ಬ್ರೇಕಿಂಗ್ ನ್ಯೂಸ್
15-09-20 02:43 pm Bangalore Correspondent ಕರ್ನಾಟಕ
ಬೆಂಗಳೂರು, ಸೆಪ್ಟೆಂಬರ್ 15: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಮತ್ತಷ್ಟು ನಿಗೂಢವಾಗುವತ್ತ ಸಾಗಿದೆ. ಸಿನಿತಾರೆ ರಾಗಿಣಿಯನ್ನು ಜೈಲು ಪಾಲು ಮಾಡಿರುವ ಸಿಸಿಬಿ ಪೊಲೀಸರು ಈಗ ಸ್ಟಾರ್ ದಂಪತಿಯತ್ತ ಕಣ್ಣು ಹಾಕಿದ್ದಾರೆ. ಗುಳಿಕೆನ್ನೆ ದಿಗಂತ್ ಮತ್ತು ಐಂದ್ರಿತಾ ರೇಗೆ ಸಿಸಿಬಿ ನೋಟಿಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಕನ್ನಡ ಸಿನಿಮಾ ಲೋಕದಲ್ಲಿ ಡ್ರಗ್ಸ್ ಸದ್ದು ಮಾಡಿರುವಾಗಲೇ ನಟಿ ಐಂದ್ರಿತಾ ರೇ ಕೂಡ, ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದರು ಎನ್ನೋದು ಬಹಿರಂಗ ಆಗಿತ್ತು. ಅಲ್ಲದೆ, ಐಂದ್ರಿತಾ ರೇಗೆ ಸಂಬಂಧಿಸಿದ ವಿಡಿಯೋ, ಫೋಟೋ ವೈರಲ್ ಆಗಿತ್ತು. ಪ್ರಕರಣದ ಪ್ರಮುಖ ಆರೋಪಿ ಶೇಕ್ ಫಾಝಿಲ್ ಜೊತೆ ಗುರುತಿಸಿಕೊಂಡಿದ್ದ ಫೋಟೋಗಳು ಬಹಿರಂಗ ಆಗಿದ್ದು ಬಂಗಾಳಿ ಹುಡುಗಿ ಐಂದ್ರಿತಾ ನಿದ್ದೆಗೆಡಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ರೇ, ಸಿನಿಮಾ ಪ್ರಮೋಶನ್ ಕೆಲಸಕ್ಕಾಗಿ ಕೊಲಂಬೋದ ಕ್ಯಾಸಿನೋಗೆ ಹೋಗಿದ್ದು ಹೌದು. ಚಿತ್ರದ ಪ್ರಚಾರಕ್ಕಾಗಿ ಮ್ಯಾನೇಜರ್ ಸೂಚನೆಯಂತೆ ಹೋಗಿದ್ದೆ. ಅಲ್ಲಿ ಸೊಹೈಲ್ ಮತ್ತು ಅರ್ಬಾಜ್ ಖಾನ್ ಪರಿಚಯ ಆಗಿತ್ತು. ಅದು ಬಿಟ್ಟರೆ ಶೇಖ್ ಫಾಝಿಲ್ ಬಗ್ಗೆ ನನಗೇನು ಯಾವುದೇ ಪರಿಚಯವಿಲ್ಲ ಎಂದಿದ್ದರು.
ಅರ್ಬಾಜ್ ಖಾನ್ ಜೊತೆ ‘ಮೇ ಜರೂರ್ ಆವೂಂಗಾ’ ಸಿನಿಮಾ ಸಂದರ್ಭದಲ್ಲಿ ಕೊಲಂಬೋಗೆ ಹೋಗಿದ್ದೇನೆ. ಕ್ಯಾಸಿನೋ ಪಾರ್ಟಿಗೆ ತೆರಳಿರುವ ಫೋಟೋಗಳು ಇನ್ಸ್ಟಾಗ್ರಾಂನಲ್ಲಿದ್ದು ಯಾವುದನ್ನೂ ಡಿಲೀಟ್ ಮಾಡಿಲ್ಲ. ಕ್ಯಾಸಿನೋಗೆ ಹೋಗಿದ್ದಲ್ಲದೆ, ಎರಡು ಬಾರಿ ಸ್ಟೆಪ್ ಹಾಕಿ ಬಂದಿದ್ದೇನೆ. ಕರೀಷ್ಮಾ ಕಪೂರ್, ಸೊಹೈಲ್ ಖಾನ್, ಅರ್ಬಾಜ್ ಖಾನ್, ನನ್ನ ಜೊತೆ ಬಂದಿದ್ದರು ಎಂದು ವಿವರಿಸಿದ್ದರು. ಎರಡನೇ ಬಾರಿ ಅರ್ಬಾಜ್ ಖಾನ್ ಹುಟ್ಟುಹಬ್ಬಕ್ಕೆಂದು ಬೆಂಗಳೂರಿನಲ್ಲಿ ಪಾರ್ಟಿ ಮಾಡಲಾಗಿತ್ತು. ಪಾರ್ಟಿ ವೇಳೆ ಫಾಝಿಲ್ ಬಂದಿದ್ದ. ಪಾರ್ಟಿಯಲ್ಲಿದ್ದಾಗ ಫಾಝಿಲ್ ಜೊತೆ ಫೋಟೋ ತೆಗೆಸಲಾಗಿತ್ತು. ಎರಡು ಬಾರಿಯೂ ಅರ್ಬಾಜ್ ಮೂಲಕವೇ ಫಾಝಿಲ್ ಭೇಟಿಯಾಗಿದ್ದೆ. ಆಗ ಯಾರಿಗೂ ಫಾಝಿಲ್ ಬಗ್ಗೆ ನಮಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು.
ಶ್ರೀಲಂಕಾದ ಕ್ಯಾಸಿನೋಗೆ ಸಿನಿಮಾದ ತಾರೆಯರನ್ನ ಕರೆಸುತ್ತಾರೆ. ನಮಗೂ ಆಹ್ವಾನ ಬಂದಾಗ ವ್ಯಕ್ತಿಯ ಹಿನ್ನೆಲೆ ಚೆಕ್ ಮಾಡಲು ಆಗಲ್ಲ. ಪಾರ್ಟಿಗಳಲ್ಲಿ ಫೋಟೋ ತೆಗೆದುಕೊಂಡವರು ತಪ್ಪು ಮಾಡಿದ್ರೆ ನಮ್ಮನ್ನ ಪ್ರಶ್ನೆ ಮಾಡಿದ್ರೆ ಹೇಗೆ ಎಂದು ಐಂದ್ರಿತಾ ಪ್ರಶ್ನಿಸಿದ್ದರು.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:59 am
HK News Staffer
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm