೆದುಕೊಳ್ಳುವುದು ಸಂವಿಧಾನ ಕೊಟ್ಟಿರುವ ಹಕ್ಕು. ಇದನ್ನು ಯಾರು ಕೂಡ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ನಾನು ಖಂಡಿಸುತ್ತೇನೆ ಎಂದವರು ತಮ್ಮ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಲೇಜಿನ ಆಡಳಿತ ನಿರಾಕರಿಸಿದೆ.
ಹೈಕೋರ್ಟಿನಲ್ಲಿ ಹಿಜಾಬ್ ಕುರಿತು ವಿಚಾರಣೆ ನಡೆಯುತ್ತಿರುವುದರಿಂದ ಮಧ್ಯಂತರ ಆದೇಶದಲ್ಲಿ ಯಾರು ಕೂಡ ಧಾರ್ಮಿಕ ವಸ್ತ್ರ, ಗುರುತುಗಳನ್ನು ಧರಿಸಿ ಬರುವಂತಿಲ್ಲ ಎಂದು ತಿಳಿಸಿತ್ತು. ಈ ಬಗ್ಗೆ ರಾಜ್ಯದೆಲ್ಲೆಡೆ ಮುಸ್ಲಿಮರಿಂದ ವಿರೋಧ ಕೇಳಿಬಂದಿದ್ದು ಇದರ ಪರಿಣಾಮ ಈಗ ಕಾಲೇಜು ಉಪನ್ಯಾಸಕರಿಗೂ ತಟ್ಟಿದೆ.
An English lecturer working as a guest faculty has resigned from her post as she was asked to shun the hijab while teaching in Tumakuru district of Karnataka on Friday. “It is a matter of my self-respect. I can’t teach without the hijab,” the lecturer Chandini said after quitting.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am