ಬ್ರೇಕಿಂಗ್ ನ್ಯೂಸ್
02-09-20 09:50 pm Headline Karnataka News Network ಕರ್ನಾಟಕ
ಬೆಂಗಳೂರು,ಸೆಪ್ಟೆಂಬರ್ 02: ಸ್ಯಾಂಡಲ್ವುಡ್ ನ ಕೆಲ ನಟ-ನಟಿಯರು ಡ್ರಗ್ಸ್ ಧಂದೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ ಸಿಸಿಬಿ ತನಿಖೆ ಚುರುಕುಗೊಳಿಸಿದ್ದು ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು, ಇಂದು ಸಿಸಿಬಿ ಪೊಲೀಸರು ರಾಗಿಣಿಯವರ ಆಪ್ತ ಜಯನಗರದ ಆರ್.ಟಿ.ಒ ಅಧಿಕಾರಿ ರವಿಶಂಕರ್ ನನ್ನು ಕಚೇರಿಗೆ ಕರೆತಂದು ವಿಚಾರಣೆ ಮಾಡಿ ವಶಕ್ಕೆಪಡೆದು ಬಂಧಿಸಿದ್ದಾರೆ. ಆತನ ವಿಚಾರಣೆಯ ನಂತರ ರಾಗಿಣಿಗೆ ನೋಟಿಸ್ ನೀಡಿದ್ದಾರೆ. ಜೊತೆಗೆ ನಾಳೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಗೆಳೆಯರ ಮಧ್ಯೆ ನಡೆದಿತ್ತು ಗಲಾಟೆ:
ಬೆಂಗಳೂರಿನ ಖಾಸಗಿ ಹೋಟೆಲ್ ರಿಟ್ಜ್ ಕಾರ್ಲ್ ಟನ್ ನಲ್ಲಿ ರಾಗಿಣಿ ಅವರ ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್.ಟಿ.ಒ ಅಧಿಕಾರಿ ರವಿಶಂಕರ್ ಕಿತ್ತಾಡಿಕೊಂಡಿದ್ದರು. 2019ರ ಮಾರ್ಚ್ 16 ಶನಿವಾರ ರಾತ್ರಿ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ, ತಮ್ಮ ಗೆಳೆಯ ರವಿಶಂಕರ್ ಜೊತೆ ಹೋಟೆಲ್ಗೆ ತೆರಳಿದ್ದರು. ಇದನ್ನು ಕಂಡ ಶಿವಪ್ರಕಾಶ್, ರವಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಇಬ್ಬರ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಬಳಿಕ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದರು.

ಘಟನೆಯಿಂದ ಗಾಯಗೊಂಡ ಬಳಿಕ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದರು. ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು. ಇವರಿಬ್ಬರು ರಾಗಿಣಿ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಆದರೆ ಈಗ ರಾಗಿಣಿ ಈ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಕ್ರಿಯಿಸಿದ್ದರು.
ಅಂದು ನಾನು ಸ್ನೇಹಿತರ ಜೊತೆ ಹೋಟೆಲಿನಲ್ಲೇ ಇದ್ದೆ. ಹಳೆ ವೈಷ್ಯಮ್ಯಕ್ಕೆ ಸಂಬಂಧಿಸಿದಂತೆ ರವಿ ಹಾಗೂ ಶಿವಕುಮಾರ್ ಮಧ್ಯೆ ಗಲಾಟೆ ನಡೆದಿತ್ತು. ಆಗ ನಾನು ಸ್ನೇಹಿತರೊಂದಿಗೆ ಅಲ್ಲೇ ಊಟ ಮಾಡುತ್ತಿದ್ದೆ. ಅವರಿಬ್ಬರ ಜಗಳದ ಮಧ್ಯೆ ನನ್ನ ಪಾತ್ರ ಏನೂ ಇಲ್ಲ. ಗಲಾಟೆ ಆದ ಬಳಿಕ ನಾನು ಅಲ್ಲಿಂದ ಹೊರಟು ಹೋದೆ. ಈ ಘಟನೆ ಬಗ್ಗೆ ನಾನು ಪೋಲೀಸರಿಗೆ ಹೇಳಿಕೆ ನೀಡಿದ್ದೇನೆ ಅಷ್ಟೇ ಎಂದು ರಾಗಿಣಿ ಸ್ಪಷ್ಟಪಡಿಸಿದ್ದರು.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm