ಬ್ರೇಕಿಂಗ್ ನ್ಯೂಸ್
15-02-22 05:19 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.15 : ಹಿಜಾಬ್ ಪರ-ವಿರೋಧ ಕಿಚ್ಚು ಹತ್ತಿಸಿಕೊಂಡ ಬಳಿಕ ವಿವಾದ ಹೈಕೋರ್ಟ್ ಅಂಗಳಕ್ಕೆ ತಲುಪಿದ್ದು, ಬಿಸಿಯೇರಿದ ವಾಗ್ವಾದಕ್ಕೆ ಸಾಕ್ಷಿಯಾಗಿದೆ. ಕಳೆದೊಂದು ವಾರದಿಂದ ಹಿಜಾಬ್ ವಿಚಾರದಿಂದಾಗಿಯೇ ಕರ್ನಾಟಕದ ಹೈಕೋರ್ಟ್ ದೇಶದ ಗಮನ ಸೆಳೆದಿದೆ. ನಾಲ್ಕು ಅರ್ಜಿಗಳ ವಿಚಾರದಲ್ಲಿ ಹಿರಿಯ ವಕೀಲರು ಹಿಜಾಬ್ ಪರವಾಗಿ ಪ್ರಬಲ ವಾದ ಮಂಡಿಸುತ್ತಿದ್ದಾರೆ. ಈ ನಡುವೆ, ವಿಚಾರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದ್ದರಿಂದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ತ್ರಿಸದಸ್ಯ ಪೀಠವನ್ನೂ ರಚಿಸಿದ್ದಾರೆ. ಅಲ್ಲದೆ, ದಿನವೂ ವಿಚಾರಣೆ ನಡೆಸಿ, ಶೀಘ್ರದಲ್ಲಿ ತೀರ್ಪು ನೀಡುವುದಾಗಿ ಘೋಷಿಸಿದ್ದಾರೆ.
ಒಂದೆಡೆ ಹೈಕೋರ್ಟಿನಲ್ಲಿ ಗಂಭೀರ ಚರ್ಚೆಗಳಾಗುತ್ತಿದ್ದರೆ, ಈ ನಡುವೆ ಅರ್ಜಿದಾರರ ಪರ ಇರುವ ವಕೀಲರೊಬ್ಬರು ಹಿಜಾಬ್ ವಿಚಾರಣೆಯನ್ನು ಫೆ.28ಕ್ಕೆ ಮುಂದೂಡುವಂತೆ ಹೈಕೋರ್ಟ್ ಪೀಠಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ ಚುನಾವಣೆ ಮುಗಿಯೋ ವರೆಗೆ ವಿಚಾರಣೆ ನಡೆಸಬಾರದು. ಹೈಕೋರ್ಟಿನಲ್ಲಿ ವಿಚಾರಣೆ ನಡೆಸುವುದು, ಈ ಬಗ್ಗೆ ಚರ್ಚೆ ನಡೆಸುವುದರಿಂದ ಕೆಲವು ಪಕ್ಷಗಳು ರಾಜಕೀಯ ಲಾಭ ಮಾಡಿಕೊಳ್ಳಲು ಆಸ್ಪದ ಆಗುತ್ತದೆ ಎಂದು ವಕೀಲ ಮೊಹಮ್ಮದ್ ತಾಹಿರ್ ಎಂಬವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಉಡುಪಿಯ ನಾಲ್ವರು ವಿದ್ಯಾರ್ಥಿನಿಯರ ಪರವಾಗಿ ಈ ಅರ್ಜಿ ಸಲ್ಲಿಕೆಯಾಗಿದ್ದು, ತುರ್ತಾಗಿ ಬಗೆಹರಿಸಬೇಕೆಂದು ವಾರದ ಹಿಂದೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದವರೇ ಈಗ ಉಲ್ಟಾ ಹೊಡೆದು ಚುನಾವಣೆಗೆ ಥಳುಕು ಹಾಕಿದ್ದು ಗೊಂದಲಕ್ಕೆ ಕಾರಣವಾಗಿದೆ. ಪಂಚ ರಾಜ್ಯಗಳ ಚುನಾವಣೆಗೂ ಹಿಜಾಬ್ ವಿಚಾರಣೆ ನಡೆಸುವುದಕ್ಕೂ ಏನು ಸಂಬಂಧ ಅನ್ನುವ ಪ್ರಶ್ನೆ ಎದ್ದಿದೆ. ಹಿರಿಯ ವಕೀಲರಾದ ದೇವದತ್ತ ಕಾಮತ್, ಸಂಜಯ್ ಹೆಗ್ಡೆ ಹಿಜಾಬ್ ಪರವಾಗಿ ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ನೀಡಿರುವ ತೀರ್ಪನ್ನು ಆಧರಿಸಿ ವಾದ ಮಂಡಿಸುತ್ತಿದ್ದಾರೆ. ಇದರ ಮಧ್ಯದಲ್ಲಿ ಅರ್ಜಿ ವಿಚಾರಣೆಯನ್ನೇ ಮುಂದೂಡಬೇಕೆಂದು ಅರ್ಜಿ ಸಲ್ಲಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಇದೇ ವಾರದಲ್ಲಿ ತೀರ್ಪು ನೀಡಿದರೆ, ಅದರಿಂದ ಕೋಮು ಧ್ರುವೀಕರಣ ಆಗುತ್ತದೆ ಎಂಬ ಕಾರಣಕ್ಕೋ, ಹಿಂದುಗಳ ಅಥವಾ ಮುಸ್ಲಿಮರ ಮತಗಳು ಒಂದು ಕಡೆಗೆ ವಾಲಬಹುದು ಅನ್ನುವ ಕಾರಣಕ್ಕೋ ಏನೋ ವಿವಿಧ ಶಂಕೆ, ಊಹೆಗಳನ್ನು ಮುಂದೊಡ್ಡಿ ಸದ್ಯಕ್ಕೆ ವಿಚಾರಣೆ ಬೇಡ. ಚುನಾವಣೆ ಮುಗಿದ ಬಳಿಕ ವಿಚಾರಣೆ ನಡೆಸಿದರೆ ಸಾಕು ಎಂದು ಹೊಸತಾಗಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಹಿಜಾಬ್ ಧರಿಸುವುದಕ್ಕಾಗಿ ಶಿಕ್ಷಣದಿಂದಲೇ ದೂರ ಸರಿದಿರುವ ವಿದ್ಯಾರ್ಥಿಗಳ ಮಧ್ಯದಲ್ಲಿ ಸದ್ಯಕ್ಕೆ ವಿಚಾರಣೆಯೇ ಬೇಡ ಎಂದು ಅರ್ಜಿ ಸಲ್ಲಿಸಿರುವುದು ಯಾಕೆ ಅನ್ನುವುದು ತೀವ್ರ ಕುತೂಹಲ ಸೃಷ್ಟಿಸಿದೆ. ಇದರಿಂದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹೊಡೆತ ಬೀಳುತ್ತೆ ಅನ್ನುವ ಕಾಳಜಿಯೂ ಇವರಿಗೆ ಇಲ್ಲವಾಯಿತೇ ಎನ್ನುವ ಪ್ರಶ್ನೆಯೂ ಎದ್ದಿದೆ.
Hijab Row the application also warns that "any mischievous act of any person will further stoke communal division". Pointing out that political parties are raking up the hijab controversy for electoral goals in the ongoing Assembly polls, the counsel representing the petitioners in the case has urged the Karnataka High Court to adjourn the hearing till February 28.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 02:22 pm
Bangalore Correspondent
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm