ಬ್ರೇಕಿಂಗ್ ನ್ಯೂಸ್
27-01-22 03:36 pm HK Desk news ಕರ್ನಾಟಕ
ಬೆಂಗಳೂರು, ಜ.27 : ರಸ್ತೆ ಅಪಘಾತದಲ್ಲಿ ಜನನಾಂಗಕ್ಕೆ ಪೆಟ್ಟು ಬಿದ್ದು ದಾಂಪತ್ಯ ಜೀವನದಿಂದ ವಂಚಿತನಾಗಿರುವ ವ್ಯಕ್ತಿಯೊಬ್ಬನಿಗೆ ಕರ್ನಾಟಕ ಹೈಕೋರ್ಟ್ 17.66 ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ 11 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಬಸವರಾಜು ಎಂಬಾತ ಗಾಯಗೊಂಡಿದ್ದು ಜನನಾಂಗದ ಶಕ್ತಿ ಕಳಕೊಂಡು ದಾಂಪತ್ಯ ಜೀವನದಿಂದ ವಂಚಿತನಾಗಿದ್ದ. ಈ ಬಗ್ಗೆ ಬಸವರಾಜು ತನಗಾದ ಅನ್ಯಾಯಕ್ಕೆ ಯಾರು ಹೊಣೆ, ರಾಜ್ಯ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಹೇಳಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠ ಪರಿಹಾರ ನೀಡುವಂತೆ ಈಗ ತೀರ್ಪು ನೀಡಿದೆ.
ಬಸವರಾಜು ಪ್ರಕರಣದಲ್ಲಿ ರಸ್ತೆ ಅಪಘಾತ ಪರಿಹಾರ ಪ್ರಾಧಿಕಾರ 50 ಸಾವಿರ ರೂ. ಪರಿಹಾರ ನೀಡಲು ನಿಗದಿಪಡಿಸಿತ್ತು. ಅಲ್ಲದೆ, ಇನ್ ಶೂರೆನ್ಸ್ ಕಂಪನಿಯವರಿಗೆ 3.73 ಲಕ್ಷ ಪರಿಹಾರದ ಹಣ ನೀಡುವಂತೆ ಪ್ರಾಧಿಕಾರದಿಂದ ಆದೇಶ ಮಾಡಲಾಗಿತ್ತು. ಆದರೆ, ಈ ಪರಿಹಾರದ ಮೊತ್ತವನ್ನು ನಿರಾಕರಿಸಿದ ಬಸವರಾಜು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದ.
ಅರ್ಜಿ ಪರಿಗಣಿಸಿದ ಹೈಕೋರ್ಟ್ ಪೀಠ, ರಸ್ತೆ ಅಪಘಾತ ಪರಿಹಾರ ಪ್ರಾಧಿಕಾರದಿಂದ ಹತ್ತು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಮಾಡಿದೆ. ಅಲ್ಲದೆ, ಇನ್ ಶೂರೆನ್ಸ್ ಹಣವನ್ನು 7.68 ಲಕ್ಷಕ್ಕೆ ಏರಿಸಿದ್ದು, ಒಟ್ಟು 17.68 ಲಕ್ಷ ರೂ. ಪರಿಹಾರದ ರೂಪದಲ್ಲಿ ನೀಡಲು ಆದೇಶ ಮಾಡಿದೆ. ಅರ್ಜಿದಾರ ಬಸವರಾಜು ತನಗೆ 11.75 ಲಕ್ಷ ರೂ. ಪರಿಹಾರ ನೀಡಬೇಕೆಂದು ವಾದಿಸಿದ್ದ. ಆದರೆ, ನ್ಯಾಯಾಧೀಶರು ಮಾನವೀಯ ನೆಲೆಯಲ್ಲಿ ಆತನಿಗೆ ಕೇಳಿದ್ದಕ್ಕಿಂತಲೂ ಹೆಚ್ಚು ಮೊತ್ತವನ್ನು ಪರಿಹಾರದ ರೂಪದಲ್ಲಿ ನೀಡಲು ಆದೇಶ ಮಾಡಿದ್ದಾರೆ.
ಬಸವರಾಜು 2011ರಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದಿದ್ದ ಲಾರಿ ಡಿಕ್ಕಿಯಾಗಿತ್ತು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಜನನಾಂಗದ ಶಕ್ತಿಯನ್ನು ಕಳಕೊಂಡಿದ್ದ. ಅರ್ಜಿದಾರನ ವಾದ ಆಲಿಸಿದ ಪೀಠ, ಹಣದ ಮೂಲಕ ಆತನಿಗಾದ ನಷ್ಟ ಭರಿಸಲು ಸಾಧ್ಯವಾಗದು. ಅಪಘಾತದ ಕಾರಣ ದಾಂಪತ್ಯ ಜೀವನವನ್ನೇ ಕಳಕೊಂಡಿದ್ದಾನೆ. ಒಂದೋ ಏಕಾಂಗಿಯಾಗಿಯೇ ಜೀವನ ನಡೆಸಬೇಕು. ಮದುವೆಯಾದರೂ, ಮಕ್ಕಳನ್ನು ಪಡೆಯುವ ಶಕ್ತಿ ಹೊಂದಿರುವುದಿಲ್ಲ. ಹೀಗಾಗಿ ಆತನ ನಷ್ಟ ಭರಿಸುವಂತಾಗಲು ಕನಿಷ್ಠ ಉತ್ತಮ ಮೊತ್ತದ ಪರಿಹಾರ ನೀಡಬೇಕು ಎಂದು ಆದೇಶ ಮಾಡಿದೆ.
Bengaluru, The Karnataka High Court has ordered granting of Rs 17.66 lakh compensation to a man who lost his genitals in a road accident that rendered him permanently incapable of leading a normal married life. Petitioner Basavaraju had met with an accident 11 years ago in Ranibennur town of Haveri district and suffered permanent damage to his genitals. Considering his plea for compensation, a division bench of the Karnataka High Court passed the judgement.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am