ಬ್ರೇಕಿಂಗ್ ನ್ಯೂಸ್
22-05-21 11:46 am Bangalore Correspondent ಕರ್ನಾಟಕ
Photo credits : Representative Image
ಬೆಂಗಳೂರು, ಮೇ 21: ಕೊರೊನಾ ವೈರಸ್ನ ಎರಡನೇ ಅಲೆಯಲ್ಲಿ ನಲುಗಿರುವ ಸಂದರ್ಭದಲ್ಲಿ ಕೆಲ ಖಾಸಗೀ ಆ್ಯಂಬುಲೆನ್ಸ್ಗಳು ಅಕ್ಷರಶಃ ಸುಲಿಗೆಗೆ ಇಳಿದಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಖಾಸಗೀ ಆ್ಯಂಬುಲೆನ್ಸ್ಗಳಿಗೆ ರಾಜ್ಯಸರ್ಕಾರ ದರವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದೆ.
ಎರಡು ವಿಭಾಗದಲ್ಲಿ ಆ್ಯಂಬುಲೆನ್ಸ್ಗಳಿಗೆ ದರವನ್ನು ನಿಗದಿ ಪಡಿಸಲಾಗಿದೆ. ಸಾಮಾನ್ಯ ಆ್ಯಂಬುಲೆನ್ಸ್ಗಳಿಗೆ (ಪೇಶೆಂಟ್ ಟ್ರಾನ್ಸ್ಪೋರ್ಟ್ ಆ್ಯಂಬುಲೆನ್ಸ್)ಮೊದಲ 10 ಕಿ.ಮೀಟರ್ಗಳಿಗೆ 1500 ರೂಪಾಯಿ ಗರಿಷ್ಟದರವನ್ನು ನಿಗದಿಗೊಳಿಸಲಾಗಿದೆ. 10 ನಂತರದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 120 ರೂಪಾಯಿ ನಿಗದಿಗೊಳಿಸಲಾಗಿದೆ. ಇದು ಆಮ್ಲಜನಕ, ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಶೀಲ್ಡ್, ಸ್ಯಾನಿಟೈಸರ್, ಡ್ರೈವರ್ ಈ ಎಲ್ಲವನ್ನೂ ಒಳಗೊಂಡಿರುತ್ತದೆ. ಗಂಟೆಗೆ 200 ರೂಪಾಯಿ ವೈಟಿಂಗ್ ಚಾರ್ಜ್ ಎಂದು ನಿಗದಿಗೊಳಿಸಲಾಗಿದೆ.



ಇನ್ನು ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್(ಬಿಎಲ್ಎಸ್)ಗಳಿಗೆ ಮೊದಲ 10 ಕಿಮೀಗಳಿಗೆ 2000 ರೂಪಾಯಿ ನಿಗದಿಗೊಳಿಸಿದ್ದು 10 ಕಿಮೀ ನಂತರದ ಪ್ರಯಾಣಕ್ಕೆ ಪ್ರತಿ ಕಿಮೀಗೆ ಗರಿಷ್ಟ 120 ರೂಪಾಯಿ ವಿಧಿಸಲು ಅವಕಾಶ ನೀಡಲಾಗಿದೆ. ಇದು ಕೂಡ ದು ಆಮ್ಲಜನಕ, ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಶೀಲ್ಡ್, ಸ್ಯಾನಿಟೈಸರ್, ಡ್ರೈವರ್ ಈ ಎಲ್ಲವನ್ನೂ ಒಳಗೊಂಡಿರುತ್ತದೆ. ವೈಟಿಂಗ್ ಚಾರ್ಚ್ ಗಂಟೆಗೆ 250 ರೂ ನಿಗದಿಗೊಳಿಸಿದೆ.

ಈ ದರ ನಿಗದಿಪಡಿಸಲು ನೋಂದಣಿ ವೆಚ್ಚ, ವಿಮಾ ವೆಚ್ಚ, ಸಿಬ್ಬಂದಿಗಳ ವೆಚ್ಚ, ಟೈರ್ಗಳ ವೆಚ್ಚ ಹಾಗೂ ಇತರೆ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಆದೇಶ ಪ್ರತಿಯಲ್ಲಿ ವಿವರಿಸಲಾಗಿದೆ. ಉಪಮುಖ್ಯಮಂತ್ರಿ, ಸಾರಿಗೆ ಸಚಿವರು, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈಗ ಅಧಿಕೃತವಾಗಿ ಆದೇಶ ಹೊರಬಿದ್ದಿದೆ.
In the wake of private ambulances fleecing COVID-19 patients by charging exorbitant rates, the state government has fixed a maximum fare that can be charged by the ambulance service provider.
01-03-26 09:20 pm
HK News Staffer
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
ಖಮೇನಿ ಹತ್ಯೆ ಖಂಡನೀಯ, ಇರಾನ್ ಮೇಲಿನ ಅಮೆರಿಕ ಯುದ್ಧ...
01-03-26 04:51 pm
02-03-26 01:34 pm
HK News Staffer
ಖಮೇನಿ ಯುಗಾಂತ್ಯ; ಹಂಗಾಮಿ ಸುಪ್ರೀಂ ಲೀಡರ್ ಸ್ಥಾನಕ್ಕ...
02-03-26 01:30 pm
Ayatollah Khamenei Killed: ಇರಾನ್ ಪರಮೋಚ್ಚ ನಾಯಕ...
01-03-26 09:52 am
ದುಬೈ, ಅಬುಧಾಬಿ ಮೇಲೆ ಇರಾನ್ ಮಿಸೈಲ್ ದಾಳಿ ; ಜಗತ್ತಿ...
28-02-26 10:54 pm
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
01-03-26 08:37 pm
HK News Staffer
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm