ಬ್ರೇಕಿಂಗ್ ನ್ಯೂಸ್
27-04-21 11:29 am Bangalore Correspondent ಕರ್ನಾಟಕ
Photo credits : Facebook
ಬೆಂಗಳೂರು, ಏ.27: ಕೋವಿಡ್ ಸೋಂಕಿಗೊಳಗಾದವರೆಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ಕಡಿಮೆ ಲಕ್ಷಣ ಇರುವವರು ಮನೆಯಲ್ಲೇ ಆರೈಕೆ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮನೆ ಆರೈಕೆಯಲ್ಲಿರುವವರಿಗೆ ಪ್ರತಿ ದಿನ ಕಾಲ್ ಸೆಂಟರ್ ನಿಂದ ಕರೆ ಮಾಡಿ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ಔಷಧಿ ಕಿಟ್ ನೀಡಲಾಗುತ್ತದೆ. ಯು.ಕೆ.ಯಲ್ಲಿ ರೋಗಿಗಳನ್ನು ಮನೆಯಲ್ಲೇ ಇರಿಸಿ ಆಸ್ಪತ್ರೆ ಮೇಲೆ ಒತ್ತಡವಿಲ್ಲದಂತೆ ಮಾಡಿ ಸಾವಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಇದೇ ರೀತಿ ರಾಜ್ಯದಲ್ಲೂ ಮಾಡಲಾಗುವುದು. ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಎಲ್ಲರಿಗೂ ಕರೆ ಮಾಡಲು ಸಿಬ್ಬಂದಿ ಬೇಕಾಗುತ್ತದೆ. ಇದಕ್ಕಾಗಿ ಸಿಐಐ ಸಹಯೋಗ ಪಡೆಯಲಾಗಿದೆ ಎಂದರು.
ಕೋವಿಡ್ ಸಂಬಂಧಿತ ಕೆಲ ಔಷಧಿಗಳಿಗೆ 81.32 ಕೋಟಿ ರೂ., ಲಸಿಕೆಗೆ 400 ಕೋಟಿ ರೂ., ರೆಮಿಡಿಸಿವಿರ್ ಗೆ 28 ಕೋಟಿ ರೂ. ಮಂಜೂರು ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತಿದೆ. ವಿಕ್ಟೋರಿಯಾ, ಬೌರಿಂಗ್ ನಲ್ಲಿ 250 ಹಾಸಿಗೆಗಳಿಗೆ ವೆಂಟಿಲೇಟರ್ ಅಳವಡಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ 3 ಸಾವಿರ ಹಾಸಿಗೆಯ ಮೇಕ್ ಶಿಫ್ಟ್ ಆಸ್ಪತ್ರೆ ಬರಲಿದೆ. ಪೋರ್ಟೇಬಲ್ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿವೆ. ಕೆಲ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆ ಮುಗಿದ ಕೂಡಲೇ ಉಳಿದ ಹಾಸಿಗೆ ದೊರೆಯಲಿದೆ. ಯಾವುದೇ ಸರಳ ರೀತಿಯ ಚಿಕಿತ್ಸೆ ಯಾವುದೇ ವೈದ್ಯ ಪದ್ಧತಿಯಲ್ಲಿದ್ದರೂ ಅದನ್ನು ಉತ್ತೇಜಿಸಲಾಗುವುದು. ಆಯುಷ್ ನಲ್ಲಿ ಔಷಧಿ, ಚಿಕಿತ್ಸೆ ಇದ್ದರೂ ಬೆಂಬಲಿಸಲಾಗುವುದು ಎಂದರು.
ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆಗಳ ಪ್ರಮುಖರೊಂದಿಗೆ ಸಚಿವರು ಸಭೆ ನಡೆಸಿದರು. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಕಳೆದ ವರ್ಷಕ್ಕಿಂತ ಕಡಿಮೆ ಹಾಸಿಗೆಗಳನ್ನು ಮೀಸಲಿಟ್ಟಿವೆ. ಈಗ ಕೋವಿಡ್ ಪಾಸಿಟಿವ್ ಆದವರೆಲ್ಲ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಆದ್ದರಿಂದ ನಾನ್ ಕೋವಿಡ್ ಬಿಟ್ಟು ಕೋವಿಡ್ ಗೆ ಒತ್ತು ನೀಡುವುದು ಅನಿವಾರ್ಯ ಎಂದರು.ಖಾಸಗಿ ಆಸ್ಪತ್ರೆಗಳು 75% ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಬೇಕು. ಈ ಪೂರ್ತಿ ಹಾಸಿಗೆಗಳು ಸರ್ಕಾರಕ್ಕೆ ಸಲ್ಲಬೇಕು. ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ನಿಂದ ಇದಕ್ಕೆ ಪಾವತಿ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.
Sudhakar told reporters that even if the lockdown was in place, there would be skeletal movement of vehicles for essential services
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm