ಬ್ರೇಕಿಂಗ್ ನ್ಯೂಸ್
08-04-21 08:11 pm Headline Karnataka News Network ಕರ್ನಾಟಕ
ಮೂಲ್ಕಿ, ಎ.8: ರೌಡಿ ಶೀಟರ್ ಆರೋಪಿಗೆ ವಿಚಾರಣೆಗೆ ಬರುವಂತೆ ನೋಟೀಸ್ ನೀಡಲು ತೆರಳಿದ್ದ ಎಎಸ್ಐ ಮೇಲೆ ತಲವಾರು ಬೀಸಿ ಹಲ್ಲೆ ನಡೆಸಿದ ಘಟನೆ ಕಿನ್ನಿಗೋಳಿ ಬಳಿಯ ಲಿಂಗಪ್ಪಯ್ಯಕಾಡಿನಲ್ಲಿ ನಡೆದಿದೆ.

ಪ್ರಕರಣ ಸಂಬಂಧಿಸಿ ರೌಡಿಶೀಟರ್ ಆಗಿರುವ ಲಿಂಗಪ್ಪಯ್ಯ ಕಾಡು ನಿವಾಸಿ ಅನ್ಸಾರ್ ನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಅನ್ಸಾರ್ ಮತ್ತು ಆತನ ತಂದೆ ಸಾದಿಕ್ ನವೆಂಬರ್ ನಲ್ಲಿ ಮೂಕ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದು ಈ ಬಗ್ಗೆ ವಿಚಾರಣೆಗೆ ಬರುವಂತೆ ಪೊಲೀಸರು ಕರೆದಿದ್ದರೂ, ಠಾಣೆಗೆ ಬಂದಿರಲಿಲ್ಲ. ಈ ಬಗ್ಗೆ 41 ಸಿಆರ್ ಪಿಸಿ ಪ್ರಕಾರ, ಆರೋಪಿಗೆ ಸ್ಟೇಶನ್ ನೋಟೀಸ್ ನೀಡಿ, ವಿಚಾರಣೆಗೆ ಕರೆಯಲೆಂದು ಮೂಲ್ಕಿ ಎಎಸ್ಐ ಅಶೋಕ್ ಮತ್ತು ಸಿಬಂದಿ ಸುರೇಶ್ ಲಿಂಗಪ್ಪಯ್ಯ ಕಾಡಿಗೆ ತೆರಳಿದ್ದರು. ಪೊಲೀಸರು ಬಂದಿದ್ದನ್ನು ನೋಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ತನ್ನ ಮನೆಗೆ ತೆರಳಿ ಅವಿತುಕೊಂಡಿದ್ದ.
![]()
ಪೊಲೀಸ್ ಸಿಬಂದಿ ಅಲ್ಲಿಗೆ ತೆರಳಿದಾಗ, ಮನೆಗೆ ಬಾಗಿಲು ಹಾಕಿ ಒಳಗೆ ಕುಳಿತಿದ್ದನ್ನು ತಿಳಿದು ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿತ್ತು. ಬಳಿಕ ಪೊಲೀಸರು ಬಾಗಿಲು ದೂಡಿ, ಒಳಕ್ಕೆ ಹೋಗುತ್ತಿದ್ದಂತೆ ಒಳಭಾಗದಲ್ಲಿದ್ದ ಅನ್ಸಾರ್ ತಲವಾರು ಬೀಸಿದ್ದಾನೆ. ಈ ವೇಳೆ, ಅಶೋಕ್ ಮತ್ತು ಸತೀಶ್ ಎಂಬ ಇನ್ನೊಬ್ಬ ಸಿಬಂದಿಯ ಕೈಗೆ ಗಾಯವಾಗಿದೆ. ಕೂಡಲೇ ಪೊಲೀಸರು ಅನ್ಸಾರ್ ನನ್ನು ಹಿಡಿದು ಬಂಧಿಸಿದ್ದಾರೆ. ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ಪೊಲೀಸರು ಬಳಿಕ ಅಲ್ಲಿಂದ ತೆರಳಿದ್ದರು. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಎಎಸ್ಐ ಅಶೋಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಇಂದು ಬಿಡುಗಡೆಯಾಗಿದ್ದಾರೆ.

ರೌಡಿ ಅನ್ಸಾರ್ ಮತ್ತು ಆತನಿಗೆ ಸಹಕರಿಸಿದ ಆರೋಪದಲ್ಲಿ ತಂದೆ ಸಾದಿಕ್, ತಾಯಿ ಜುಬೈದಾ, ಇನ್ನೊಬ್ಬ ಮಹಿಳೆ ಮಮ್ತಾಜ್ ವಿರುದ್ಧ ಎಎಸ್ಐ ಅಶೋಕ್ ದೂರಿನಂತೆ ಮೂಲ್ಕಿ ಠಾಣೆಯಲ್ಲಿ ಕೊಲೆಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಅನ್ಸಾರ್ ಮೂಲ್ಕಿ ಠಾಣೆ ವ್ಯಾಪ್ತಿಯಲ್ಲಿ ರೌಡಿಯಾಗಿದ್ದು, ಕಳೆದ ಅಕ್ಟೋಬರ್ ನಲ್ಲಿ ಲಿಂಗಪ್ಪಯ್ಯ ಕಾಡಿನಲ್ಲಿ ಮನೆಯೊಂದಕ್ಕೆ ನುಗ್ಗಿ ದರೋಡೆಗೆ ಯತ್ನ ನಡೆಸಿದ ಬಗ್ಗೆ ದೂರು ದಾಖಲಾಗಿತ್ತು. ಆನಂತರ ನವೆಂಬರ್ ನಲ್ಲಿ ತಂದೆ ಮಗ ಸೇರಿ ಒಬ್ಬ ಬಡಪಾಯಿಗೆ ಹಲ್ಲೆಗೈದಿದ್ದ ಬಗ್ಗೆ ದೂರು ದಾಖಲಾಗಿತ್ತು. ಐಕಳದಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣದಲ್ಲಿಯೂ ಅನ್ಸಾರ್ ಹೆಸರು ಕೇಳಿಬಂದಿತ್ತು. ಆದರೆ, ಸರಣಿಯಂತೆ ಪ್ರಕರಣ ದಾಖಲಾಗಿದ್ದರೂ ಅನ್ಸಾರ್ ಪೊಲೀಸರ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ.
Police Assistant Sub Inspector who went to service notice was attacked with the sword by rowdy shetter in Mulki. The arrested has been identified as Ansar.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 10:45 pm
HK News Staffer
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm