ಬ್ರೇಕಿಂಗ್ ನ್ಯೂಸ್
13-04-21 10:21 am Headline Karnataka News Network ಕರ್ನಾಟಕ
ಬೆಂಗಳೂರು, ಎ 13: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಎಸ್ಐಟಿ ಅಧಿಕಾರಿಗಳ ಮುಂದೆ ಸಿಡಿ ಯುವತಿ ಉಲ್ಟಾ ಹೇಳಿಕೆ ನೀಡಿದ್ದಾರೆ. ನನ್ನನ್ನು ಹನಿ ಟ್ರ್ಯಾಪ್ಗೆ ಬಳಿಸಿಕೊಂಡು ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಸಿಡಿ ಲೇಡಿ ಸ್ಫೋಟಕ ಆರೋಪ ಮಾಡಿರುವುದಾಗಿ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಮಾತನಾಡಿದ್ದ ವಕೀಲರಾದ ಸೂರ್ಯ ಮುಕುಂದರಾಜ್ ಯುವತಿ ಅಂತಹ ಯಾವುದೇ ಹೇಳಿಕೆಯನ್ನೂ ನೀಡಿಲ್ಲ ಎಂದಿದ್ದರು. ಸದ್ಯ ಈ ಬಗ್ಗೆ ಸ್ವತಃ ಸಿಡಿ ಲೇಡಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು ನಾನು ಉಲ್ಟಾ ಹೊಡೆದಿಲ್ಲ ಎಂದಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಸಿಡಿ ಲೇಡಿ ‘ನಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧಳಾಗಿದ್ದೇನೆ. ಎಸ್ಐಟಿ ಅಧಿಕಾರಿಗಳ ಮುಂದೆ ನಾನು ಉಲ್ಟಾ ಹೇಳಿಕೆ ನೀಡಿಲ್ಲ. ನಾನು ಒತ್ತಡದಿಂದ ಹೇಳಿಕೆ ನೀಡಿದ್ದೇನೆಂಬುದು ಸತ್ಯಕ್ಕೆ ದೂರವಾದ ಮಾತು. ಜಡ್ಜ್ ಮುಂದೆ ಮತ್ತೊಮ್ಮೆ ಹೇಳಿಕೆ ನೀಡಲು ಮನವಿ ಮಾಡಿಲ್ಲ. ಪೋಷಕರ ಜೊತೆ ಚರ್ಚಿಸಿದ ಬಳಿಕ ಮನಸ್ಸು ಬದಲಾಯಿಸಿಲ್ಲ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ನಿನ್ನೆ ಎಸ್ಐಟಿ ಅಧಿಕಾರಿಗಳ ಮುಂದೆ ನಾನು ಹಾಜರಾಗಿದ್ದೆ. ಆದ್ರೆ ಎಸ್ಐಟಿ ಮುಂದೆ ಉಲ್ಟಾ ಹೇಳಿಕೆ ನೀಡಿಲ್ಲ. ಇನ್ನೂ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಕರೆಸಿಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ರಮೇಶ್ ಜಾರಕಿಹೊಳಿ ಕೊರೊನಾ ಪೀಡಿತರಂತೆ ನಟಿಸುತ್ತಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಈ ರೀತಿ ಸುದ್ದಿ ಸೃಷ್ಟಿಸಿ ನನ್ನ ವಿರುದ್ದ ಷಡ್ಯಂತ್ರ ಮಾಡಿರುವ ಸಾಧ್ಯತೆ ಇದೆ’ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪತ್ರವನ್ನೂ ಬರೆದಿದ್ದಾರೆ. ಸದ್ಯ ಆ ಪತ್ರ ಹಾಗೂ ಹೇಳಿಕೆ ನೀಡಿರುವ ವಿಡಿಯೋ ಬಿಡುಗಡೆ ಆಗಿದೆ.
ಆರೋಪಿ ವಿಚಾರಣೆ ನಡೆಸದಿದ್ದಕ್ಕೆ ಸಿಡಿ ಲೇಡಿ ಗರಂ;
ರಮೇಶ್ ಜಾರಕಿಹೊಳಿಯನ್ನು ವಿಚಾರಣೆ ನಡೆಸದಿದ್ದಕ್ಕೆ ಸಿಡಿ ಲೇಡಿ ಗರಂ ಆಗಿದ್ದಾರೆ. ಐಸ್ಐಟಿಯವ್ರು ನನ್ನ ಫ್ಯಾಮಿಲಿಯನ್ನ ವಿಚಾರಣೆ ನಡೆಸಿದ್ದಾರೆ. ನನ್ನ ಫ್ರೆಂಡ್ ಆಕಾಶ್ರಿಂದ ಸ್ಟೇಟ್ಮೆಂಟ್ ಪಡೆದಿದ್ದಾರೆ. ನನ್ನ ರಿಲೇಟಿವ್ಗಳಿಗೆಲ್ಲಾ ಎಸ್ಐಟಿ ನೋಟಿಸ್ ಕೊಟ್ಟಿದ್ದಾರೆ. ಆದ್ರೆ ಆರೋಪಿಯನ್ನು ಕೊವಿಡ್ ಪೇಷಂಟ್ ಅಂತ ಬಿಟ್ಟಿದ್ದಾರೆ. ಕೂಡಲೇ ಆರೋಪಿ ರಮೇಶ್ನನ್ನು ಎಸ್ಐಟಿ ವಿಚಾರಣೆ ನಡೆಸಲಿ. ರಮೇಶ್ ಕುಟುಂಬಕ್ಕೂ ನೋಟಿಸ್ ನೀಡಿ ವಿಚಾರಣೆ ನಡೆಸಲಿ ಎಂದು ಇಂದು ರಿಲೀಸ್ ಮಾಡಿದ ವಿಡಿಯೋದಲ್ಲಿ ಸಿಡಿ ಲೇಡಿ SIT ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
The woman in the CD case released a fresh video on Monday stating j abide with my words and I wasn't honey trapped.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm