ಬ್ರೇಕಿಂಗ್ ನ್ಯೂಸ್
04-09-20 09:34 pm Crime Reporter - Bengaluru ಕರ್ನಾಟಕ
ಬೆಂಗಳೂರು, ಸೆಪ್ಟೆಂಬರ್ 4: ಡ್ರಗ್ಸ್ ನಂಟಿನಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಚಿತ್ರನಟಿ ರಾಗಿಣಿ ದ್ವಿವೇದಿ ಹೆಸರು 2017ರಲ್ಲೇ ಕೇಳಿಬಂದಿತ್ತು. ಆದರೆ ಪ್ರಭಾವಿಗಳ ಕೈವಾಡ ರಾಗಿಣಿ ಹೆಸರು ಹೊರಗೆ ಬರದಂತೆ ಪೊಲೀಸರ ಕೈಯನ್ನು ಕಟ್ಟಿಹಾಕಿತ್ತು ಎನ್ನುವ ಮಾಹಿತಿ ಈಗ ಬಹಿರಂಗ ಆಗಿದೆ.
2017 ರಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದ ನೈಜೀರಿಯನ್ ಪ್ರಜೆಗಳಿಬ್ಬರು ರಾಗಿಣಿ ಸೇರಿ ಬೆಂಗಳೂರಿನ 15 ಮಂದಿಯ ಹೆಸರು ಹೇಳಿದ್ದರು. ಅಂದು, ರಾಗಿಣಿ, ರವಿಶಂಕರ್ ಮತ್ತು ಪ್ರತೀಕ್ ಶೆಟ್ಟಿ ಹೆಸರು ಪೊಲೀಸರಿಗೆ ಲಭಿಸಿದ್ದರೂ ಪೊಲೀಸರ ಕೈಯನ್ನು ರಾಜಕಾರಣಿಗಳೇ ಕಟ್ಟಿಹಾಕಿದ್ದರು ಎನ್ನುವ ಸ್ಫೋಟಕ ಮಾಹಿತಿ ಹೊರಬಂದಿದೆ.

ಬೆಂಗಳೂರಿಗೆ ಡ್ರಗ್ ಪೂರೈಸುತ್ತಿದ್ದ ನೈಜೀರಿಯಾ ಮೂಲದ ವಿದ್ಯಾರ್ಥಿಗಳಿಂದ 1.70 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಂದೇ ರಾಗಿಣಿ ಹೆಸರನ್ನು ನೈಜೀರಿಯನ್ ಪ್ರಜೆಗಳು ಪೊಲೀಸರ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದರು. ಆದರೆ, ರಾಗಿಣಿ ಸೇರಿ ಬೆಂಗಳೂರಿನ ಡ್ರಗ್ ಕಿಂಗ್ ಪಿನ್ ಗಳ ಹೆಸರೇ ಹೊರಬರದಂತೆ ಆಗಿನ ರಾಜಕೀಯ ನೋಡಿಕೊಂಡಿತ್ತೇ ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಅಲ್ಲದೆ, ಮುಂಬೈನಲ್ಲಿ ಬಾಲಿವುಡ್ ನಟ ನಟಿಯರಿಗೆ ಡ್ರಗ್ಸ್ ಪೂರೈಸುತ್ತಿದ್ದ ಬಹುದೊಡ್ಡ ಜಾಲದ ರೂವಾರಿ ಇಮ್ತಿಯಾಜ್ ಖಾತ್ರಾ ಹೆಸರು ಕೂಡ ಪೊಲೀಸರಿಗೆ ಲಭಿಸಿತ್ತು. ಮುಂಬೈನಲ್ಲಿ ದೊಡ್ಡ ಮಟ್ಟದ ಪಾರ್ಟಿಗಳನ್ನು ನಡೆಸುತ್ತಿದ್ದ ಇಮ್ತಿಯಾಜ್ ಜೊತೆಗೆ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಟರು ಹತ್ತಿರದ ನಂಟು ಹೊಂದಿದ್ದರು. ಇವೆಲ್ಲ ವಿಚಾರ ಪೊಲೀಸರು ಮತ್ತು ಆಯಕಟ್ಟಿನ ರಾಜಕಾರಣಿಗಳಿಗೆ ಗೊತ್ತಿದ್ದರೂ ಎಲ್ಲವನ್ನೂ ಹೊರಗೆ ಬರದಂತೆ ನೋಡಿಕೊಂಡಿದ್ದರು ಎನ್ನುವ ಮಾಹಿತಿ ಈಗ ಹೊರಗೆ ಬಂದಿದೆ.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm