ಬ್ರೇಕಿಂಗ್ ನ್ಯೂಸ್
17-05-21 12:03 pm Headline Karnataka News Network ಕರ್ನಾಟಕ
ಕಳಸ, ಮೇ 17 : ಕೊರೊನಾ ಸೋಂಕಿತನಾಗಿ, ಮನೆಯ ಜಗುಲಿಯಲ್ಲಿ ಮಲಗಿದ್ದ ಅಣ್ಣನನ್ನು ತಮ್ಮನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆಯ ಕಂಬಳಗದ್ದೆಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಮಹಾವೀರ (45) ಎಂಬಾತನಾಗಿದ್ದು ಆರೋಪಿಯನ್ನು ಪಾರ್ಶ್ವನಾಥ್ ಎಂದು ಗುರುತಿಸಲಾಗಿದೆ. ಮಹಾವೀರನಿಗೆ ಮೂರು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ್ದು ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ನರ್ಸ್ ಮತ್ತು ವೈದ್ಯರೊಂದಿಗೆ ಜಗಳ ಮಾಡಿಕೊಂಡು ಬಂದಿದ್ದ ಮಹಾವೀರ ಮನೆಗೆ ಬಂದು ಹೊರಗಡೆ ಜಗಲಿಯಲ್ಲಿ ಮಲಗಿದ್ದ. ತಮ್ಮ ಮನೆಗೆ ಬಂದಾಗ ಮನೆಯಲ್ಲಿ ಮಹಾವೀರ್ ಇರುವುದನ್ನು ಕಂಡು ಕೊರೊನಾ ಗುಣವಾಗದೆ ಯಾಕೆ ಮನೆಗೆ ಬಂದೆ ಎಂದು ಪಾರ್ಶ್ವನಾಥ್ ಪ್ರಶ್ನೆ ಮಾಡಿದ್ದಾನೆ.
ಕೊರೊನಾ ಗುಣವಾಗದೆ ಮನೆಗೆ ಬಂದಿದ್ದ ವಿಚಾರಕ್ಕೆ ಜಗಳ ನಡೆದು ಆಸ್ತಿ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಅಣ್ಣನನ್ನು ಸ್ವತಃ ತಮ್ಮನೇ ಹಲ್ಲೆ ನಡೆಸಿದ್ದಾನೆ. ಕುತ್ತಿಗೆಯನ್ನು ಕಾಲಿನಿಂದ ಒತ್ತಿ ತಲೆ ಮತ್ತು ಮುಖವನ್ನು ಕತ್ತಿಯಿಂದ ಕೊಚ್ಚಿದ್ದಾನೆ. ಮನೆ ಮಂದಿ ಕತ್ತಿಯನ್ನು ಕಸಿದುಕೊಂಡಿದ್ದು ಅಲ್ಲಿಗೇ ಬಿಡದ ಪಾರ್ಶ್ವನಾಥ ಸೌದೆ ಕೊಟ್ಟಿಗೆಯಲ್ಲಿದ್ದ ಕೊಡಲಿಯನ್ನು ತಂದು ಅಣ್ಣನನ್ನೇ ಒಂದೇ ಏಟಿಗೆ ಕೊಚ್ಚಿ ಕೊಲೆ ಮಾಡುವ ಮೂಲಕ ಕೌರ್ಯ ಮೆರೆದಿದ್ದಾನೆ.
ತೀವ್ರವಾಗಿ ಗಾಯಗೊಂಡ ಮಹಾವೀರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
Younger Brother kills own Eleder Brother who was covid positive for getting discharged from hospital without complete healing form Covid in Kalasa.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm