ಬ್ರೇಕಿಂಗ್ ನ್ಯೂಸ್
02-12-21 01:11 pm HK Desk news ಕರ್ನಾಟಕ
ಕಾರವಾರ, ಡಿ.2: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಯುವತಿಯರು ಮತ್ತು ಮಹಿಳೆಯರು ನಿಗೂಢವಾಗಿ ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಿದ್ದು, ಪೊಲೀಸ್ ಇಲಾಖೆ ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಮೂರು ವರ್ಷಗಳ ಅಂಕಿ ಅಂಶಗಳ ಪ್ರಕಾರ, ಪ್ರತಿ ವರ್ಷ 200ಕ್ಕೂ ಹೆಚ್ಚು ನಾಪತ್ತೆ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
2019ರಲ್ಲಿ ಕೋವಿಡ್ ಲಾಕ್ಡೌನ್ ಆಗೋದಕ್ಕೂ ಮುನ್ನ ಉತ್ತರ ಕನ್ನಡ ಜಿಲ್ಲೆಯಲ್ಲಿ 257 ಮಂದಿ ಹೆಣ್ಮಕ್ಕಳು ನಾಪತ್ತೆಯಾಗಿದ್ದರು. ಇದರಲ್ಲಿ ಪೊಲೀಸರು 236 ಮಂದಿಯನ್ನು ಪತ್ತೆ ಮಾಡಿದ್ದು, ವಿವಿಧ ಕಾರಣಗಳಲ್ಲಿ ಮನೆ ಬಿಟ್ಟು ಹೋಗಿದ್ದನ್ನು ಪತ್ತೆ ಮಾಡಿದ್ದರು. ಈ ಪೈಕಿ 21 ಮಂದಿ ಯುವತಿಯರು ಎಲ್ಲಿ ಹೋಗಿದ್ದಾರೆ ಅನ್ನುವುದನ್ನು ಈವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.
2020ರಲ್ಲಿ ಕೋವಿಡ್ ಲಾಕ್ಡೌನ್ ಇರುವಾಗಲೇ 212 ಮಂದಿ ಯುವತಿಯರು ನಾಪತ್ತೆಯಾಗಿದ್ದು ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾಗಿವೆ. ಈ ಪೈಕಿ 197 ಮಂದಿ ಪತ್ತೆಯಾಗಿದ್ದು, 15 ಮಂದಿಯ ಸುಳಿವು ಲಭಿಸಿಲ್ಲ. ಆದರೆ, 2021ರಲ್ಲಿ ಯುವತಿಯರ ನಾಪತ್ತೆ ಸಂಖ್ಯೆ ವಿಪರೀತ ಹೆಚ್ಚಿರುವುದು ಕಂಡುಬಂದಿದೆ. ಜನವರಿಯಿಂದ ಅಕ್ಟೋಬರ್ ವರೆಗಿನ ಅಂಕಿ ಅಂಶಗಳ ಪ್ರಕಾರ, 232 ಮಂದಿ ಯುವತಿಯರು ಕಣ್ಮರೆಯಾಗಿದ್ದಾರೆ. ಅದರಲ್ಲೂ ಕಳೆದ ನವೆಂಬರ್ ಒಂದು ತಿಂಗಳಲ್ಲಿ ನಾಪತ್ತೆಯಾಗಿರುವ ಮಾಹಿತಿ ಆಘಾತ ಮೂಡಿಸುತ್ತವೆ. ಒಂದೇ ತಿಂಗಳಲ್ಲಿ 20 ಹುಡುಗಿಯರು ನಾಪತ್ತೆಯಾಗಿದ್ದು ಪೊಲೀಸ್ ದೂರು ದಾಖಲಾಗಿದೆ. ಅಕ್ಟೋಬರ್ ವರೆಗಿನ 232 ಮಂದಿ ಪ್ರಕರಣಗಳಲ್ಲಿ 194 ಮಂದಿಯನ್ನು ಪತ್ತೆ ಮಾಡಲಾಗಿದ್ದು, 38 ಮಂದಿಯ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ. ಇದೇ ನವೆಂಬರ್ ತಿಂಗಳ 20 ಸೇರಿದರೆ ಈ ವರ್ಷದಲ್ಲೇ 58 ಮಂದಿ ಕಾಣೆಯಾಗಿದ್ದು, ಇವರು ಎಲ್ಲಿ ಹೋಗಿದ್ದಾರೆ ಅನ್ನುವುದು ಅಚ್ಚರಿಗೆ ಕಾರಣವಾಗಿದೆ.
2019 ಮತ್ತು 2020ರ ಎರಡು ವರ್ಷಗಳಲ್ಲಿ 36 ಯುವತಿಯರ ಬಗ್ಗೆಯೂ ಯಾವುದೇ ಮಾಹಿತಿಗಳಿಲ್ಲ. ಪೊಲೀಸ್ ಠಾಣೆಗಳಲ್ಲಿ ಮಿಸ್ಸಿಂಗ್ ಕೇಸು ದಾಖಲಾದ ಒಂದು ತಿಂಗಳ ಕಾಲ ಅದರ ಬಗ್ಗೆ ಹುಡುಕಾಟ ನಡೆಸುತ್ತಾರೆ. ಆನಂತರ, ಮನೆಯವರು ಮತ್ತು ಪೊಲೀಸರು ಕೂಡ ನಿರ್ಲಕ್ಷ್ಯ ತಾಳುತ್ತಾರೆ. ಹೆಚ್ಚಿನ ಪ್ರಕರಣಗಳಲ್ಲಿ ಶಾಲೆ, ಕಾಲೇಜು ಓದುವ ವಿದ್ಯಾರ್ಥಿನಿಯರು ಮತ್ತು ಮದುವೆಯಾದ ಸಣ್ಣ ಪ್ರಾಯದ ಯುವತಿಯರೇ ಕಾಣೆಯಾಗಿದ್ದಾರೆ. ಪ್ರೇಮ ಪ್ರಕರಣ, ಅನೈತಿಕ ಸಂಬಂಧ, ಪ್ರೇಮಿಗಳು ಕಾಣೆಯಾಗುವುದು ಹೀಗೆ ನಾಪತ್ತೆ ಪ್ರಕರಣಗಳಲ್ಲಿ ಪೊಲೀಸರು ಸಾಮಾನ್ಯವಾಗಿ ಇಂಥದ್ದನ್ನೇ ಕಾರಣ ಕೊಡುತ್ತಾರೆ. ಇದನ್ನು ಹೊರತುಪಡಿಸಿ ಇನ್ನಿತರ ಕಾರಣಗಳ ಬಗ್ಗೆ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗುವುದಿಲ್ಲ.
ಸೋಶಿಯಲ್ ಮೀಡಿಯಾಗಳ ಅಪರಿಮಿತ ಬಳಕೆಯಿಂದಾಗಿ ಪ್ರೇಮ ಸಂಬಂಧಗಳು ಹೆಚ್ಚುತ್ತಿದ್ದು, ಯಾರದ್ದೋ ಪ್ರೇಮಪಾಶಕ್ಕೆ ಸಿಲುಕಿ ಹದಿಹರೆಯದ ಯುವತಿಯರು ನಾಪತ್ತೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಮದುವೆಯಾದವರು ಅನೈತಿಕ ಸಂಬಂಧಗಳಿಂದಾಗಿ ಮನೆ ಬಿಟ್ಟು ಓಡಿಹೋಗಿ ಆನಂತರ ಬೇರೆಯವರ ಜೊತೆ ಪತ್ತೆಯಾಗಿದ್ದೂ ಇದೆ. ಹರೆಯದ ಯುವತಿಯರ ನಾಪತ್ತೆ ಪ್ರಕರಣಗಳಲ್ಲಿ ಹೆಚ್ಚಿನವು ನಿಗೂಢವಾಗಿಯೇ ಉಳಿದುಕೊಂಡಿದ್ದು ಪೊಲೀಸರಿಗೆ ಸವಾಲಾಗಿದೆ. ಇದೇ ವೇಳೆ, ಕರಾವಳಿಯಲ್ಲಿ ನಡೆಯುತ್ತಿದ್ದ ಲವ್ ಜಿಹಾದ್ ರೀತಿಯ ದಂಧೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಆಗಿದೆಯಾ ಅನ್ನುವ ಸಂಶಯವೂ ಕೇಳಿಬಂದಿದೆ.
ಕೇರಳದಲ್ಲಿ ಲವ್ ಜಿಹಾದ್ ಮಾದರಿ ಪ್ರಕರಣಗಳು ಅತಿ ಹೆಚ್ಚು ವರದಿಯಾಗುತ್ತಿದ್ದು, ಹೆಚ್ಚಿನ ಯುವತಿಯರು ನಾಪತ್ತೆಯಾಗಿ ಆನಂತರ ಪತ್ತೆ ಆಗುವುದೇ ಕಡಿಮೆ ಅನ್ನುವಂತಾಗಿದೆ. ಹಿಂದು ಮತ್ತು ಕ್ರಿಸ್ತಿಯನ್ ಯುವತಿಯರು ಮುಸ್ಲಿಮ್ ಹುಡುಗರ ಪ್ರೇಮಪಾಶಕ್ಕೆ ಕಟ್ಟುಬಿದ್ದು ಮನೆ ಬಿಟ್ಟು ನಾಪತ್ತೆಯಾಗುತ್ತಿದ್ದು, ಇದರ ಹಿಂದೆ ವ್ಯವಸ್ಥಿತ ಲವ್ ಜಿಹಾದ್ ತಂತ್ರಗಾರಿಕೆ ಇದೆ ಎನ್ನುವುದು ಹಲವೆಡೆ ಸಾಬೀತಾಗಿತ್ತು. ಈ ಪೈಕಿ, ಯುವತಿಯರನ್ನು ವಿದೇಶಕ್ಕೆ ಕೊಂಡೊಯ್ದು ಮಾರಾಟ ಮಾಡುವುದೂ ಸೇರಿದಂತೆ ಉಗ್ರವಾದಿ ಚಟುವಟಿಕೆಗೆ ಇಳಿಸುವ ಪ್ರಕ್ರಿಯೆಗಳೂ ಹಲವು ಪ್ರಕರಣಗಳಲ್ಲಿ ಕಂಡುಬಂದಿತ್ತು.
ಇಂಥ ಬೆಳವಣಿಗೆಯ ನಡುವಲ್ಲೇ ಈವರೆಗೂ ಸೈಲಂಟ್ ಆಗಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತ ಅನ್ನುವಷ್ಟರ ಮಟ್ಟಿಗೆ ಯುವತಿಯರ ನಾಪತ್ತೆ ಪ್ರಕರಣ ಕಂಡುಬಂದಿದ್ದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ಕಾರವಾರ ಎಸ್ಪಿ ಸುಮನ್ ಪೆನ್ನೇಕರ್ ಬಳಿ ಕೇಳಿದರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಳೆಯ ಪ್ರಕರಣಗಳ ಪತ್ತೆಗೆ ಪೊಲೀಸರಿಗೆ ಟಾಸ್ಕ್ ನೀಡುವುದಾಗಿ ತಿಳಿಸಿದ್ದಾರೆ.
Since the last three years, Uttara Kannada district has been witnessing an increasing number of missing people. During the ten months of this year, 232 missing cases were registered. It is worrying that the number of young girls and middle aged women disappearing is on the higher side.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm