ಬ್ರೇಕಿಂಗ್ ನ್ಯೂಸ್
24-05-21 11:27 am Headline Karnataka News Network ಕರ್ನಾಟಕ
ಬಾಗಲಕೋಟೆ, ಮೇ 24 : ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಅಟ್ಟಹಾಸದ ಭೀತಿ ಮೂಡಿಸುತ್ತಿದ್ದರೆ, ಲಸಿಕೆಗೆ ಒಂದೇ ಬಾರಿಗೆ ಬೇಡಿಕೆ ಕಾಣಿಸಿಕೊಂಡು ಲಸಿಕೆಯೇ ಇಲ್ಲದಾಗಿದೆ. ಇಂಥ ಸಂದರ್ಭದಲ್ಲೇ ಈಗಾಗ್ಲೇ ಲಸಿಕೆ ತೆಗೆದುಕೊಂಡವರಲ್ಲಿ ಸೋಂಕಿನ ಪ್ರಮಾಣ ಮತ್ತು ಸಾವು ಸಂಭವಿಸುತ್ತಿರುವ ಪ್ರಮಾಣದ ವಿಚಾರದಲ್ಲಿ ತಜ್ಞರು ಅಧ್ಯಯನ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಸಿಟಿ ಸ್ಕ್ಯಾನ್ ವೈದ್ಯರು ಸೇರಿ ನಡೆಸಿದ ಅಧ್ಯಯನದಲ್ಲಿ ಲಸಿಕೆ ಪಡೆದವರಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆ. ಅಷ್ಟೇ ಅಲ್ಲ, ಲಸಿಕೆ ಪಡೆದವರ ಜೀವ ಬಹುತೇಕ ಸೇಫ್ ಎನ್ನುವ ವಿಚಾರವನ್ನು ವೈದ್ಯರು ಕಂಡುಕೊಂಡಿದ್ದಾರೆ.
ಎರಡನೇ ಅಲೆಯಲ್ಲಿ ಕೊರೊನಾ ಪತ್ತೆಗಾಗಿ ಸಿಟಿ ಸ್ಕ್ಯಾನ್ ಮಾಡಿಸಿದ ಸೋಂಕಿತರ ಮಾಹಿತಿ ಸಂಗ್ರಹಿಸಿ, ತಾಳೆಹಾಕಿ ನೋಡಿದಾಗ ಈ ವಿಚಾರ ಕಂಡುಬಂದಿದೆ.

ಸಿಟಿ ಸ್ಕ್ಯಾನ್ ಮಾಡಿಸಿದ ಒಂದು ಸಾವಿರ ಜನರ ಮಾಹಿತಿ ಪಡೆದು, ಅವರಲ್ಲಿ ಸೋಂಕಿನ ತೀವ್ರತೆಯ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಒಂದು ಸಾವಿರ ಜನರಲ್ಲಿ ಸೋಂಕು ಕಾಣಿಸಿದ್ದ ಶೇ. 75 ಜನರು ವ್ಯಾಕ್ಸಿನ್ ಹಾಕಿಸಿಕೊಂಡಿರಲಿಲ್ಲ. ಅಲ್ಲದೆ, ಸೋಂಕು ಕಾಣಿಸಿದ ಶೇ.25 ಜನರು ಸಿಂಗಲ್ ಡೋಸ್ ಪಡೆದಿದ್ದರು. ಎರಡು ಡೋಸ್ ಪಡೆದವರ ಪೈಕಿ ಶೇ.5ರಷ್ಟು ಜನರಲ್ಲಿ ಮಾತ್ರ ಸೋಂಕು ಬಂದಿರುವುದು ಕಂಡುಬಂದಿದೆ.
ಇದಲ್ಲದೆ, ಎರಡು ಡೋಸ್ ಪಡೆದ ಸೋಂಕಿತರಲ್ಲಿ ಲಂಗ್ಸ್ ಡ್ಯಾಮೇಜ್ ತೀರಾ ಕಡಿಮೆ ಇರುವುದು ಕಂಡುಬಂದಿದೆ. ಎರಡು ಡೋಜ್ ಲಸಿಕೆ ಪಡೆದವರಲ್ಲಿ ಕೆಲವರಲ್ಲಿ ಸೋಂಕು ಕಾಣಿಸಿದರೂ ಸಾವು ತಡೆದಿದೆ ಎನ್ನುವ ಅಂಶ ಅಧ್ಯಯನದಲ್ಲಿ ಹೊರಬಿದ್ದಿದೆ.

ಹಾಗಾಗಿ, ವ್ಯಾಕ್ಸಿನ್ ಪಡೆದವರ ಜೀವ ಸೇಫ್ ಎನ್ನುವುದು ಅಧ್ಯಯನದಲ್ಲಿ ಸಾಬೀತಾಗಿದೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಜನರು ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ ತಜ್ಞರು.
ಈ ಬಾರಿ ಫ್ರಂಟ್ ಲೈನ್ ವಾರಿಯರ್ ಗಳು ಎರಡು ಡೋಜ್ ಪಡೆದ ಪರಿಣಾಮವೇ ಎರಡನೇ ಅಲೆಯ ಸಾವಿನ ಡಂಗುರದ ನಡುವೆಯೂ ಸೇಫ್ ಆಗಿದ್ದಾರೆ. ಕೊರೊನಾಗೆ ಬಲಿಯಾದ ಬಹುತೇಕರು ಲಸಿಕೆ ಪಡೆದಿಲ್ಲ ಎನ್ನುವುದು ಅನೇಕ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿರುವ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಲಸಿಕೆ ಪಡೆದು ಜೀವ ಉಳಿಸಿಕೊಳ್ಳಿ ಎಂದು ವೈದ್ಯರು ಕರೆ ನೀಡಿದ್ದಾರೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 10:45 pm
HK News Staffer
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm